ಮುಖ್ಯ ಸುದ್ದಿ
ಬಸ್ ನಿಲ್ದಾಣದಲ್ಲಿ ಯುಗಾದಿ ಚಂದ್ರ ದರ್ಶನ | ವಿಶೇಷ ಕ್ಷಣಕ್ಕೆ ಸಾಕ್ಷಿ
Published on
CHITRADURGA NEWS | 10 APRIL 2024
ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಮುಖ ಘಟ್ಟ ಚಂದ್ರ ದರ್ಶನ. ವಿವಿಧ ಊರುಗಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಿತ್ರದುರ್ಗ ಬಸ್ ನಿಲ್ದಾಣದಲ್ಲಿಯೇ ಚಂದ್ರ ದರ್ಶನ ಮಾಡಿದರು.
ನಾನಾ ಕಾರಣದಿಂದ ಪ್ರಯಾಣದಲ್ಲಿ ತೊಡಗಿರುವ ಜನರು ತಮ್ಮ ಊರುಗಳಿಗೆ ತೆರಳುವ ಮುನ್ನವೇ, ನಗರದ ಬಸ್ ನಿಲ್ದಾಣದಲ್ಲಿ, ಸೂರ್ಯಾಸ್ತದ ಸಮಯವಾದ್ದರಿಂದ ಪಶ್ಚಿಮದ ಆಗಸದ ಕಡೆ ಮುಖಮಾಡಿ ಚಂದ್ರನನ್ನು ಹುಡುಕತೊಡಗಿದರು.
ಕ್ಲಿಕ್ ಮಾಡಿ ಓದಿ: ಯುಗಾದಿಯಲ್ಲಿ 4 ರಾಶಿಗೆ ರಾಜಯೋಗ | ಹಬ್ಬದ ಸಂಭ್ರಮದಲ್ಲಿ ಜೊತೆಯಾಗಲಿದೆ ಅದೃಷ್ಟ
ಕೆಂಪು ವರ್ಣದ ಆಗಸ, ತೆಳುವಾದ ಮೊಡಗಳ ಮಧ್ಯ ಬಿದಿಗೆ ಚಂದ್ರಮ ಕಂಡ ಕ್ಷಣ, ಜನರು ಸಂತಸದಿಂದ ಪರಸ್ಪರ ಯುಗಾದಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ರಂಜಾನ್ ರೋಜಾ ಅಂತ್ಯಗೊಳಿಸಿ ರಂಜಾನ್ ಹಬ್ಬದ ಸಿದ್ದತೆಯಲ್ಲಿ ಇದ್ದ ಮುಸ್ಲಿಂ ಭಾಂಧವರು ಸಹ ಚಂದ್ರನ ವೀಕ್ಷಣೆ ಮಾಡಿದರು.
Continue Reading
Related Topics:Bus Stand, Chandra Darshan, Sakshi, Special Moment, Ugadi, ಚಂದ್ರ ದರ್ಶನ, ಬಸ್ ನಿಲ್ದಾಣ, ಯುಗಾದಿ, ವಿಶೇಷ ಕ್ಷಣ, ಸಾಕ್ಷಿ
Click to comment