Connect with us

    24,228 ವಿದ್ಯಾರ್ಥಿಗಳಿಗೆ 78 ಪರೀಕ್ಷಾ ಕೇಂದ್ರ | ಪ್ರತಿ ಹಂತಕ್ಕೂ ಪೊಲೀಸ್‌ ಭದ್ರತೆ

    ಮುಖ್ಯ ಸುದ್ದಿ

    24,228 ವಿದ್ಯಾರ್ಥಿಗಳಿಗೆ 78 ಪರೀಕ್ಷಾ ಕೇಂದ್ರ | ಪ್ರತಿ ಹಂತಕ್ಕೂ ಪೊಲೀಸ್‌ ಭದ್ರತೆ

    CHITRADURGA NEWS | 17 MARCH 2024
    ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ರಾಜಕಾರಣಿಗಳು ಕಸರತ್ತು ನಡೆಸುತ್ತಿದ್ದರೆ, ಜೀವನದ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲು ಸಿದ್ಧವಾಗಿದ್ದಾರೆ ವಿದ್ಯಾರ್ಥಿಗಳು. ಜಿಲ್ಲಾಡಳಿತ ಮಾತ್ರ ಚುನಾವಣೆ, ಪರೀಕ್ಷೆ ಎರಡನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸನ್ನದ್ಧವಾಗಿದೆ.

    ಮಾರ್ಚ್‌ 25 ರಿಂದ ಏಪ್ರಿಲ್‌ 6ರವರೆಗೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ 78 ಕೇಂದ್ರದಲ್ಲಿ 24,228 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    ‘ಎಸ್‌ಎಸ್‌ಎಲ್‌ ಸಿ ವಾರ್ಷಿಕ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾಗಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಮೌಲ್ಯಮಾಪನದ ಜೊತೆಗೆ, ಶಿಕ್ಷಕರ ಬೋಧನಾ ಸಾಮಾಥ್ರ್ಯ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಮೌಲ್ಯಮಾಪನದ ಮಾನದಂಡವು ಆಗಿದೆ. ಹೀಗಾಗಿ ಪರೀಕ್ಷೆ ಪಾವಿತ್ರ್ಯತೆ ಹಾಗೂ ನೈತಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರೀಕ್ಷಾ ಕಾರ್ಯಗಳನ್ನು ಮುತುವರ್ಜಿಯಿಂದ ನಿರ್ವಹಿಸುವಂತೆ’ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: https://chitradurganews.com/date-fixed-for-lok-samara-a-26-voting-on-may-7/

    ‘ಪರೀಕ್ಷಾ ಕಾರ್ಯಗಳಲ್ಲಿ ಎಲ್ಲೂ ಲೋಪವಾಗದಂತೆ ಎಚ್ಚರವಹಿಸಬೇಕು. ಎಲ್ಲಾ ತಾಲ್ಲೂಕು ಉಪಖಜಾನೆಗಳಿಂದ ನಿಗದಿ ವೇಳೆಗೆ ತಹಶೀಲ್ದಾರ್, ಬಿಇಓ ಹಾಗೂ ಖಜಾನಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಪತ್ರಿಕೆ ಹಾಗೂ ಖಾಲಿ ಉತ್ತರ ಪತ್ರಿಕೆಗಳನ್ನು ಹೊರತೆಗದು ಮಾರ್ಗಾಧಿಕಾರಿಗಳಿಗೆ ನೀಡಬೇಕು. ಪರೀಕ್ಷಾ ನಂತರ ಉತ್ತರ ಪತ್ರಿಕೆಗಳನ್ನು ಮಾರ್ಗಾಧಿಕಾರಿಗಳೇ ಸ್ಟ್ರಾಂಗ್ ರೂಮ್‍ಗೆ ತಲುಪಿಸಬೇಕು. ಈ ಸಮಯದಲ್ಲಿ ತಪ್ಪದೇ ಪೊಲೀಸ್ ಭದ್ರತೆಯನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: https://chitradurganews.com/farmers-struggle-to-save-crops/

    ‘ಬೇಸಿಗೆ ಕಾಲವಾದ್ದರಿಂದ ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಪ್ರಥಮ ಚಿಕಿತ್ಸಾ ಪರಿಕರದೊಂದಿಗೆ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು. ಸಾರಿಗೆ ಅಧಿಕಾರಿಗಳು ಮಾರ್ಗಾಧಿಕಾರಿಗಳಿಗೆ ಅಗತ್ಯ ಇರುವ ವಾಹನಗಳನ್ನು ಒದಗಿಸುವಂತೆ’ ಸೂಚನೆ ನೀಡಿದ್ದಾರೆ.

    ಕ್ಲಿಕ್ ಮಾಡಿ ಓದಿ: https://chitradurganews.com/2000-acres-of-land-will-be-green/

    ‘ಜಿಲ್ಲೆಯಲ್ಲಿ 5 ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಾಟಕ್ಕೆ ಒಟ್ಟು 34 ಮಾರ್ಗಗಳನ್ನು ಗುರುತಿಸಲಾಗಿದೆ. ಚಳ್ಳಕೆರೆ ತಾಲ್ಲೂಕಿನ 18 ಪರೀಕ್ಷಾ ಕೇಂದ್ರಗಳಲ್ಲಿ 5387 ವಿದ್ಯಾರ್ಥಿಗಳು, ಚಿತ್ರದುರ್ಗ ತಾಲ್ಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ 6662 ವಿದ್ಯಾರ್ಥಿಗಳು, ಹಿರಿಯೂರು ತಾಲ್ಲೂಕಿನ 13 ಪರೀಕ್ಷಾ ಕೇಂದ್ರಗಳಲ್ಲಿ 3716 ವಿದ್ಯಾರ್ಥಿಗಳು, ಹೊಳಲ್ಕೆರೆ ತಾಲ್ಲೂಕಿನ 08 ಪರೀಕ್ಷಾ ಕೇಂದ್ರಗಳಲ್ಲಿ 2739 ವಿದ್ಯಾರ್ಥಿಗಳು, ಹೊಸದುರ್ಗ ತಾಲ್ಲೂಕಿನ 10 ಪರೀಕ್ಷಾ ಕೇಂದ್ರಗಳಲ್ಲಿ 3,333 ವಿದ್ಯಾರ್ಥಿಗಳು, ಮೊಳಕಾಲ್ಮೂರು ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ 2391 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎನ್ನುತ್ತಾರೆ ಚಿತ್ರದುರ್ಗ ಬಿಇಓ ನಾಗಭೂಷಣ್‌.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top