CHITRADURGA NEWS | 02 APRIL 2025
ಚಿತ್ರದುರ್ಗ: ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಟ್ರಸ್ಟ್ ಡೀಡ್ ಸಂಬಂಧ ನ್ಯಾಯಾಲಯದಲ್ಲಿದ್ದ ಮಧ್ಯಂತರ ಅರ್ಜಿಗಳನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ ಎಂದು ತರಳಬಾಳು ಬೃಹನ್ಮಠದ ಪ್ರಕಟಣೆ ತಿಳಿಸಿದೆ.
ಹಿರೇಕೆರೂರು ಎಸ್.ಎಸ್.ಪಾಟೀಲ್ ಮತ್ತು ಸಂಗಡಿಗರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಚಿತ್ರದುರ್ಗದ ನ್ಯಾಯಾಲಯ ವಜಾಗೊಳಿಸಿದೆ.

ಇದನ್ನೂ ಓದಿ: ಯುಗಾದಿ ಜೂಜು | ಜಿಲ್ಲೆಯಲ್ಲಿ 850 ಜನರ ಬಂಧನ | ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಚರಣೆ
ಟ್ರಸ್ಟ್ ಡೀಡ್ ವಿರುದ್ಧ ಅನೇಕ ಮಧ್ಯಂತರ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಈಗಿನ ಶ್ರೀಗಳವರು ಯಾರಿಗೂ ಗೊತ್ತಿಲ್ಲದಂತೆ ಮಠದ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆ, ಅದರ ಆಧಾರದ ಮೇಲೆ ಮಠದ ಯಾವುದೇ ಕಾರ್ಯನಿರ್ವಹಣೆಯನ್ನು ಮಾಡಬಾರದು, ಶಿಷ್ಯರ ಯಾವುದೇ ಮೀಟಿಂಗ್ ನಡೆಸಬಾರದು ಎಂದು ತಾತ್ಕಾಲಿಕ ತಡೆಯಾಜ್ಞೆ ಕೋರಿದ್ದರು.
ಇವುಗಳಲ್ಲಿ ಇದುವರೆಗೂ17 ಅರ್ಜಿಗಳು ವಿಲೇವರಿಯಾಗಿ 5 ಬಾಕಿ ಉಳಿದಿದ್ದವು. ಈ ಪೈಕಿ ಇತ್ತೀಚೆಗೆ 4 ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ನಡೆಸಿ ಚಿತ್ರದುರ್ಗ ನ್ಯಾಯಾಲಯವು ನಾಲ್ಕೂ ಮಧ್ಯಂತರ ಅರ್ಜಿಗಳನ್ನು ಖರ್ಚು ಸಮೇತ ನಿನ್ನೆ ವಜಾಗೊಳಿಸಿರುತ್ತದೆ ಎಂದಿದೆ.
ಇದನ್ನೂ ಓದಿ: ಸಿರಿಗೆರೆ ಗುರುಗಳಿಂದ ಚಂದ್ರ ದರ್ಶನ
ಮಠ, ಸಮಾಜ ಮತ್ತು ಸಂಸ್ಥೆಯ ವಿರುದ್ಧವಾಗಿ ಹಿರೇಕೆರೂರು ಎಸ್.ಎಸ್. ಪಾಟೀಲರು ಮತ್ತು ಅವರ ಸಂಗಡಿಗರು (ಒಟ್ಟು 9 ಜನ) ಮೂರು ವರ್ಷಗಳ ಹಿಂದೆ ಚಿತ್ರದುರ್ಗ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದ ಸಂಗತಿ ಸರ್ವವಿದಿತ.
ಇದರಿಂದ ತೀವ್ರ ಅಸಮಾಧಾನಗೊಂಡ ನೂರಾರು ಜನ ಶಿಷ್ಯರು ಮಠದ ಪರವಾಗಿ ನಿಂತು ಮಠದ ಜೊತೆಗೆ ತಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡಿಕೊಳ್ಳಬೇಕೆಂದು ನ್ಯಾಯಾಲಯದಲ್ಲಿ ‘ಸೇರ್ಪಡೆ ಅರ್ಜಿ’ ಸಲ್ಲಿಸಿದ್ದರು.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಇಬ್ಬರು ಸಾವು | ಮೂವರಿಗೆ ಗಾಯ
ಚಿತ್ರದುರ್ಗ ನ್ಯಾಯಾಲಯವು ಅದನ್ನು ಮನ್ನಿಸಿ ಅವರೆಲ್ಲರನ್ನೂ ಈ ಕೇಸಿನಲ್ಲಿ ಸೇರ್ಪಡೆ ಮಾಡಿಕೊಂಡು ಆದೇಶ ಹೊರಡಿಸಿತ್ತು. ಆದರೆ, ಇದರ ವಿರುದ್ಧವಾಗಿ ಎಸ್.ಎಸ್. ಪಾಟೀಲರು ಮತ್ತು ಅವರ ಸಂಗಡಿಗರು ಕಳೆದ ವರ್ಷ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುತ್ತಾರೆ.
ಅದು ಹೈಕೋರ್ಟಿನಲ್ಲಿ ಇನ್ನೂ ವಿಚಾರಣೆಯ ಹಂತದಲ್ಲಿದೆ. ಈ ಮಧ್ಯೆಯ ಚಿತ್ರದುರ್ಗ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಮಧ್ಯಂತರ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿರುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
