ಮುಖ್ಯ ಸುದ್ದಿ
Bangladesh; ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ

CHITRADURGA NEWS | 12 AUGUST 2024
ಚಿತ್ರದುರ್ಗ: (Bangladesh)ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹತ್ಯೆ ಹಾಗೂ ದೌರ್ಜನ್ಯ ಖಂಡಿಸಿ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ನಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಕ್ಲಿಕ್ ಮಾಡಿ ಓದಿ: Government employees: ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗೆ ಸನ್ಮಾನ | ದಿನಾಂಕ ಘೋಷಿಸಿದ ಸಿ.ಎಸ್.ಷಡಾಕ್ಷರಿ
ಈ ವೇಳೆ ಬಜರಂಗದಳ ಪ್ರಾಂತ ಸಂಯೊಜಕ ಎಸ್.ಆರ್.ಪ್ರಭಂಜನ್ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ಎಲ್ಲರು ಖಂಡಿಸಬೇಕಿದೆ ಇದರ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿನ ಹಿಂದುಗಳಿಗೆ ರಕ್ಷಣೆ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.
ಈ ಸಮಸೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯನ್ನು ತೆಗೆದುಕೊಂಡು ಹೋಗಿ ಇದಕ್ಕೆ ಪರಿಹಾರವನ್ನು ಕಂಡು ಕೊಳ್ಳಬೇಕಿದೆ. ಅಲ್ಲಿನ ಹಿಂದುಗಳನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರವೂ ಮುಂದಾಗಬೇಕು. ಈ ಸಂಬಂಧ ವಿಶ್ವಹಿಂದೂ ಪರಿಷತ್ ಮುಖಂಡರು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎಂದರು.
ಬಾಂಗ್ಲಾ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದರ ಲಾಭ ಪಡೆದ ಅಲ್ಲಿನ ಕಿಡಿಗೇಡಿಗಳು ಅಲ್ಪ ಸಂಖ್ಯಾತರಾಗಿರುವ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ತಕ್ಷಣ ವಿಶ್ವದ ಬೇರೆ ಬೇರೆ ದೇಶಗಳು ಈ ಸಂಬಂಧ ಧ್ವನಿ ಎತ್ತಬೇಕು. ಬಾಂಗ್ಲಾದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದುಗಳ ಪರವಾಗಿ ನಿಲ್ಲಬೇಕು ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: Independence Day; ಸ್ವಾತಂತ್ರ್ಯೊತ್ಸವ | ಹರ್ ಘರ್ ತಿರಂಗಾ ಅಭಿಯಾನ
ಪ್ರತಿಭಟನೆಯಲ್ಲಿ ಸಂಸದ ಗೊವಿಂದ ಕಾರಜೋಳ, ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಬಿಜಿಪಿ ಜಿಲ್ಯಾದ್ಯಕ್ಷ ಎ.ಮುರಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ವಿಎಚ್‌ಪಿ ಮುಖಂಡರಾದ ರುದ್ರೇಶ್, ಕೇಶವ್, ಅಶೋಕ್, ಕೊಟ್ಲಾ ದೇವರಾಜ್, ರಂಗಸ್ವಾಮಿ, ಬಿಜೆಪಿ ಮುಖಂಡರಾದ ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ನವಿನ್ ಚಾಲುಕ್ಯ, ಕಲ್ಲೆಶಯ್ಯ, ನಗರಸಭೆ ಸದಸ್ಯರಾದ ಹರೀಶ್, ಸುರೇಶ್, ಬಸಮ್ಮ, ನಂದಿ ನಾಗರಾಜ್, ಚಂದ್ರಿಕಾ ಲೋಕನಾಥ, ಕಾಂಚನ, ವೀಣಾ ಮತ್ತಿತರರಿದ್ದರು.
