Connect with us

    ವಚನ ಸಾಹಿತ್ಯ ಸಂರಕ್ಷಿಸಿದವರು ಡಾ.ಫ.ಗು.ಹಳಕಟ್ಟಿ | ಬಿ.ಟಿ.ಕುಮಾರಸ್ವಾಮಿ

    ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

    ಮುಖ್ಯ ಸುದ್ದಿ

    ವಚನ ಸಾಹಿತ್ಯ ಸಂರಕ್ಷಿಸಿದವರು ಡಾ.ಫ.ಗು.ಹಳಕಟ್ಟಿ | ಬಿ.ಟಿ.ಕುಮಾರಸ್ವಾಮಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 JULY 2024

    ಚಿತ್ರದುರ್ಗ: ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟಿಯವರ ಸಾಹಿತ್ಯ ಸೇವೆ ಅವಿಸ್ಮರಣೀಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

    ಇದನ್ನೂ ಓದಿ: IMA AWARD; ಚಿತ್ರದುರ್ಗ ಮೂಲದ ವೈದ್ಯ ಡಾ.ಜಿ.ವಿ.ಬಸವಾಜ್ ಅವರಿಗೆ ಅತ್ಯುನ್ನತ ಪ್ರಶಸ್ತಿ

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

    ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಡಾ.ಫ.ಗು.ಹಳಕಟ್ಟಿಯವರು ಹಾಗೂ ಅವರ ತಂಡದ ಮಹಾತ್ಕಾರ್ಯದಿಂದ ಸಾಧ್ಯವಾಗಿದೆ. ವಚನ ಸಾಹಿತ್ಯದ ಮೂಲಪ್ರತಿಗಳಾದ ತಾಳೆಗರಿಗಳನ್ನು, ತಾಮ್ರಶಾಸನಗಳನ್ನು, ವಚನಗಂಟುಗಳನ್ನು ಊರೂರಿಗೆ ತೆರಳಿ, ಮನೆ ಮನೆ ಹುಡುಕಿ, ಸಂಗ್ರಹಿಸಿದ ಡಾ.ಫ.ಗು.ಹಳಕಟ್ಟಿಯವರು ಗ್ರಂಥರೂಪದಲ್ಲಿ ಪ್ರಕಟಿಸಿ, ಮೂರ್ತ ಸ್ವರೂಪ ನೀಡಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

    ಇದನ್ನೂ ಓದಿ: AYYAPPA SWAMY; ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಒಂದು ವಾರ ಧಾರ್ಮಿಕ ಕಾರ್ಯಕ್ರಮಗಳು | ಭಕ್ತಿ ಕುಸುಮಾಂಜಲಿ

    ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಸಂತೋಷ ಪವಾರ್ ಉಪನ್ಯಾಸ ನೀಡಿ, ನಮ್ಮ ನಾಡಿನ ಭವ್ಯ ಪರಂಪರೆ ಅನುಪಮ ಸಂಸ್ಕøತಿ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ತಮ್ಮ ತ್ಯಾಗ, ಪರಿಶ್ರಮದಿಂದ ಹೊಸ ಇತಿಹಾಸ ಬರೆದರು. 12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್ ಚೈತನ್ಯವನ್ನು ತಂದುಕೊಟ್ಟ ಕೀರ್ತಿ ಡಾ. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

    ಬಸವಾದಿ ಶರಣರ ವಚನಗಳನ್ನು ಬೆಳಕಿಗೆ ತಂದವರು, ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿಯಾಗಿ ಸಾಧಿಸಿದ ಹಳಕಟ್ಟಿಯವರು ಒಂದು ವ್ಯಕ್ತಿಯಾಗಿರದೇ ಒಂದು ಶಕ್ತಿಯಾಗಿ ಕಂಡುಬರುತ್ತಾರೆ ಎಂದು ಅಭಿಪ್ರಾಯಪಟ್ಟರು.

    ಗಮನ ಸೆಳೆದ ಕವಿಗೋಷ್ಠಿ: ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆ ಅಂಗವಾಗಿ ಡಾ.ಫ.ಗು.ಹಳಕಟ್ಟಿಯವರು ಬದುಕು, ಬರಹ ಹಾಗೂ ವಚನ ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಗಮನ ಸೆಳೆಯಿತು.

    ಇದನ್ನೂ ಓದಿ: MADAKARI NAYAKA ; ದುರ್ಗದಲ್ಲಿ ಮದಕರಿ ನಾಯಕರ ಪಟ್ಟಾಭಿಷೇಕ | ಭಾಗವಹಿಸಿದ್ದ ಗಣ್ಯರು ಹೇಳಿದ್ದೇನು..?

    ಎಸ್.ಗಂಗಾಧರಪ್ಪ, ಮೀರಾ ನಾಡಿಗ್, ನಿರ್ಮಲ ಮರಡಿಹಳ್ಳಿ, ಎಂ.ಎಸ್.ಸೌಮ್ಯ, ರಾಜೇಶ್ವರಿ ಶ್ರೀಧರ್, ಜಬೀವುಲ್ಲಾ, ದೀಪಿಕಾ ಬಾಬು, ಕೆ.ಪೂರ್ಣಿಮಾ ಶಾಸ್ತ್ರಿ, ಕ್ಯಾಗಿಗುಂಟೆ ಶಿವಣ್ಣ, ಬಬ್ಬೂರು ತಿಪ್ಪೀರನಾಯಕ, ಡಾ.ಉಮೇಶ್ ಬಾಬು ಮಠದ್, ಸಿ.ಬಿ.ಶೈಲಾ ಜಯಕುಮಾರ್, ಶಬ್ರಿನಾ ಅಹಮದ್, ಬಹಬೂಬಿ, ಕೆ.ಬಿ.ತಿಪ್ಪಮ್ಮ, ಕಾದಂಬರಿ, ಗಿರೀಶಾಚಾರ, ಭುವನೇಶ್ವರಿ, ಲೀಲಾವತಿ ಯುವರಾಜ, ಸಂಕಲ್ಪ ಸೇರಿದಂತೆ ಸುಮಾರು 21ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.

    ಇದೇ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

    ಇದನ್ನೂ ಓದಿ: ಕರ್ನಾಟಕ ರಾಜ್ಯ ನದಾಫ, ಪಿಂಜಾರ ಸಂಘದ ಪದಾಧಿಕಾರಿಗಳ ಚುನಾವಣೆ | ಚುನಾಯಿತರ ಪಟ್ಟಿ ಘೋಷಣೆ 

    ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‍ನ ಕಾರ್ಯದರ್ಶಿ ಷಣ್ಮುಖಯ್ಯ, ನೇಕಾರರ ಒಕ್ಕೂಟದ ಅಧ್ಯಕ್ಷ ಗೋವಿಂದಪ್ಪ, ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಬಸವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಪಯ್ಯ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top