Connect with us

    Taralabalu Nudihabba: ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ 

    Taralabalu Nudihabba in Sirigere

    ಮುಖ್ಯ ಸುದ್ದಿ

    Taralabalu Nudihabba: ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 NOVEMBER 2024

    ಚಿತ್ರದುರ್ಗ: ತಾಲೂಕಿನ ಸಿರಿಗೆರೆ(sirigere)ಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರ ಜರುಗಿದ ತರಳಬಾಳು ನುಡಿಹಬ್ಬಕ್ಕೆ(Taralabalu Nudihabba) ಸಿರಿಗೆರೆಯ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

    ಕ್ಲಿಕ್ ಮಾಡಿ ಓದಿ: child death: ಹಸಿವು ಎಂದು ಅನ್ನ ಕೇಳಿದ ಮಗುವನ್ನೇ ಗುದ್ದಿ ಕೊಂದನಾ ತಂದೆ..!

    ನಂತರ ಮಾತನಾಡಿದ ಶ್ರೀಗಳು, ನಿಮ್ಮ ಜೀವನದಲ್ಲಿ ಕನ್ನಡ ಹಾಸುಹೊಕ್ಕಾಗಿರಬೇಕು. ಭಾಷೆಗೆ ಸುಂದರ ಸೊಗಡಿದೆ. ಹಾಗಾಗಿ ಎಲ್ಲರೂ ಅಪ್ಪಟ ಕನ್ನಡದಲ್ಲಿ ಮಾತನಾಡಲು ಕಲಿಯಬೇಕು ಎಂದು ಹೇಳಿದರು.

    ಭಾಷೆ ಹರಿಯುವ ನದಿ ನೀರು. ಅದು ಮಲೀನವಾಗಬಾರದು. ದಿನನಿತ್ಯದಲ್ಲಿ ಬೇರೆ ಭಾಷೆಯಿಂದ ಎರವಲು ಪಡೆದು ಮಾತನಾಡುವುದು ಶೋಭಿತವಲ್ಲ. ಇಂದಿನ ಯುವಪೀಳಿಗೆಯ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನದ ಕಡೆಗೆ ದಾವಿಸುತ್ತಿದ್ದಾರೆಯೇ ಹೊರತು ಕನ್ನಡವನ್ನು ನಿರ್ಲಕ್ಷಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಸಕೊಂಡೇ ಕನ್ನಡ ಸಾಹಿತ್ಯದ ಸೊಬಗು, ಕನ್ನಡ ಅಭಿರುಚಿಯನ್ನು ಬಿತ್ತರಿಸಿ ಬೆಳಸಿಕೊಳ್ಳಬೇಕು ಎಂದರು.

    ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಭೀಮಾಶಂಕರ ಜೋಷಿ ಕನ್ನಡ ಸಾಹಿತ್ಯ ಮತ್ತು ಧರ್ಮ ಸಮನ್ವಯತೆಯ ಬಗ್ಗೆ ಮಾತನಾಡುತ್ತಾ ಕನ್ನಡದ ಕಹಳೆ ತರಳಬಾಳು ಶ್ರೀಮಠದಲ್ಲಿ ಮೊಳಗಿದೆ. ಪ್ರಾಚೀನ ಕಲೆಗಳ ಮೆರವಣಿಗೆ ನೋಡುಗರ ಮನ ಸೆಳೆಯಿತು.

    ಕ್ಲಿಕ್ ಮಾಡಿ ಓದಿ: CHITRADURGA APMC: ಇಂದಿನ ಮೆಕ್ಕೆಜೋಳದ ರೇಟ್ ಇಲ್ಲಿದೆ ನೋಡಿ…

    ಜಾನಪದ, ವಚನ, ದಾಸ, ತತ್ವಪದ, ಆಧುನಿಕ ಸಾಹಿತ್ಯ ಮುಂತಾದಹ ಹಲವಾರು ವಿಭಾಗಗಳಲ್ಲಿ ಧರ್ಮ ಸಮನ್ವಯತೆ ಮೂಡಿದೆ ಇಂದು ಎಲ್ಲವೂ ಸಹ ನಡೆಯುವುದು ಧರ್ಮದ ಮೂಲಕ. ಧರ್ಮ ಎಂದರೆ ಮಾಡಬೇಕಾದ ಕರ್ತವ್ಯ. ನಾವು ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ದ್ವೇಷಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

    ಮಂಡ್ಯದ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಡಿ.20ರಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿರಿಗೆರೆಯಲ್ಲಿ ಇಂದು ಕೋಟಿಕಂಠಗಾಯನ ಮಾಡಿದ 4ಸಾವಿರ ವಿದ್ಯಾರ್ಥಿಗಳ ಗಾಯನ ಮೊಳಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಸಾಧನೆ ಆಕಾಶದಷ್ಟು, ಆಸೆ ಆಕಾಶದಾಚೆ ಇರಬೇಕು. ನೀವೆಲ್ಲಾ ಶ್ರೀಮಠ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವಿದ್ಯಾರ್ಥಿಗಳಾಗಬೇಕು ಎಂದರು.

    ಉಡುಪಿಯ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಹಿಂದೂ ಧರ್ಮಗಳಲ್ಲಿ ಭಕ್ತಿಗೆ ವಿಶೇಷವಾಗಿ ಸ್ಥಾನ ಇದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಅಪಾರ. ದಾಸ ಸಾಹಿತ್ಯಕ್ಕೆ ಪ್ರೇರಣೆಯೇ ವಚನಗಳು. ಸಂಗೀತ ಮತ್ತು ಸಾಹಿತ್ಯದ ಸಾಮರಸ್ಯವೇ ಕನ್ನಡ ಸಾಹಿತ್ಯ ಎಲ್ಲಾ ವಿದ್ಯಾರ್ಥಿಗಳು ಕನ್ನಡ ಬೆಳಸಿ, ಕನ್ನಡ ಮಾತನಾಡಿ ಕನ್ನಡದ ಕರ‍್ಯಕ್ರಮಗಳಿಗೆ ಮೊದಲ ಆಧ್ಯತೆ ನೀಡಿದೆ ಎಂದರು.

    ಕ್ಲಿಕ್ ಮಾಡಿ ಓದಿ: VV SAGARA: ವಿವಿ ಸಾಗರಕ್ಕೆ ಮತ್ತೆ ಹರಿದು ಬಂದಳು ಭದ್ರೆ | ಕೋಡಿ ಬೀಳಲು ಎರಡೂವರೆ ಅಡಿ ಬಾಕಿ

    ಶಿವಮೊಗ್ಗ ಶಂಕರಘಟ್ಟದ ವಿಶ್ರಾಂತ ಪ್ರಾಧ್ಯಾಪಕ ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವ ಮತ್ತು ಸೃಜನಶೀಲತೆಯ ಸವಾಲುಗಳು ವಿಚಾರವಾಗಿ ಮಾತನಾಡಿ, ಇಂದು ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದ್ದು, ನಾವುಗಳು ಭಾಷಾಭಿಮಾನದ ಬಗ್ಗೆ ಸಂಭ್ರಮಿಸಬಾರದು. ಭಾಷೆಯ ಉಳಿವಿಗೆ ಹೊಸ ಆಲೋಚನೆಗಳನ್ನು ಮಾಡಬೇಕಾಗಿದೆ ಎಂದರು.

    ಶ್ರೀಮಠದಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ತಂತ್ರಾಂಶ ಶಿವಶರಣರ ವಚನ ಸಂಪುಟದ ಸಾಹಿತ್ಯ ಸಿರಿ ಜೊತೆಗೆ ಸರ್ವಜ್ಞನ ವಚನಗಳು 945, ಮಂಕುತ್ತಿಮ್ಮನ ಕಗ್ಗ 1925 ಸೇರ್ಪಡೆ ಮಾಡಿ ಪರಿಷ್ಕೃತಗೊಳಿಸಲಾಗಿದೆ.

    ಕಾರ್ಯಕ್ರಮದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗದ ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ, ಕೆ.ಎಂ.ಶಿವಸ್ವಾಮಿ, ಶ್ರೀಸಂಸ್ಥೆಯ ಆಢಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಎಸ್.ಜತ್ತಿ, ವಿದ್ಯಾಸಂಸ್ಥೆಯ ಕನ್ನಡ ಶಿಕ್ಷಕರು, ಉಪನ್ಯಾಸಕರು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು. ನಾಗರಾಜ ಸಿರಿಗೆರೆ ನಿರೂಪಿಸಿದರು. ಕೆ.ಈ.ಬಸವರಾಜಪ್ಪ ಸ್ವಾಗತಿಸಿದರು.

    ಕ್ಲಿಕ್ ಮಾಡಿ ಓದಿ: CMCRI: ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಡೀನ್ ನೇಮಕ

    ವೈಭವದ ಭುವನೇಶ್ವರಿ ದೇವಿಯ ಮೆರವಣಿಗೆ: 

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು. ಶಾಲೆಯ ವಿದ್ಯಾರ್ಥಿಗಳು ಕವಿಗಳ, ಸಾಹಿತಿಗಳ ಹಾಗೂ ವಚನಕಾರರ ವೇಷ ಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆದರು. ಮೆರವಣಗೆಯಲ್ಲಿ ಕನ್ನಡ ನುಡಿಗಳು, ಘೋಷಣೆಗಳು, ಕನ್ನಡ ಬಾವುಟಗಳು ರಾರಾಜಿಸಿದವು. ನಂತರ ಕನ್ನಡ ಧ್ವಜಾರೋಹಣ ಮತ್ತು 4000 ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. 

    ಸಿರಿಗೆರೆಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top