ಮುಖ್ಯ ಸುದ್ದಿ
B.Ed ಫಲಿತಾಂಶ | SRS ಕಾಲೇಜಿಗೆ ಮೂರು ರ್ಯಾಂಕ್

CHITRADURGA NEWS | 06 FEBRUARY 2025
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ 2022-23ನೇ ಶೈಕ್ಷಣಿಕ ಸಾಲಿನ ಬಿ.ಇಡಿ.(B,Ed), ವಿಭಾಗದ ಅಂತಿಮ ವರ್ಷದ ರ್ಯಾಂಕ್ ಪಟ್ಟಿ ಪ್ರಕಟವಾಗಿದ್ದು ನಗರದ ಎಸ್.ಆರ್.ಎಸ್. ಶಿಕ್ಷಣ ಮಹಾವಿದ್ಯಾಲಯಕ್ಕೆ ಈ ವರ್ಷವೂ ಮೂರು ರ್ಯಾಂಕ್ ಬಂದಿವೆ.
ಎನ್.ಪಿ.ಭವ್ಯಶ್ರೀ ಶೇ.89.2 ರಷ್ಟು ಅಂಕ ಗಳಿಸಿ ವಿಶ್ವವಿದ್ಯಾನಿಲಯಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ. ನಾಜಿಯಾ ತನ್ಸೀಮ್ ಶೇ.87.8 ರಷ್ಟು ಅಂಕ ಗಳಿಸಿ 8ನೇ ರ್ಯಾಂಪ್ ಪಡೆದರೆ, ಅಂಬಿಕಾ ಶೇ.87.5 ರಷ್ಟು ಅಂಕ ಗಳಿಸ 10ನೇ ರ್ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ: ಮಾ.4 ರಿಂದ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ
ಬಿ.ಇಡಿ., ವಿಭಾಗದ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸತತ 2ನೇ ಬಾರಿಗೆ ಪ್ರಥಮ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ರವಿ ಟಿ.ಎಸ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
