ಹೊಳಲ್ಕೆರೆ
ರೈತರಿಗೆ ತಲೆನೋವಾಗಿದ್ದ ಚಿರತೆ ಸೆರೆ | ಬೋನಿನೊಳಗೆ ಆರ್ಭಟಿಸಿ ಆತಂಕ ಮೂಡಿಸಿದ ಒಂಟಿ ಚಿರತೆ

CHITRADURGA NEWS | 20 APRIL 2025
ಹೊಳಲ್ಕೆರೆ: ರೈತರಿಗೆ ತಲೆನೋವಾಗಿದ್ದ, ತೀವ್ರ ಆತಂಕ ಹುಟ್ಟಿಸಿದ್ದ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಹೊಳಲ್ಕೆರೆ ತಾಲೂಕು ಕೊಳಾಳು ಬಳಿ ಕೆಲ ದಿನಗಳಿಂದ ರೈತರಿಗೆ ಇನ್ನಿಲ್ಲದಂತೆ ಕಾಡುತ್ತಿದ್ದ ಚಿರತೆ ಬೋನಿಗೆ ಬೀಳುವ ಮೂಲಕ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: 60 ಸಾವಿರದತ್ತ ಅಡಿಕೆ ಧಾರಣೆ | ಇಂದಿನ ಚನ್ನಗಿರಿ ಮಾರುಕಟ್ಟೆ ರೇಟ್
ಕೊಳಾಳು, ತೇಕಲವಟ್ಟಿ ಭಾಗದಲ್ಲಿ ಗುಡ್ಡಗಾಡು ಪ್ರದೇಶ ಸಾಕಷ್ಟಿದ್ದು, ಈ ಭಾಗದಲ್ಲಿ ಒಂಟಿ ಚಿರತೆಯೊಂದು ಓಡಾಡಿಕೊಂಡಿತ್ತು.
ಇಲ್ಲಿನ ರೈತರು ಸಾಕಾಣೆ ಮಾಡುತ್ತಿದ್ದ ಕುರಿ, ಮೇಕೆ ತಿನ್ನುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿತ್ತು,
ಈ ಸಂಬಂಧ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಚಿರತೆ ಸೆರೆಗೆ ಬೋನು ಅಳವಡಿಸಲಾಗಿತ್ತು.
ಇದನ್ನೂ ಓದಿ: ರೈತರಿಗೆ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಈಗ ಚಿರತೆ ಬೋನಿಗೆ ಬಿದ್ದಿದ್ದು, ಅದನ್ನು ನೋಡಲು ಜನ ಮುಗಿಬಿದ್ದಿದ್ದರು. ಬೋನಿನ ಒಳಗೆ ಆರ್ಭಟಿಸುತ್ತಿದ್ದ ಚಿರತೆ, ಬಿಟ್ಟರೆ ಸಾಕೆಂದು ಅತ್ತಿಂದಿತ್ತ ಹಾರಾಡುತ್ತಾ ಜನರನ್ನು ನೋಡಿ ಘರ್ಜಿಸುವ ದೃಶ್ಯ ಭಯ ಹುಟ್ಟಿಸುತ್ತಿದ್ದವು.
ಕಳೆದ ತಿಂಗಳಷ್ಟೇ ಕೊಳಾಳು ಬಳಿ ತಾಯಿಯಿಂದ ಬೇರೆಯಾಗಿದ್ದ ಎರಡು ಚಿರತೆ ಮರಿಗಳು ಸಾರ್ವಜನಿಕರ ಕೈಗೆ ಸಿಕ್ಕಿದ್ದವು, ಇವುಗಳನ್ನು ಆಡುಮಲ್ಲೇಶ್ವರ ಮೃಗಾಲಯದಲ್ಲಿ ತಂದು ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ ಮಾಡುತ್ತಿದ್ದರು.
ಇದನ್ನೂ ಓದಿ: ಕೊಳಾಳು ಗ್ರಾಮದಲ್ಲಿ 2 ಚಿರತೆ ಮರಿ ಪತ್ತೆ | ಆಡುಮಲ್ಲೇಶ್ವರ ಮೃಗಾಯಲಕ್ಕೆ ಹಸ್ತಾಂತರ
