ಕ್ರೈಂ ಸುದ್ದಿ
Hiriyuru: ಒಂಟಿ ಮಹಿಳೆ ಮೇಲೆ ಅಟ್ಯಾಕ್ | ಚಿನ್ನದ ಸರ ಕಿತ್ತುಕೊಂಡು ಪರಾರಿ | ಮಹಿಳೆಯ ತಲೆಗೆ ರಾಡ್‍ನಿಂದ ಹಲ್ಲೆ
CHITRADURGA NEWS | 14 DECEMBER 2024
ಹಿರಿಯೂರು: ಜಿಲ್ಲೆಯ ಹಿರಿಯೂರು (Hiriyuru) ಹೊರವಲಯದ ಪಟ್ರೇಹಳ್ಳಿಯಲ್ಲಿ ಜಿಲ್ಲೆಯ ಜನತೆ ಬೆಚ್ಚಿ ಬೀಳುವ ಘಟನೆ ವರದಿಯಾಗಿದೆ.
ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಸಮೀಪದ ತೋಟದಲ್ಲಿ ಜಾನುವಾರು ಮೇಯಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಳ್ಳರು ರಾಡ್‍ನಿಂದ ತಲೆಗೆ ಹಲ್ಲೆ ನಡೆಸ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜಿನಿಂದ ಅರ್ಜಿ ಆಹ್ವಾನ | ಇಂದೇ ಕೊನೆ ದಿನ
ಮಕ್ಕಳನ್ನು ಹಿರಿಯೂರಿನ ರಾಷ್ಟ್ರೀಯ ಅಕಾಡೆಮಿ ಶಾಲೆಗೆ ಕಳಿಸಿದ ನಂತರ ಮಹಿಳೆಯೊಬ್ಬರು ಜಾನುವಾರುಗಳನ್ನು ಹೊಡೆದುಕೊಂಡು ತೋಟಕ್ಕೆ ಹೋಗಿದ್ದಾಗ ಯಾರೋ ದುಷ್ಕರ್ಮಿಗಳು ಹಿಂದಿನಿಂದ ಬಂದು ರಾಡಿನಿಂದ ತಲೆಗೆ ಹೊಡೆದು ಸುಮಾರು 48 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆದಿದೆ.
ಇಲ್ಲಿನ ಶಿವಸ್ವಾಮಿ ಎಂಬುವವರ ಪತ್ನಿ ದೀಪಾ (32)ಹಲ್ಲೆಗೆ ಒಳಗಾಗಿರುವ ಮಹಿಳೆ. ಗಂಭೀರವಾಗಿ ಗಾಯಗೊಂಡಿರುವ ದೀಪಾರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೆÇಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: B.ED ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ದೀಪಾ ಅವರು ಎಂದಿನಂತೆ ನಂದಿಹಳ್ಳಿ ರಸ್ತೆಯಲ್ಲಿರುವ ತಮ್ಮ ತೋಟಕ್ಕೆ ಹಸುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ತೋಟದ ಗೇಟ್ ನ ಬೀಗ ತೆಗೆದು ಹಸುಗಳು ಒಳಹೋದ ನಂತರ ಗೇಟ್ ಹಾಕಿದ್ದಾರೆ. ದುಷ್ಕರ್ಮಿಗಳು ದೀಪಾ ಅವರಿಗಿಂತ ಮುಂಚೆಯೇ ತೋಟಕ್ಕೆ ಹೋಗಿ ಎತ್ತರಕ್ಕೆ ಬೆಳೆದಿರುವ ಹುಲ್ಲಿನಲ್ಲಿ ಅವಿತು ಕುಳಿತಿದ್ದಾರೆ.
ಆನಂತರ ದೀಪಾ ಅವರ ಹಿಂದಿನಿಂದ ಬಂದು ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಿ ಕ್ಷಣ ಮಾತ್ರದಲ್ಲಿ ಸರವನ್ನು ಕಿತ್ತುಕೊಂಡು ಗೇಟ್ ಬದಲು ಜಮೀನಿಗೆ ಹಾಕಿದ್ದ ತಂತಿಬೇಲಿ ಕತ್ತರಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಮತ್ತೆ ಹರಿದ ನೀರು | 15 ದಿನಗಳಲ್ಲೇ ನಿರ್ಮಾಣವಾಯ್ತು ಹೊಸ ಸೇತುವೆ
ಈ ವೇಳೆ ದೀಪಾ ಕಿರುಚಿಕೊಂಡ ಶಬ್ದ ಕೇಳಿ ಪಕ್ಕದ ಜಮೀನಿನಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ಚಾಲಕ ದೀಪಾ ಅವರನ್ನು ನೋಡಿ ಮನೆಯವರಿಗೆ ತಿಳಿಸಿದ್ದಾನೆ.
ಘಟನಾ ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. SP ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಶಿವಕುಮಾರ್, ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಕಾಳಿಕೃಷ್ಣ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.