Connect with us

    Vani Vilasa Sagar: ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು | ಶುರುವಾಯ್ತು ಕೌಂಟ್‌ಡೌನ್‌

    ಭದ್ರಾ ಮೇಲ್ದಂಡೆ ಯೋಜನೆ

    ಮುಖ್ಯ ಸುದ್ದಿ

    Vani Vilasa Sagar: ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು | ಶುರುವಾಯ್ತು ಕೌಂಟ್‌ಡೌನ್‌

    CHITRADURGA NEWS | 30 JULY 2024

    ಚಿತ್ರದುರ್ಗ: ಭದ್ರಾ ಜಲಾಶಯದಿಂದ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬುಧವಾರ (ಜುಲೈ 31) ರಿಂದ ನಿತ್ಯ 700 ಕ್ಯೂಸೆಕ್‌ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

    ಇಲ್ಲಿನ ಭದ್ರ ಮೇಲ್ದಂಡೆ ಯೋಜನಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭದ್ರಾ ಜಲಾಶಯದಿಂದ ಮುಂದಿನ ಮೂರ್ನಾಲ್ಕು ತಿಂಗಳ ಕಾಲ ನೀರು ಹರಿಯಲಿದೆ. ವಿವಿ ಸಾಗರಕ್ಕೆ ಇನ್ನೂ 16 ಟಿಎಂಸಿ ನೀರು ತುಂಬಿಸಲು ಸಾಧ್ಯ ಇರುವುದರಿಂದ ನೀರು ಸಾಕಷ್ಟು ದಿನ ಹರಿಯಲಿದೆ’ ಎಂದರು.

    ಇದನ್ನೂ ಓದಿ: ಹತ್ತು ವರ್ಷದ ಬಳಿಕ ವ್ಯಕ್ತಿ ಮೇಲೆ ಕರಡಿ ದಾಳಿ | ಕೆರೆಯಂಗಳದಲ್ಲಿ ಘಟನೆ

    ‘ಭದ್ರಾ ಜಲಾಶಯದಿಂದ ಜಿಲ್ಲೆಗೆ 12.5 ಟಿಎಂಸಿ ನೀರು ಹಂಚಿಕೆ ಆಗಿದೆ. ಅದರಲ್ಲಿ ವಿವಿ ಸಾಗರಕ್ಕೆ 2 ಟಿಎಂಸಿ ಇದೆ. ಅಷ್ಟೂ ನೀರನ್ನೂ ಹರಿಸಬಹುದು’ ಎಂದು ತಿಳಿಸಿದರು.

    ‘ಎತ್ತಿನಹೊಳೆ ಯೋಜನೆಯಿಂದಲೂ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತದೆ. ಈ‌ ನೀರು ಹರಿಸಲು ಬೇರೆಡೆ ಅವಕಾಶ ಇಲ್ಲದ‌ ಕಾರಣ ವಿವಿ ಸಾಗರಕ್ಕೆ ಹರಿಸಲಾಗುತ್ತದೆ’ ಎಂದರು.

    d.sudhakar

    ಸಚಿವ ಡಿ.ಸುಧಾಕರ್

    ‘2013 ರಿಂದ 2018 ರವರೆಗಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾಮಗಾರಿ ವೇಗವಾಗಿ ಸಾಗಿತು. ಆದರೆ ಇದೀಗ ಕೇಂದ್ರ ಸರ್ಕಾರಕ್ಕೆ‌ ಅನೇಕ‌‌ ಬಾರಿ ಮನವಿ ಮಾಡಿದರು ಪ್ರಯೋಜನ ಆಗಿಲ್ಲ. ಯಾವುದೇ ತಾಂತ್ರಿಕ ತೊಂದರೆ ಇಲ್ಲದಿದ್ದರೂ ಅನುದಾನ ಮಂಜೂರಾಗಿಲ್ಲ. ರಾಷ್ಟ್ರೀಯ ಯೋಜನೆ ಕಷ್ಟಸಾಧ್ಯ ಎಂದಾಗ 2023 ರಲ್ಲಿ ಪಿಎಂಕೆಎಸ್‌ವೈ ಯೋಜನೆ ಅಡಿಯಲ್ಲಾದರೂ ಅನುದಾನ ಕೊಡಲು ಮನವಿ ಮಾಡಲಾಗಿತ್ತು’ ಎಂದು ತಿಳಿಸಿದರು.

    ಇದನ್ನೂ ಓದಿ: ವೇದಾವತಿ ನದಿ ಹರಿಯುವ ದೃಶ್ಯ ನಯನ ಮನೋಹರ

    ‘ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ರಾಜ್ಯ ಬಜೆಟ್ ನಲ್ಲಿ 1,500 ಕೋಟಿ ಮೀಸಲಿಟ್ಟಿದ್ದೇವೆ. ಕೇಂದ್ರ ಕೂಡಾ ಸ್ಪಂದಿಸಬೇಕು. ಕೇಂದ್ರದ ಅನುದಾನಕ್ಕೆ ಪ್ರತ್ಯೇಕ ಖಾತೆ ತೆರೆಯುವ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top