Connect with us

    ಹಗಲಿನಲ್ಲೂ ಬೆಳಗುತ್ತಿವೆ ಬೀದಿ ದೀಪ | ಇದು ತಿಂಗಳ ಕಥೆ

    street light

    ಮುಖ್ಯ ಸುದ್ದಿ

    ಹಗಲಿನಲ್ಲೂ ಬೆಳಗುತ್ತಿವೆ ಬೀದಿ ದೀಪ | ಇದು ತಿಂಗಳ ಕಥೆ

    CHITRADURGA NEWS | 26 JUNE 2024
    ಚಿತ್ರದುರ್ಗ: ನಾಲ್ಕೈದು ದಿನ ಹಗಲು ರಾತ್ರಿ ಎನ್ನದೇ ಬೀದಿ ದೀಪಗಳು ಉರಿಯುವುದು ಸಾಮಾನ್ಯ. ಆದರೆ ನಗರ ಸಮೀಪದ ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ತಿಂಗಳಿನಿಂದ ಬೀದಿ ದೀಪಗಳು ಹಗಲಿರುಳು ಬೆಳಗುತ್ತಿವೆ.

    ಕೊಡಯ್ಯನಟ್ಟಿ, ಮಲ್ಲನಕಟ್ಟೆ ಗ್ರಾಮದಲ್ಲಿ ವಿದ್ಯುತ್‌ ಅನಗತ್ಯವಾಗಿ ಪೋಲಾಗುತ್ತಿದೆ. ಜನರು ಬೆಸ್ಕಾಂಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

    ಕ್ಲಿಕ್ ಮಾಡಿ ಓದಿ: ಅರಣ್ಯದಲ್ಲಿ ಯುವಕನ ಶವ ಪತ್ತೆ | ಶುರುವಾಯ್ತು ತನಿಖೆ

    ‘ವಿದ್ಯುತ್‌ ಲೈನ್‌ನಿಂದ ನೇರವಾಗಿ ಸಂಪರ್ಕ ಕಲ್ಪಿಸಿರುವುದೇ ಇದಕ್ಕೆ ಕಾರಣ. ಪಂಚಾಯಿತಿಯವರು ಬೆಸ್ಕಾಂ ಸಹಾಯ ಪಡೆದು, ಬೀದಿ ದೀಪಗಳಿಗೆ ನಿಯಂತ್ರಕಗಳನ್ನು ಆಳವಡಿಸಿದರೆ ಸಮಸ್ಯೆ ಬಗೆಹರಿಯಲಿದೆ’ ಎನ್ನುತ್ತಾರೆ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಕೆ.ಎಸ್.ಸ್ವಾಮಿ.

    street light 1

    ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಗಲಿನಲ್ಲೂ ಬೆಳಗುತ್ತಿರುವ ಬೀದಿ ದೀಪ

    ‘ಬೆಳಗ್ಗೆ ಆರಕ್ಕೆ ಬೀದಿ ದೀಪವನ್ನು ಆರಿಸಿ, ಸಂಜೆ ಆರಕ್ಕೆ ಪುನಃ ಆನ್‌ ಮಾಡುವಂತ ವ್ಯವಸ್ಥೆ ಮಾಡಬೇಕಿದೆ. ಅನಾವಶ್ಯಕವಾಗಿ ಹಗಲು ಹೊತ್ತು ಬೀದಿ ದೀಪಗಳನ್ನು ಉರಿಸುವುದಲ್ಲಿ ಅರ್ಥವಿಲ್ಲ. ಪಂಚಾಯಿತಿಗಳು ಸಾರ್ವಜನಿಕರ ಹಣಕ್ಕೆ ಬೆಲೆ ನೀಡಬೇಕು. ಪ್ರತಿಯೊಂದು ವಸ್ತುವಿಗೂ ಸಹ ಬೆಲೆ ಕಟ್ಟುವ ಇಂದಿನ ಕಾಲದಲ್ಲಿ, ಪ್ರತಿ ಯೂನಿಟ್‌ ವಿದ್ಯುತ್ ಸಹ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top