CHITRADURGA NEWS | 29 JUNE 2024

ಚಿತ್ರದುರ್ಗ: 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ.ಯಲ್ಲಿ ಶೇ.90 ಮತ್ತು ಮೆಲ್ಪಟ್ಟು ಅಂಕಗಳಿಸಿದ ಹಾಗೂ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಂಕ್ಷನ್, ಪಿ.ಎಚ್.ಡಿ. ಪದವಿ ಪಡೆದ ವೀರಶೈವ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕರಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆಗೆ ಶೀಘ್ರ ₹ 5,300 ಕೋಟಿ ಅನುದಾನ | ಸಂಸದ ಗೋವಿಂದ ಎಂ.ಕಾರಜೋಳ

ಅರ್ಜಿ ಸಲ್ಲಿಸಲು ಜುಲೈ 15 ರ ಒಳಗಾಗಿ ವೀರಶೈವ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿ, ಜಾತಿ ದೃಢೀಕರಣ ಪತ್ರ, ಸಮಾಜದ ಸದಸ್ಯತ್ವ ಪಡೆದಿರುವವರು ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿರುವ ವೀರಶೈವ ಸಮಾಜದ ಕಛೇರಿಗೆ ಅರ್ಜಿ ಸಲ್ಲಿಬಹುದು ಎಂದು ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9986295285, 9741356200, 9845396588 ಗೆ ಹಾಗೂ ಕಛೇರಿಯಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30, ಸಂಜೆ 5.00 ರಿಂದ 8.30ರ ವರೆಗೆ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು.