ಮುಖ್ಯ ಸುದ್ದಿ
Vani vilasa sagara: ವಿವಿ ಸಾಗರಕ್ಕೆ ಮತ್ತೆ ಹರಿದ ನೀರು | 15 ದಿನಗಳಲ್ಲೇ ನಿರ್ಮಾಣವಾಯ್ತು ಹೊಸ ಸೇತುವೆ
CHITRADURGA NEWS | 13 DECEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ ಮತ್ತೆ ನೀರು ಹರಿಯಲು ಪ್ರಾರಂಭವಾಗಿದೆ.
ಇದನ್ನೂ ಓದಿ: ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ | ಈವರೆಗೆ ಆಗಿರುವ ವೆಚ್ಚ ಎಷ್ಟು ?
ನವೆಂಬರ್ 29 ರಂದು ಭದ್ರಾ (Bhadra) ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುತ್ತಿದ್ದ ಮಾರ್ಗದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿತ್ತು. ಪರಿಣಾಮ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆ, ಅಜ್ಜಂಪುರ ಸಮೀಪದ ಕಾಟಿನಗೆರೆ ಹಾಗೂ ಅಬ್ಬಿನಹೊಳಲು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಕುಸಿದು ಬಿದ್ದ ಕಾರಣ ನೀರು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: ಡಿ.20 ರಂದು ಚಿತ್ರದುರ್ಗದಲ್ಲಿ ರೇಷ್ಮೆ ಕೃಷಿ ಮೇಳ
ಇದರಿಂದ ಕಾಟಿನಗೆರೆ ಗ್ರಾಮದ ಸಂಪರ್ಕವೇ ಕಡಿದು ಹೋಗಿದೆ ಎಂದು ಅಲ್ಲಿನ ರೈತರು, ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, 15 ದಿನಗಳಲ್ಲೇ ಹೊಸ ಸೇತುವೆ ನಿರ್ಮಾಣವಾಗಿದೆ. ಇದರಿಂದಾಗಿ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಮತ್ತೆ ನೀರು ಹರಿಯಲು ಪ್ರಾರಂಭವಾಗಿದೆ.
ಮುರಿದು ಬಿದ್ದ ಸೇತುವೆ ಪಕ್ಕದಲ್ಲೇ ಹೊಸದೊಂದು ಸೇತೆವೆ ನಿರ್ಮಾಣವಾಗಿದ್ದು, ನೀರು ತುಂಬಿ ಹರಿಯುವ ದೃಶ್ಯಗಳು ವೈರಲ್ ಆಗಿವೆ.
ಇದನ್ನೂ ಓದಿ: ದಿನ ಭವಿಷ್ಯ | 13 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…
ಈಗ ನೀರು ಹರಿಯಲು ಪ್ರಾರಂಭವಾಗಿದ್ದು, ನಾಳೆ ವೇಳೆಗೆ ಜಲಾಶಯ ಮುಟ್ಟಬಹುದು ಎನ್ನಲಾಗುತ್ತಿದೆ.