ಮುಖ್ಯ ಸುದ್ದಿ
VVS DAM: ವಿವಿ ಸಾಗರ ಭರ್ತಿಗೆ ಇನ್ನು 3 ಅಡಿ ಮಾತ್ರ ಬಾಕಿ | 126 ಅಡಿ ದಾಟಿದ ಜಲಾಶಯ
CHITRADURGA NEWS | 25 OCTOBER 2024
ಚಿತ್ರದುರ್ಗ: ರಾಜ್ಯದ ಬೇರೆ ಬೇರೆ ಜಲಾಶಯಗಳು ಭರ್ತಿಯಾಗಿ ಈಗಾಗಲೇ ಕ್ರಸ್ಟ್ ಗೇಟ್ ಮೂಲಕ ನೀರು ಹೊರಬಿಡಲಾಗುತ್ತಿದೆ.
ಆದರೆ, ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿರುವ ವಾಣಿವಿಲಾಸ ಸಾಗರ ಜಲಾಶಯ (VVS DAM) ಮಾತ್ರ ಇನ್ನೂ ಭರ್ತಿಯಾಗುವ ದಿನಗಣನೆ ಮಾಡುತ್ತಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಒಂದೇ ದಿನ 1 ಟಿಎಂಸಿ ನೀರು | ಈ ವರ್ಷ ಕೋಡಿ ಪಕ್ಕಾ
ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಈ ವರ್ಷವೂ ಜಲಾಶಯ ಭರ್ತಿಯಾಗುವ ಸಾಧ್ಯತೆಗಳಿವೆ.
30 ಟಿಎಂಸಿ ಸಾಮಥ್ರ್ಯದ ವಿವಿ ಸಾಗರ ಜಲಾಶಯದಲ್ಲಿ ಈಗಾಗಲೇ 27.15 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಗೆ ಇನ್ನು 3 ಟಿಎಂಸಿ ನೀರು ಬೇಕಾಗಿದೆ.
ಇದನ್ನೂ ಓದಿ: ಮಾಡದಕೆರೆ ಮತ್ತೋಡು ಹೋಬಳಿಗಳಿಗೆ ವಿವಿ ಸಾಗರದ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ
130 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ ಅ.25ಕ್ಕೆ 126.10 ಅಡಿವರೆಗೆ ನೀರು ಹರಿದು ಬಂದಿದೆ. ಅ.24 ರಂದು ಭಾರೀ ಪ್ರಮಾಣದ ನೀರು ಜಲಾಶಯಕ್ಕೆ ಬಂದಿತ್ತು. ಅ.25 ರಂದು 4852 ಕ್ಯೂಸೆಕ್ ನೀರು ಹರಿದು ಬಂದಿದೆ.
ಸ್ವಾತಿ ಮಳೆ ಕೈ ಹಿಡಿದು ಸರಿಯಾಗಿ ಸುರಿದರೆ ಮುಂದಿನ 15 ದಿನಗಳಲ್ಲಿ ಜಲಾಶಯದ ಕೋಡಿಯಲ್ಲಿ ನೀರು ಹರಿಯಲಿದೆ.