ಮುಖ್ಯ ಸುದ್ದಿ
ಚಳ್ಳಕೆರೆ ATRನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್

CHITRADURGA NEWS | 22 MARCH 2024
ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧಣಾ ಸಂಸ್ಥೆ (ISRO) ಶುಕ್ರವಾರ ಬೆಳ್ಳಂ ಬೆಳಗ್ಗೆ ಮಹತ್ವದ ಸಾಧನೆ ಮಾಡಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕುದಾಪುರ ಬಳಿ ಇರುವ ಏರೊನಾಟಿಕ್ ಟೆಸ್ಟ್ ರೇಂಜ್(AERONAUTICAL TEST RANGE) ಮೂಲಕ ಮರು ಬಳಕೆ ಮಾಡಬಹುದಾದ ‘ಪುಷ್ಪಕ್’ ಎಂಬ ಹೆಸರಿನ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿದೆ.
ಕ್ಲಿಕ್ ಮಾಡಿ ಓದಿ: ಎಚ್ಚರ…ವೇದಾವತಿ ನದಿಗೆ ಹರಿಯಲಿದೆ ವಿವಿ ಸಾಗರ ನೀರು | ಇಲ್ಲಿದೆ ನೋಡಿ ನದಿ ಪಾತ್ರದ ಹಳ್ಳಿಗಳ ಪಟ್ಟಿ
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿ.ಮೀ ಎತ್ತರಕ್ಕೆ ಪುಷ್ಪಕ್ (PUSHPAK) ಉಡಾವಣಾ ವಾಹನವನ್ನು ತೆಗೆದುಕೊಂಡು ಹೋಗಿ ಬಳಿಕ ಪೂರ್ವ ನಿರ್ಧರಿತ ಪಿಲ್‍ಬಾಕ್ಸ್ ನಿಯತಾಂಕಗಳನ್ನು ಪಡೆದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.

ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್
ಈ ಕುರಿತು ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ಸಂಪೂರ್ಣ ಮರುಬಳಕೆ ಮಾಡಬಹುದಾದ, ಉಡಾವಣೆಗೆ ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಮಾಡುವ ಪ್ರಯತ್ನದ ಭಾಗವಾಗಿ ಈ ಕೆಲಸ ಮಾಡಲಾಗಿದೆ ಎಂದು ತಿಳಿಸಿದೆ.
ಕ್ಲಿಕ್ ಮಾಡಿ ಓದಿ: ಚುನಾವಣಾ ಕರ್ತವ್ಯ ನಿರ್ಲಕ್ಷ್ಯ ಮೂವರು ಶಿಕ್ಷಕಿಯರು ಅಮಾನತು
ಕಡಿಮೆ ವೆಚ್ಚದಲ್ಲಿ ಭಾಹ್ಯಾಕಾಶವನ್ನು ಪ್ರವೇಶಿಸುವ ಪ್ರಯತ್ನ ಇದಾಗಿದ್ದು, ಪ್ರಯೋಗದ ವೇಳೆ ಪುಷ್ಪಕ್ ತನ್ನ ನಿಖರವಾದ ಜಾಗದಲ್ಲೇ ಲ್ಯಾಂಡ್ ಆಗಿದೆ ಎಂದು ಇಸ್ರೋ ವಿವರಣೆ ನೀಡಿದೆ.
ಶುಕ್ರವಾರ ಬೆಳಗ್ಗೆ 7.10ಕ್ಕೆ ಚಳ್ಳಕೆರೆ ಬಳಿಯ ವೈಮಾನಿಕ ಪರೀಕ್ಷಾ ಕೇಂದ್ರದಲ್ಲಿ ಈ ಪ್ರಯೋಗ ನಡೆದಿದ್ದು, ಮರು ಬಳಕೆ ಮಾಡುವ ಲಾಂಚಿಂಗ್ ವಾಹನ (REUSEBLE LAUNCHING VEHICAL) ಒಂದು ಪರೀಕ್ಷಾರ್ಥ ಪ್ರಯೋಗ ಒಂದು ಮೈಲುಗಲ್ಲು ಎಂದು ಬಣ್ಣಿಸಿದೆ.
