ಮುಖ್ಯ ಸುದ್ದಿ
ಜಟ್‌ಪಟ್‌ನಗರ ಸರ್ಕಾರಿ ಶಾಲೆಯ ಬಾಲಕ ರಾಜ್ಯಕ್ಕೆ ದ್ವಿತೀಯ | ರಾಜ್ಯಮಟದ ಕೀಬೋರ್ಡ್ ಸ್ಪರ್ಧೆ


ಚಿತ್ರದುರ್ಗ ನ್ಯೂಸ್.ಕಾಂ: ಬೆಂಗಳೂರಿನ ರಾಜ್ಯ ಬಾಲಭವನ ಸೊಸೈಟಿಯಲ್ಲಿ ನ.21 ರಿಂದ 23 ರವರೆಗೆ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೀಬೋರ್ಡ್ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಟ್‌ಪಟ್‌ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರ್.ಶಾಲೋಮ್ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಇದನ್ನೂ ಓದಿ; ಕನಕ ಜಯಂತಿಯಲ್ಲಿ ಮಹಿಳೆಯರು ಭಾಗವಹಿಸಲು ಮನವಿ
09 ರಿಂದ 16 ವರ್ಷದ ಒಳಗಿನ ಮಕ್ಕಳಿಗಾಗಿ ಚಿತ್ರದುರ್ಗ ಬಾಲಭವನದಿಂದ ನ.20 ರಂದು ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ 10 ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗಿತ್ತು.
ಪ್ರದರ್ಶನ ಕಲೆಯಲ್ಲಿ ಕೆ.ಕೆ.ಇಂಟರ್ ನ್ಯಾಷಿನಲ್ ಶಾಲೆ ಕೆ.ಪಿ.ಎಂ. ಗುರುದೇವ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಡಶಾಲೆ ವಿಭಾಗದ ಸಂಜನಾ .ಡಿ, ಜ್ಞಾನ ವಿಕಾಸ ವಿದ್ಯಾಸಂಸ್ಥೆ ನಿಹಾರಿಕ, ವಿ.ಪಿ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೈಷ್ಣವಿ,ಎಸ್, ವಾದ್ಯ ಸಂಗೀತದಲ್ಲಿ ಆರ್.ಶಾಲೋಮ್, ಚಿತ್ರಕಲೆಯಲ್ಲಿ ಸರ್ಕಾರಿ ಕೋಟೆ ಪ್ರೌಡಶಾಲೆ ವಿಕಾಸ್. ಎಸ್. ಜ್ಞಾನ ಭಾರತಿ ವಿದ್ಯಾ ಸಂಸ್ಥೆ ಧ್ಯೇಯ.ಡಿ.ವಿ, ಶ್ರೀಪುಲಕೇಶಿ, ವಿಜ್ಞಾನದಲ್ಲಿ ಸೃಜನಾತ್ಮಕ ಅವಿಷ್ಕಾರದಲ್ಲಿ ಡಾನ್ ಬಾಸ್ಕೋ ಶಾಲೆಯ ನಿಭೋದ್ ಚಕ್ರವರ್ತಿ, ಹಿರಿಯೂರು ತಾಲ್ಲೂಕು ಪಾಲವ್ವನಹಳ್ಳಿ ಸರ್ಕಾರಿ ಪ್ರೌಡಶಾಲೆ ರಮ್ಯ ಜಿ.ಅರ್. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವಿಜೇತ ವಿದ್ಯಾರ್ಥಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳ್ಕರ್, ರಾಜ್ಯ ಬಾಲಭವನದ ಕಾರ್ಯದರ್ಶಿ ಶ್ರೀನಿಶ್ಚಲ್, ಆಡಳಿತಾಧಿಕಾರಿ ಉಷಾ ಅವರು ಬಹಮಾನವನ್ನು ವಿತರಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಅರ್, ಬಣಾಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
