ಮುಖ್ಯ ಸುದ್ದಿ
ನಾಳೆ ಭೀಮ ಹೆಜ್ಜೆ 100 ರ ಸಂಭ್ರಮ | MLC ಕೆ.ಎಸ್.ನವೀನ್

CHITRADURGA NEWS | 10 APRIL 2025
ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರು 1925ರ ಏಪ್ರಿಲ್ 10 ಮತ್ತು 11ರಂದು ದಲಿತರ ಉದ್ಧಾರಕ್ಕಾಗಿ ಹಮ್ಮಿ ಕೊಂಡಿದ್ದ ಬಹಿಷ್ಕೃತ ಹಿತ ಕಾರ್ಯಕಾರಿಣಿ ಸಭೆಯ ನೂರು ವರ್ಷದ ಸವಿ ನೆನಪಿಗಾಗಿ ಬಿಜೆಪಿ ವತಿಯಿಂದ ಭೀಮನ ಹೆಜ್ಜೆ ನೂರರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂಬೇಡ್ಕರ್ ರಥಯಾತ್ರೆ ಏ.11 ರಿಂದ 15ರವರೆಗೆ ರಾಜ್ಯದಲ್ಲಿ ಸಂಚಾರ ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದ್ದಾರೆ.
Also Read: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದಲಿತರ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದ ನಿಪ್ಪಾಣಿಯಲ್ಲಿ 1925ರಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು ಈ ಕಾರ್ಯಕ್ರಮದ ನಿಮಿತ್ತ ಕರ್ನಾಟಕದ 10 ಜಿಲ್ಲೆಗಳಲ್ಲಿ ಅಂಬೇಡ್ಕರ್ ರವರು ಸಂಚಾರ ನಡೆಸಿದರು.
ಇದರ ಸವಿ ನೆನಪಿಗಾಗಿ ಬಿಜೆಪಿ ಪಕ್ಷದ ವತಿಯಿಂದ ಅಂಬೇಡ್ಕರ್ ಅವರ ಸ್ಮಾರಕಗಳನ್ನು ನಿರ್ಮಿಸಿ ಅವರ ತತ್ವಗಳನ್ನು ಇಂದಿನ ಯುವ ಪೀಳಿಗೆಗೆ ಸಾರಲು ತೀರ್ಮಾನಿಸಿದೆ.
ಇದೇ ಏ.11ರಂದು ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಹಿರಿಯೂರಿನ ಜಾವನಗೊಂಡನಹಳ್ಳಿಯಲ್ಲಿ ರಥಯಾತ್ರೆ ಆಗಮಿಸಲಿದ್ದು, ಬಿಜೆಪಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು.
Also Read: ಎಳನೀರು ಅಥವಾ ನಿಂಬೆ ನೀರು? ಈ ಬೇಸಿಗೆಯಲ್ಲಿ ನಿಮಗೆ ಯಾವುದು ಉತ್ತಮ?
ಹಿರಿಯೂರು, ಚಿತ್ರದುರ್ಗ, ಭರಮಸಾಗರದಲ್ಲಿ ಸಭೆಗಳನ್ನು ಆಯೋಜಿಸಿದ್ದು, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅವಮಾನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಬಿಜೆಪಿ ಪಕ್ಷವು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಏ.15 ರಂದು ನಿಪ್ಪಾಣಿಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಪರಿಶಿಷ್ಟ ಜಾತಿ, ಪಂಗಡಗಳ ನಾಯಕರಾದ ಎನ್.ಮಹೇಶ್, ಪಿ.ರಾಜೀವ್, ಮುನಿಸ್ವಾಮಿ ರಥಯಾತ್ರೆಯ ನೇತೃತ್ವ ವಹಿಸಿದ್ದಾರೆ.
ಬೈಕ್‍ಗಳಲ್ಲಿ ರ್ಯಾಲಿ ನಡೆಸುವ ಮೂಲಕ ಜಿಲ್ಲೆಗೆ ರಥಯಾತ್ರೆಯನ್ನು ಬರಮಾಡಿಕೊಳ್ಳಲಾಗುವುದು. ಪಕ್ಷದ ಮಾಜಿ ಸಚಿವರು, ಮಾಜಿ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Also Read: ಆರೋಗ್ಯಕರ ಋತುಚಕ್ರಕ್ಕಾಗಿ ಈ ಗಿಡಮೂಲಿಕೆ ಚಹಾ ಕುಡಿಯಿರಿ
ಹಿರಿಯೂರಿನಿಂದ ಸಂಜೆ ಚಿತ್ರದುರ್ಗಕ್ಕೆ ಆಗಮಿಸುವ ರಥಯಾತ್ರೆಯೂ ಚಳ್ಳಕೆರೆ ಗೇಟ್ ನಿಂದ ಮದಕರಿ ವೃತ್ತದ ಮೂಲಕ ಅಂಬೇಡ್ಕರ್ ಪ್ರತಿಮಗೆ ಮಾಲಾರ್ಪಣೆ ಮಾಡಿ ಓನಕೆ ಒಬವ್ವ ವೃತ್ತದಲ್ಲಿ ಸಭೆ ನಡೆಸಲಾಗುವುದು. ಇದರಲ್ಲಿ ರಾಜ್ಯ ಮಟ್ಟದ ಪಕ್ಷದ ನಾಯಕರ ಭಾಗವಹಿಸಲಿದ್ದಾರೆ.
ಬೆಂಗಳೂರಿನ ವಿಧಾನಸೌಧ ಮುಂಭಾಗದಿಂದ ಹೊರಟಿರುವ ರಥಯಾತ್ರೆಯು ನೆಲಮಂಗಲ, ಮಧುಗಿರಿ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ನಿಪ್ಪಾಣಿಯನ್ನು ಏಪ್ರಿಲ್ 15ರಂದು ತಲುಪಲಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಲಕ್ಷಾಂತರ ಜನರನ್ನು ಸೇರಿಸಿ, ಬಾಬಾಸಾಹೇಬ್ ಅಂಬೇಡ್ಕರ್ ಸಮಾವೇಶ ಮಾಡುವ ಮೂಲಕ ಅವರ ವಿಚಾರಧಾರೆ, ಆದರ್ಶಗಳನ್ನು ಇಂದಿನ ಜನಾಂಗಕ್ಕೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
Also Read: ಮದುವೆಯ ದಿನ ವಧು ಅತಿ ಸುಂದರವಾಗಿ ಕಾಣಲು ತ್ವಚೆಗೆ ಉತ್ತಮವಾದ ಈ ಪಾನೀಯ ಕುಡಿಯಿರಿ
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಮುಖಂಡರಾದ ಮೋಹನ್, ರಘುಮೂರ್ತಿ, ವಕ್ತರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಶಂಭು, ರವಿ ಮಹಾಂತಣ್ಣ ಇದ್ದರು.
