Connect with us

    objection: ಜಿಲ್ಲೆಯಲ್ಲಿ 1156 ಹೆಕ್ಟೇರ್ ಬೆಳೆ ಹಾನಿ | ಆಕ್ಷೇಪಣೆ ಸಲ್ಲಿಕೆಗೆ ಡಿಸಿ ಸೂಚನೆ

    ಜಿಲ್ಲಾಧಿಕಾರಿ ಟಿ.ವೆಂಕಟೇಶ್

    ಮುಖ್ಯ ಸುದ್ದಿ

    objection: ಜಿಲ್ಲೆಯಲ್ಲಿ 1156 ಹೆಕ್ಟೇರ್ ಬೆಳೆ ಹಾನಿ | ಆಕ್ಷೇಪಣೆ ಸಲ್ಲಿಕೆಗೆ ಡಿಸಿ ಸೂಚನೆ

    CHITRADURGA NEWS | 06 NOVEMBER 2024

    ಚಿತ್ರದುರ್ಗ: ಕಳೆದ ಅಕ್ಟೋಬರ್ ಮಾಹೆಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತಿವೃಷ್ಠಿಯಿಂದ ಬೆಳೆಹಾನಿ ಆದ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಕುರಿತು ಆಕ್ಷೇಪಣೆ(submission of objection)ಗಳನ್ನು ಆಹ್ವಾನಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: ನ.9 ರಂದು ಪ್ರಧಾನ ಅಂಚೆ ಕಚೇರಿಯಲ್ಲಿ ಉಚಿತ ಜೀವನ ಪ್ರಮಾಣ ಪತ್ರ ಅಭಿಯಾನ

    ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಕಳೆದ ಅಕ್ಟೋಬರ್ ಮಾಹೆಯಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷಾ ತಂಡವು ಸ್ಥಳ ಪರಿಶೀಲನೆ ನಡೆಸಿ, ಬೆಳೆ ಹಾನಿ ಕ್ಷೇತ್ರಗಳ ಮಾಹಿತಿ ನೀಡಿದೆ.

    ಜಿಲ್ಲೆಯಲ್ಲಿ ಒಟ್ಟು 914.45 ಹೆಕ್ಟೇರ್ ಕೃಷಿ ಬೆಳೆ ಹಾಗೂ 241.80 ತೋಟಗಾರಿಕೆ ಬೆಳೆ ಸೇರಿ ಒಟ್ಟು 1,156.25 ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆ ಹಾನಿಯಾಗಿದೆ.

    ಚಿತ್ರದುರ್ಗ ತಾಲ್ಲೂಕಿನಲ್ಲಿ 172.77 ಹೆಕ್ಟೇರ್ ಕೃಷಿ, 94.50 ತೋಟಗಾರಿಕೆ ಸೇರಿ 267.27 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.

    ಕ್ಲಿಕ್ ಮಾಡಿ ಓದಿ: ಗ್ರಾ.ಪಂ ಉಪಚುನಾವಣೆ | ವೇಳಾಪಟ್ಟಿ ಪ್ರಕಟ

    ಚಳ್ಳಕೆರೆ ತಾಲ್ಲೂಕಿನಲ್ಲಿ 478.47 ಹೆಕ್ಟೇರ್ ಕೃಷಿ ಬೆಳೆ, 89.40 ಹೆಕ್ಟೇರ್ ತೋಟಗಾರಿಕೆ ಸೇರಿ 567.87 ಹೆಕ್ಟೇರ್ ಬೆಳೆ ಹಾನಿಯಾಗಿದೆ.

    ಹಿರಿಯೂರು ತಾಲ್ಲೂಕಿನಲ್ಲಿ 162.50 ಹೆಕ್ಟೇರ್ ಕೃಷಿ, 35 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 197.50 ಹೆಕ್ಟೇರ್ ಹಾನಿಯಾಗಿದೆ.

    ಮೊಳಕಾಲ್ಮೂರು ತಾಲ್ಲೂಕಿನಲ್ಲಿ 100.71 ಹೆಕ್ಟೇರ್ ಕೃಷಿ ಬೆಳೆ ಹಾಗೂ 22.90 ಹೆಕ್ಟೇರ್ ತೊಟಗಾರಿಕೆ ಬೆಳೆ ಸೇರಿ 123.61 ಹೆಕ್ಟೇರ್ ಬೆಳೆ ಹಾನಿಯಾಗಿದೆ.

    ಬೆಳೆಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕರಿಗಳ ಕಚೇರಿ ಸೇರಿದಂತೆ ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿ, ಗ್ರಾಮ ಪಂಚಾಯತಿ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಬುಧವಾರದಂದು ಪ್ರಕಟಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: ಜಾನುಕೊಂಡ ಗ್ರಾಪಂ ನೂತನ ಅಧ್ಯಕ್ಷರಾಗಿ‌ ಮಂಜುಳಾ ಸ್ವಾಮಿ ಆಯ್ಕೆ

    ಈ ಕುರಿತು ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ, ಸಂಬಂಧಪಟ್ಟ ತಹಶೀಲ್ದಾರ್, ಕೃಷಿ, ತೋಟಗಾರಿಕೆ ಇಲಾಖೆಯ ಕಚೇರಿಗಳಿಗೆ 7 ದಿನಗಳೊಳಗಾಗಿ ಸಲ್ಲಿಸಬಹುದು.

    ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದರೆ ಪಟ್ಟಿಯನ್ನು ಅಂತಿಮಗೊಳಿಸಿ ನಿಯಮಾನುಸಾರ ಪರಿಹಾರ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top