ಮುಖ್ಯ ಸುದ್ದಿ
Vaccines: ಲಸಿಕೆಗಳು ಮಕ್ಕಳ ಮರಣ ತಪ್ಪಿಸುತ್ತವೆ | ಡಾ.ಡಿ.ಎಂ.ಅಭಿನವ್
CHITRADURGA NEWS | 11 NOVEMBER 2024
ಚಿತ್ರದುರ್ಗ: ಲಸಿಕೆಗಳು(Vaccines)ಮಕ್ಕಳ ಮರಣ ತಪ್ಪಿಸುತ್ತವೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್
ನಗರದ ಮಠದ ಕುರುಬರಹಟ್ಟಿ ಮತ್ತು ಮೆದೇಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಸೋಮವಾರ ಗ್ರಾಮ ಆರೋಗ್ಯ ಯೋಜನೆ, ತರಬೇತಿ ಕಾರ್ಯಾಗಾರದಲ್ಲಿ ವಿಶ್ವ ಲಸಿಕಾ ದಿನ, ಅಯೋಡಿನ್ ಯುಕ್ತ ಉಪ್ಪಿನ ಉಪಯುಕ್ತೆ ಬಗ್ಗೆ ಮಾಹಿತಿ ಶಿಕ್ಷಣ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷೀಪ್ರನಿಗಾವಣ ತಂಡ ರಚನೆ ಮಾಡಿ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ತಾಯಿ ಮರಣ ಶಿಶುಮರಣ ಅಪೌಷ್ಟಿಕತೆ ಹೋಗಲಾಡಿಸುವ ಕುರಿತು ಗ್ರಾಮಮಟ್ಟದಲ್ಲಿ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಕಾರ್ಯಪಡೆ ರಚಿಸಿ ಕ್ರಿಯಾ ಯೋಜನೆಯನ್ನು ತಯಾರು ಮಾಡಿ ಪ್ರತಿ ವಾರ್ಡ್‍ಗಳಲ್ಲಿಯೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ, ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್ ಇತರೆ ಜೀವನಶೈಲಿ ರೋಗಗಳನ್ನ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಿ, ನಿಮ್ಮ ಮಕ್ಕಳಿಗೆ ತಪ್ಪದೇ 12 ಮಾರಕ ರೋಗಗಳ ವಿರುದ್ಧ ಲಸಿಕೆಯನ್ನು ಕೊಡಿಸಿ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: Kannada Novel: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ | ಹಬ್ಬಿದಾ ಮಲೆಮಧ್ಯದೊಳಗೆ
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ನಿಮ್ಮ ಮಕ್ಕಳಿಗೆ ಎರಡು ವರ್ಷದಲ್ಲಿ ಏಳು ಬಾರಿ ಲಸಿಕಾ ಕೇಂದ್ರಗಳಿಗೆ ಕರೆತನ್ನಿ. 12 ಮಾರಕ ರೋಗಗಳ ವಿರುದ್ಧ ಲಸಿಕೆಯನ್ನು ಕೊಡಿಸಿ, ಈ ನಿಟ್ಟಿನಲ್ಲಿ ಗ್ರಾಮ ನಿಗಾವಣ ತಂಡ ಸಕ್ರಿಯವಾಗಿ ಕಾರ್ಯವಹಿಸಬೇಕಾಗಿರುತ್ತದೆ ಎಂದರು.
ಅಯೋಡಿನ್ ಯುಕ್ತ ಉಪ್ಪನ್ನು ಬಳಕೆ ಮಾಡಿ ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶ ಸರ್ಕಾರ ಇದರ ಕೊರತೆಯನ್ನು ಗಮನಿಸಿ ಉಪ್ಪಿನಲ್ಲಿ ಅಯೋಡಿನ್ ಅಂಶವನ್ನು ಬೆರೆಸಿ ಸಾರ್ವಜನಿಕರಿಗೆ ಸಿಗುವಂತೆ ಮಾಡಿದೆ. ಅನ್ನ ಸಾಂಬಾರ್ ಕುದಿಯುವಾಗ ಉಪ್ಪನ್ನ ಹಾಕಬೇಡಿ.
ಸ್ಟೌವ್‍ಅನ್ನು ಆಫ್ ಮಾಡುವ ಸಂದರ್ಭದಲ್ಲಿ ಉಪ್ಪನ್ನು ಬಳಕೆ ಮಾಡಿ, ಮುಚ್ಚಳ ಮುಚ್ಚಿ, ಅಂಗಡಿಯಿಂದ ತರಿಸಿದ ಅಯೋಡಿನ್ ಯುಕ್ತ ಉಪ್ಪನ್ನು ಒಂದು ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಮುಚ್ಚಿಡಿ. ಅಯೋಡಿನ್ ಅಂಶ ತೆರೆದಿಟ್ಟರೆ ಆವಿಯಾಗುತ್ತದೆ. ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರಬಹುದು. ಬುದ್ಧಿಮಾಂದ್ಯ ಮಕ್ಕಳ ಜನನವಾಗಬಹುದು ಹಾಗಾಗಿ ಅಯೋಡಿನ್‍ಯುಕ್ತ ಉಪ್ಪನ್ನೇ ಬಳಕೆ ಮಾಡಿ ಎಂದರು.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀರಮ್ಮ, ಸದಸ್ಯರಾದ ಹನುಮಂತಪ್ಪ, ನಾಗರತ್ನಮ್ಮ, ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ-2 ಚನ್ನವೀರಪ್ಪ, ಆರೋಗ್ಯ ಸುರಕ್ಷತಾ ಅಧಿಕಾರಿ ಶಿಲ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಸಮುದಾಯ ಆರೋಗ್ಯ ಅಧಿಕಾರಿ ಜಯಲತಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.