ಮಾರುಕಟ್ಟೆ ಧಾರಣೆ
ಕ್ರೀಡಾ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ SRS ವಿದ್ಯಾರ್ಥಿಗಳ ಕಮಾಲ್
ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಎಸ್‍ಆರ್‍ಎಸ್ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಎಸ್‍ಆರ್‍ಎಸ್ ಆಸ್ಕರ್ ಫರ್ನಾಂಡಿಸ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಇಲ್ಲಿನ 8ನೇ ತರಗತಿ ವಿದ್ಯಾರ್ಥಿಗಳಾದ ಎಂ.ವಿ.ನಿತಿಲ, ಅಧಿತಿ ಕೆ.ರಾವ್, ಎಸ್.ಸಿಂಚನ ಹಾಗೂ ಜಿ.ಬಿಂದುಶ್ರೀ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಪ್ರತಿಭಾ ಕರಾಂಜಿಯಲ್ಲಿ ವಿದ್ಯಾರ್ಥಿಗಳ ಸಾಧನೆ:
ಮದಕರಿಪುರದ ಭಾರತೀಯ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್‍ಆರ್‍ಎಸ್ ಆಸ್ಕರ್ ಫರ್ನಾಂಡಿಸ್ ಇಂಟರ್‍ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕವನ ವಾಚನ ಸ್ಪರ್ಧೆಯಲ್ಲಿ ಭಾನುಪ್ರಿಯ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಧರಣೇಶ್ ಪ್ರಥಮ, ಕವ್ವಾಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಸೈಯದಾ ಬಾನು, ಶಿಫಾ ರಹಿಮಾ, ಮಾಹಿನ್ ಸೈಯದಾ, ಫಾತಿಮಾ, ಮುಝಮ್ಮಿಲ್ ಕಲಂದರ್ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: ಭಾರತ ಮಹಿಳಾ ಕ್ರಿಕೇಟ್ ತಂಡದ ನಾಯಕಿ ವರ್ಷಾಗೆ ಅಭಿನಂದನಾ ಸಮಾರಂಭ
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಅಕ್ಷರ, ಭೂಮಿಕ ತಾನ್ಯ, ಪಲ್ಲವಿ, ತೇಜಸ್ವಿನಿ ಮತ್ತು ಕೇಸರಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವರ್ಷಿಣಿ, ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ತೇಜಸ್ವಿನಿ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ತಬರುಜ್ ಅಫಿಫಾ, ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆಯಲ್ಲಿ ತೇಜಸ್, ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಅಕ್ಷಿತಾ, ವೇಷಭೂಷಣ ಸ್ಪರ್ಧೆಯಲ್ಲಿ ಕ್ಷೇಮಾ, ಆಶುಭಾಷಣ ಸ್ಪರ್ಧೆಯಲ್ಲಿ ಕೀರ್ತನಾ ಹಾಗೂ ಅರೆಬಿಕ್ ಧಾರ್ಮಿಕ ಪಠಣದಲ್ಲಿ ತಬರುಜ್ ಅಫಿಫಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.