ಕ್ರೈಂ ಸುದ್ದಿ
ಬಂದೂಕಿನಿಂದ ಬಾಲಕ ಸಾವು | ಮೂರು ತಿಂಗಳ ನಂತರ ನಿಗೂಢ ಸಾವಿನ ತನಿಖೆ

CHITRADURGA NEWS | 28 JUNE 2024
ಚಿತ್ರದುರ್ಗ: ಬಂದೂಕಿನ ಗುಂಡು ಹಾರಿ 14 ವರ್ಷದ ಬಾಲಕ ಮೃತಪಟ್ಟ ಪ್ರಕರಣ ತಡವಾಗಿ ಬೆಳೆಕಿಗೆ ಬಂದಿದ್ದು, ಘಟನೆಯ ಮೂರು ತಿಂಗಳ ನಂತರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮೊಳಕಾಲ್ಮೂರು ಪಟ್ಟಣದ ಕೋಟೆ ಬಡಾವಣೆ ನಿವಾಸಿ 14 ವರ್ಷದ ಬಾಲಕ ಮಹೇಶ್ ಪ್ರಾಣಿ, ಪಕ್ಷಿಗಳ ಭೇಟೆಗಾಗಿ ಸ್ನೇಹಿತರ ಜೊತೆಗೆ ತೆರಳಿದ್ದಾಗ ಬಂದೂಕಿನಿಂದ ಗುಂಡು ಹಾರಿ ಮೃತಪಟ್ಟಿದ್ದ.

ಇದನ್ನೂ ಓದಿ: ಆರೋಗ್ಯ ಇಲಾಖೆ | ಲಾರ್ವಾ ಸಮೀಕ್ಷೆಗೆ ಸ್ವಯಂಸೇವಕರ ಆಯ್ಕೆಗೆ ಅರ್ಜಿ ಆಹ್ವಾನ
ಘಟನೆಯ ನಂತರ ಬಾಲಕ ಮಹೇಶನ ಮೃತದೇಹವನ್ನು ರಹಸ್ಯವಾಗಿ ಸುಟ್ಟು ಹಾಕಲಾಗಿತ್ತು.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರಿಗೆ ಖಚಿಯತ ಮಾಹಿತಿ ಲಭ್ಯವಾದ ನಂತರ ಎಫ್‍ಐಆರ್ ದಾಖಲಿಸಿ ತನಿಖೆಗೆ ಆದೇಶಿಸಿದ್ದಾರೆ.
ಮೊಳಕಾಲ್ಮೂರು ಠಾಣೆ ಸಿಪಿಐ ವಸಂತ ಆಸೋಡೆ ಹಾಗೂ ಪಿಎಸ್‍ಐ ಪಾಂಡುರಂಗ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: 4.80 ಕೋಟಿ ವಂಚಿಸಿ ವಿಯೆಟ್ನಾಂ ಸೇರಿದ್ದ ಆರೋಪಿ ಅಂದರ್ | ಕೋಡೆ ರಮಣಯ್ಯನಿಗೆ ಹೆಡೆಮುರಿ ಕಟ್ಟಿದ ಚಿತ್ರದುರ್ಗ ಪೊಲೀಸ್
ಸದರಿ ಪ್ರಕರಣದಲ್ಲಿ ಬಂದೂಕು ಹೊಂದಿದ್ದ ನಾಗರಾಜ ಎಂಬ ಆರೋಪಿ ವಿರುದ್ಧವೂ ದೂರು ದಾಖಲಿಸಿ ಬಂಧಿಸಲಾಗಿದೆ. ಹೊನ್ನೂರು ಸ್ವಾಮಿ ಎಂಬುವವನು ದೇಹವನ್ನು ಸುಟ್ಟು ಹಾಕಿದ ಆರೋಪವಿದೆ.
ಬಾಲಕನ ತಾಯಿ ಮಹಾದೇವಿ ಅವರಿಗೆ, ಮದ್ದು ತುಂಬುವಾಗ ಗುಂಡು ಹಾರಿ ಆಕಸ್ಮಿಕವಾಗಿ ಮಗ ಮಹೇಶ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಕೊನೆಯದಾಗಿ ತಾಯಿಗೆ ಮಗನ ಮುಖ ತೋರಿಸಿ ನಂತರ ಅಲ್ಲಿಂಧ ಕರೆದೊಯ್ದು ಸುಟ್ಟು ಹಾಕಲಾಗಿತ್ತು ಎನ್ನುವ ಮಾಹಿತಿಯಿದೆ.
ಇದನ್ನೂ ಓದಿ: ಸುರಕ್ಷತಾ ನಿಯಮ ಪಾಲಿಸಿ ಗೃಹ ಬಳಕೆ ವಿದ್ಯುತ್ ಅವಘಡ ತಪ್ಪಿಸಿ
ಮೃತನ ತಾಯಿ ಮಹಾದೇವಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗನಿದ್ದ. ಗಂಡ ಇರಲಿಲ್ಲ. ಪುತ್ರನ ಸಾವಿನಿಂದ ವಿಚಲಿತರಾದ ತಾಯಿ ಯಾರ ವಿರುದ್ಧ ದೂರು ಕೊಡುವುದು, ಏನಾಗಿದೆ ಎನ್ನುವುದು ತಿಳಿಯದೆ ಮೂರು ತಿಂಗಳಾದರೂ ಘಟನೆ ಹೊರಗೆ ಬಂದಿರಲಿಲ್ಲ ಎನ್ನಲಾಗಿದೆ.
