ಚಳ್ಳಕೆರೆ
ಚಳ್ಳಕೆರೆಯಲ್ಲಿ ತನುಶ್ರೀ ಪ್ರಕಾಶನದ ರಾಜ್ಯ ಮಟ್ಟದ ಸಮ್ಮೇಳನ | ಬಸವಣ್ಣನವರು ನಡೆಸಿದ ಚಳುವಳಿ ಸಾಮಾಜಿಕ ಶಕ್ತಿಯಾಗಿ ಉಳಿದುಕೊಳ್ಳುತ್ತಿಲ್ಲ | ಗಣಪತಿ ಗೂ ಛಲವಾದಿ
CHITRADURGA NEWS | 28 FEBRUARY 2024
ಚಳ್ಳಕೆರೆ : ಹನ್ನೆರಡನೇ ಶತಮಾನದಲ್ಲಿ ಲಿಂಗ ತಾರತಮ್ಯ ನಿವಾರಣೆಗೆ ಬಸವಣ್ಣನವರು ನಡೆಸಿದ ಚಳುವಳಿಗಳು ಸಾಮಾಜಿಕ ಶಕ್ತಿಯಾಗಿ ಉಳಿದುಕೊಳ್ಳುತ್ತಿಲ್ಲ ಎಂದು ಮಯೂರ ವರ್ಮ ಪ್ರಶಸ್ತಿ ಪುರಸ್ಕøತರು ಹಾಗೂ ಸಾಹಿತಿ ಗಣಪತಿ ಗೂ ಛಲವಾದಿ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸರ್ಕಾರದ ಅದೇಶಕ್ಕೆ ಇರೋ ಕಿಮ್ಮತ್ತು ಇಷ್ಟೇನಾ | ಕೆ.ಟಿ.ಶಿವಕುಮಾರ್
ಚಳ್ಳಕೆರೆ ರೋಟರಿ ಬಾಲ ಭವನದಲ್ಲಿ ತನುಶ್ರೀ ಪ್ರಕಾಶನ ಸಂಸ್ಥೆ ಸೋಲೇನಹಳ್ಳಿ ಮತ್ತು ತನುಶ್ರೀ ಸಾಂಸ್ಕೃತಿಕ ಕಲಾ ವೇದಿಕೆ, ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಗುಬ್ಬಿ ಇವರ ಸಹಯೋಗದೊಂದಿಗೆ ತೃತೀಯ ರಾಜ್ಯ ಸಾಹಿತ್ಯ ಸಮ್ಮೇಳನ 2024 ಪ್ರಥಮ ವಾರ್ಷಿಕೋತ್ಸವ, ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ, ರಾಜ್ಯ ಮಟ್ಟದ ಕವಿ ಗೋಷ್ಠಿ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಫಿವುಲ್ಲಾ ರವರು ಮಾತನಾಡಿ, ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಉಳಿಯಬೇಕಾದರೆ ಸಮಾಜದಲ್ಲಿ ಕವಿಗಳು ಮತ್ತು ಸಾಹಿತಿಗಳು ಬರೆಯುವಂತಹ ಕವಿತೆಗಳನ್ನು ಮತ್ತು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಅಲ್ಲದೆ ಇತ್ತೀಚಿನ ಮಕ್ಕಳು ಮೊಬೈಲ್ ಎಂಬ ಭೂತಕ್ಕೆ ದಾಸರಾಗಿರುವುದು ತುಂಬಾ ಬೇಸರದ ಸಂಗತಿ ಎಂದು ತಿಳಿಸಿದರು.
ಇದನ್ನೂ ಓದಿ: ರೈತರಿಂದ ಪಂಜಿನ ಮೆರವಣಿಗೆ | ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗೆ ಧಿಕ್ಕಾರ
ರಾಜು ಎಸ್ ಸೋಲೇನೆಹಳ್ಳಿ ರವರ ಪ್ರೇಮ ಸ್ಪರ್ಶ, ಸಿಂಚನ ಎಂ.ಎನ್ ಗೊರಹಳ್ಳಿ ರವರ ಭಾವನೆಗಳ ಬೆನ್ನೇರಿ, ರಮಾ ಫಣಿ ಭಟ್ ಗೋಪಿ ರವರ ವಿರಚಿತ, ಆಕಾಶ ಬುಟ್ಟಿ ಎಂಬ ಮೂರು ಕವನ ಸಂಕಲನಗಳನ್ನು ಹಿರಿಯ ಸಾಹಿತಿ, ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ರವರು ಲೋಕಾರ್ಪಣೆ ಮಾಡಿ ಇಂತಹ ಸಾಹಿತ್ಯದ ಪುಸ್ತಕಗಳನ್ನು ಇಂದಿನ ಯುವ ಪೀಳಿಗೆ ಓದುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಒಬ್ಬ ಉತ್ತಮ ಪ್ರಜೆಯಾಗಿ, ಸುಸಂಸ್ಕೃತ ವ್ಯಕ್ತಿಯಾಗಿ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಫೆಬ್ರವರಿ 27 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿತ್ತು
ಹೊಸಪೇಟೆ ಜಿಲ್ಲೆಯ ಸಾಹಿತಿ, ನಿರ್ಮಾಪಕರು ಹಾಗೂ ವಕೀಲರು ವಾಣಿಶ್ರೀ.ಹೆಚ್ ನವೀನ್, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿ ನಂತರ ಮಾತನಾಡಿ, ನಿಮ್ಮ ಸಾಧನೆಗಳು ಮತ್ತು ಸೇವೆಗಳು ನಮ್ಮ ಕನ್ನಡ ನಾಡು, ನುಡಿ,ಜಲ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಮತ್ತು ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಶಂಸಿಸಿದರು..
ಇದನ್ನೂ ಓದಿ: ಸಂಗಮೇಶ್ವರ ಜಯಂತಿ ಸರಳ ಆಚರಣೆ | ಕುಂಚಿಟಿಗ ಮಠದ ಶ್ರೀ ಶಾಂತವೀರ ಮಹಾ ಸ್ವಾಮೀಜಿ
ತನುಶ್ರೀ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಹಾಗೂ ರಾಜ್ಯಾಧ್ಯಕ್ಷ ರಾಜು ಎಸ್.ಸೋಲೆನಹಳ್ಳಿ ಇವರು ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಥೆಯ ನಡೆದು ಬಂದು ಹಾದಿ ಮತ್ತು ಬೆಳೆವಣಿಗೆ ಸಾಧನೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯ ಮುಖ್ಯ ಗೌರವ ಅಧ್ಯಕ್ಷ ಡಾ.ಮುಕುಂದ ರಾಜು,ಸಂಘಟನಾ ಸಂಚಾಲಕ ಕೋಡಿಹಳ್ಳಿ ಟಿ.ಶಿವಮೂರ್ತಿ, ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅಂಜನ್ ಕುಮಾರ್, ಡಾ.ಬಸವರಾಜ್ ಪೂಜಾರ್ ಕೋಡಿಹಳ್ಳಿ, ಸಿಂಚನ.ಎಂ.ಎನ್ ಗೊರಹಳ್ಳಿ, ಕೆ.ಭರತ್, ಚಿದಾನಂದ ಮೂರ್ತಿ.ಎಂ ನರ್ಲಹಳ್ಳಿ, ಜೆ. ತಿರುಮಲ,ಡಿ.ಬಸವರಾಜ್ ಉಪಸ್ಥಿತರಿದ್ದರು.