ಮುಖ್ಯ ಸುದ್ದಿ
ಮುರುಘಾಮಠದಿಂದ ಸಸಿ ನೆಡುವ ಸಪ್ತಾಹ | ನಾಳೆಯಿಂದ ಚಾಲನೆ
CHITRADURGA NEWS | 29 MAY 2024
ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಮೇ 30ರಿಂದ ಜೂ.5 ರವರೆಗೆ ಸಸಿ ನೆಡುವ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಬೆಳಗ್ಗೆ 7 ರಿಂದ 9ರವರೆಗೆ ಕಾರ್ಯಕ್ರಮ ನಡೆಯಲಿದೆ 30ರಂದು ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ, ಎಸ್‌ಜೆಎಂ ಪಾಲಿಟೆಕ್ನಿಕ್, ಎಸ್‌ಜೆಎಂ ನರ್ಸಿಂಗ್ ಕಾಲೇಜು ಆವರಣದಲ್ಲಿ ಸಸಿ ನೆಡಲಾಗುತ್ತದೆ.
31ರಂದು ಚಂದ್ರವಳ್ಳಿ ಪ್ರದೇಶ ಹಾಗೂ ಎಸ್‌ಜೆಎಂ ಕಾಲೇಜು ಆವರಣ, ಜೂನ್ 1ರಂದು ಶ್ರೀ ಜಯವಿಭವ ಸ್ವಾಮೀಜಿಯ ಕಲ್ಪವೃಕ್ಷ ವನ, ಬೃಹನ್ಮಠ ಪ್ರೌಢಶಾಲೆ ಮತ್ತು ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣ, 2ರಂದು ಸೀಬಾರದ ಶ್ರೀ ಗುರುಪಾದ ಸ್ವಾಮೀಜಿ ಸ್ಮಾರಕ, ದನಗಳ ಜಾತ್ರೆ ಪ್ರದೇಶ ಹಾಗೂ ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆ ಆವರಣ.
ಕ್ಲಿಕ್ ಮಾಡಿ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಕೀಲು, ಮೂಳೆ ಆಪರೇಷನ್ ಇನ್ ಪ್ಲಾಂಟ್ಸ್ ಉಚಿತ
3ರಂದು ಬಸವೇಶ್ವರ ಆಸ್ಪತ್ರೆ ಆವರಣ, ಎಸ್‌ಜೆಎಂ ಉದ್ಯೋಗಸ್ತ ಮಹಿಳೆಯರ ವಸತಿ ನಿಲಯ ಹಾಗೂ ಎಸ್‌ಜೆಎಂ ದಂತ ಮಹಾವಿದ್ಯಾಲಯದ ವಿದ್ಯಾರ್ಥಿನಿಲಯ, 4ರಂದು ಸೀಬಾರದ ಕೇತೇಶ್ವರ ಮಹಾಮಠ ಹಾಗು 5ರಂದು ಶ್ರೀಮಠದ ಮುರುಘಾವನದಲ್ಲಿ ಸಸಿ ನೆಡಲಾಗುತ್ತದೆ ಎಂದು ಮಠದ ಪ್ರಕಟಣೆ ತಿಳಿಸಿದೆ.