Connect with us

    ಬಾಂಗ್ಲಾ ಹಿಂದುಗಳ ಪರ ಚಿತ್ರದುರ್ಗದಲ್ಲಿ ಹೋರಾಟ | RSSನ ಪಟ್ಟಾಭಿರಾಮ್, ಮಾದಾರ ಚನ್ನಯ್ಯ ಶ್ರೀ ಭಾಗೀ

    Hindu hitharakshana samiti

    ಮುಖ್ಯ ಸುದ್ದಿ

    ಬಾಂಗ್ಲಾ ಹಿಂದುಗಳ ಪರ ಚಿತ್ರದುರ್ಗದಲ್ಲಿ ಹೋರಾಟ | RSSನ ಪಟ್ಟಾಭಿರಾಮ್, ಮಾದಾರ ಚನ್ನಯ್ಯ ಶ್ರೀ ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 04 DECEMBER 2024

    ಚಿತ್ರದುರ್ಗ: ವಿಶ್ವವೇ ಒಂದು ಕುಟುಂಬ ಎಂದು ನಂಬಿದವರು ಭಾರತೀಯರು. ಭಾರತದಲ್ಲಿ ಪ್ರತಿಭಟನೆ, ಜಾಗೃತಿ ಸಭೆಗಳ ಮೂಲಕ ಬಾಂಗ್ಲಾದಲ್ಲಿರುವ ಹಿಂದುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು RSS ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.

    ಹಿಂದೂ ಹಿತರಕ್ಷಣಾ ಸಮಿತಿಯಿಂದ ಬಾಂಗ್ಲಾದಲ್ಲಿರುವ ಹಿಂದುಗಳ ಪರವಾಗಿ ಹಾಗೂ ಬಾಂಗ್ಲಾ ಸರ್ಕಾರ ಬಂಧಿಸಿರುವ ಇಸ್ಕಾನ್ ಸಂಸ್ಥೆಯ ಸಂತ ಚಿನ್ಮಯಿ ಕೃಷ್ಣದಾಸ್ ಬಿಡುಗಡೆಗೆ ಆಗ್ರಹಿಸಿ ಬುಧವಾರ ನಡೆಸಿದ ಪ್ರತಿಭಟನೆ ನಂತರ ಒನಕೆ ಓಬವ್ವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

    ಇದನ್ನೂ ಓದಿ: PDO ನೇಮಕಾತಿಗೆ ಪರೀಕ್ಷೆ | ಅಗತ್ಯ ಸಿದ್ಧತೆ ಪೊಲೀಸರ ನಿಯೋಜನೆಗೆ ಸೂಚನೆ

    ಬಾಂಗ್ಲಾ ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿ, ಹತ್ಯೆ, ಆಸ್ತಿಪಾಸ್ತಿ ಲೂಟಿ ಮಾಡುವ ಮೂಲಕ ಹೇಯ ಕೃತ್ಯ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

    ಈ ಸಭೆ ಯಾವುದೇ ಸರ್ಕಾರ, ರಾಜಕೀಯ ಪಕ್ಷ, ಮುಸ್ಲೀಂ ಸಮುದಾಯದ ವಿರುದ್ಧ ಅಲ್ಲ. ಬಾಂಗ್ಲಾ ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಅಲ್ಲಿನ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸುವ ಸಭೆಯಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳವ ಸಭೆ ಎಂದು ತಿಳಿಸಿದರು.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ 7.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆ | ಯಾವ ವಾರ್ಡ್‍ನಲ್ಲಿ ಯಾವ ಕಾಮಗಾರಿ ಇಲ್ಲಿದೆ ಮಾಹಿತಿ

    ಇಂದಿನ ಬಾಂಗ್ಲಾ ಸರ್ಕಾರ, ಮಿಲಿಟರಿ ಸೇರಿದಂತೆ ರಕ್ಷಣೆ ನೀಡಬೇಕಾದ ಸಂಸ್ಥೆಗಳು ದೌರ್ಜನ್ಯ ನಿಲ್ಲಿಸುವ ಬದಲು ಮೂಕಪ್ರೇಕ್ಷಕರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಬಾಂಗ್ಲಾದೇಶದ ಹಿಂದೂಗಳ ವಿರುದ್ಧ ಬಲವಂತವಾಗಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ತಮ್ಮ ಸ್ವರಕ್ಷಣೆಗಾಗಿ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಎತ್ತಿದ್ದ ಧ್ವನಿಯನ್ನು ಹತ್ತಿಕ್ಕುವ ಮತ್ತು ಅವರ ಮೇಲೆ ಅನ್ಯಾಯ, ಅತ್ಯಾಚಾರ ನಡೆಸುವ ಮೂಲಕ ಬೆದರಿಸಲಾಗುತ್ತಿದೆ. ಬಾಂಗ್ಲಾದಲ್ಲಿ ಇಂತಹ ಘಟನೆಗಳ ವಿರುದ್ಧ ಹಿಂದುಗಳ ಪರವಾಗಿ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್‍ನ ಸನ್ಯಾಸಿ ಚಿನ್ಮಯ್ ಕೃಷ್ಣದಾಸರನ್ನು ಬಾಂಗ್ಲಾದೇಶದ ಸರಕಾರ ಬಂಧಿಸಿದೆ. ಇದು ಖಂಡನೀಯ ಮತ್ತು ಅನ್ಯಾಯ ಎಂದರು.

    ಇದನ್ನೂ ಓದಿ: ಮತ್ತೆ ಹರಿದು ಬಂತು ವಿವಿ ಸಾಗರಕ್ಕೆ ನೀರು | ಜಲಾಶಯ ಭರ್ತಿಗೆ ಇನ್ನೆಷ್ಟು ಅಡಿ ಬಾಕಿ ಇದೆ ಗೊತ್ತಾ..?

    ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸುವುದನ್ನು ಅಲ್ಲಿನ ಸರ್ಕಾರ ಖಚಿತಪಡಿಸಬೇಕು. ಇಸ್ಕಾನ್‍ನ ಚಿನ್ಮಯ್ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು. ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯುವ ತನ್ನ ಪ್ರಯತ್ನವನ್ನು ಸರ್ಕಾರ ಸಾಧ್ಯವಾದಷ್ಟು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    Hindu hitharakshana samiti

    ಆರೆಸ್ಸೆಸ್ಸ್‍ನ ಪಟ್ಟಾಭಿರಾಮ್, ಮಾದಾರ ಚನ್ನಯ್ಯ ಶ್ರೀ ಭಾಗೀ

    ಈ ಮಹತ್ವಪೂರ್ಣ ಸಮಯದಲ್ಲಿ ಭಾರತ ಮತ್ತು ವೈಶ್ವಿಕ ಸಮುದಾಯ ಹಾಗೂ ಸಂಸ್ಥೆಗಳು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಜೊತೆ ನಿಲ್ಲಬೇಕು. ಅವರಿಗೆ ನಾವು ನಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಮತ್ತು ಇದಕ್ಕಾಗಿ ನಮ್ಮ ಸರ್ಕಾರಗಳನ್ನು ಸಾಧ್ಯವಿರುವ ಎಲ್ಲ ಪ್ರಯತ್ನಗಳ ಮೂಲಕ ಒತ್ತಾಯಿಸಬೇಕು. ಇದು ವಿಶ್ವಶಾಂತಿ ಮತ್ತು ಸಹೋದರತ್ವಕ್ಕೆ ಅವಶ್ಯಕವಾಗಿದೆ ಎಂದು ಹಿಂದು ಹಿತರಕ್ಷಣಾ ಸಮಿತಿಯಿಂದ ಆಗ್ರಹಿಸಲಾಯಿತು.

    ಇದನ್ನೂ ಓದಿ: ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ | ರೈತರಲ್ಲಿ ಸಂತಸ

    ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತೀಯರಾದ ನಾವು ನಮ್ಮಲ್ಲಿ ಎಲ್ಲರನ್ನು ಒಂದುಗೂಡಿಸುತ್ತೇವೆ. ಆದರೆ, ಬೇರೆ ರಾಷ್ಟ್ರಗಳು ನಮ್ಮ ಮೇಲೆ ಹಲ್ಲೆ ಮಾಡುವ ಕಾರ್ಯವನ್ನು ಮಾಡುತ್ತಿರುವುದು ಖಂಡನೀಯ, ಬೇರೆ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಬಂದವರಿಗೆ ಸಹಾಯ ಮಾಡುತ್ತೇವೆ. ಆದರೆ, ಬೇರೆ ರಾಷ್ಟ್ರಗಳಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುವುದು ಆತಂಕಕಾರಿ ಎಂದರು.

    ಬಾಂಗ್ಲಾದಲ್ಲಿನ ಹಿಂದುಗಳ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕು. ಮಧ್ಯಸ್ಥಿಕೆ ವಹಿಸಿ ಅಲ್ಲಿನ ಹಿಂದುಗಳ ಸಮೀಕ್ಷೆ ನಡೆಸಿ ರಕ್ಷಣೆ ಮಾಡಬೇಕು.

    ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಸುರೇಶ್ ಸಿದ್ದಾಪುರ, ರಾಮದಾಸ್, ಸಂಘ ಪರಿವಾರದ ರಾಜಕುಮಾರ್, ನಾಗರಾಜ್, ವಿಠಲ್ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top