Connect with us

    ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ಜ್ಯೋತಿ ಯಾತ್ರೆ | ಕಬೀರಾನಂದ ಶ್ರೀಗಳಿಂದ ಅದ್ದೂರಿ ಸ್ವಾಗತ 

    Sri Siddarudh Mahaswami Jyoti Yatra

    ಮುಖ್ಯ ಸುದ್ದಿ

    ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ಜ್ಯೋತಿ ಯಾತ್ರೆ | ಕಬೀರಾನಂದ ಶ್ರೀಗಳಿಂದ ಅದ್ದೂರಿ ಸ್ವಾಗತ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 12 JANUARY 2025

    ಚಿತ್ರದುರ್ಗ: ಜಗದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ ಜ್ಯೋತಿ ಯಾತ್ರೆ ಶನಿವಾರ ಸಂಜೆ ಚಿತ್ರದುರ್ಗ ನಗರಕ್ಕೆ ಆಗಮಿಸಿದಾಗ ಶ್ರೀ ಕಬೀರಾನಂದಶ್ರಾಮದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    Also Read: Kannada Novel: 16. ಬಡಗಿ ಕಂಡ ಗೌನಳ್ಳಿ

    ಹುಬ್ಬಳ್ಳಿಯ ಶ್ರೀ ಸಿದ್ದರೂಢಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ವತಿಯಿಂದ ಶ್ರೀ ಸಿದ್ದಾರೂಢರ 190ನೇ ಜಯಂತ್ಯುತ್ಸವ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ ಶ್ರೀ ಸಿದ್ದರೂಢರ ಕಥಾಮೃತದ ಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತವಾಗಿ 2024 ಡಿ.23 ರಿಂದ 2025 ಫೆ.19ರವರೆಗೆ ಹಮ್ಮಿಕೊಳ್ಳಲಾಗಿದೆ.

    ನಗರದ ಮದಕರಿ ವೃತ್ತದಲ್ಲಿ ಹಿರಿಯೂರು ಕಡೆಯಿಂದ ಆಗಮಿಸಿದ ಜ್ಯೋತಿ ಯಾತ್ರೆಯನ್ನು ಪೂರ್ಣ ಕುಂಭ, ನಾಗಸ್ವರ ಹಾಗೂ ಆರತಿ ತಟ್ಟೆಯೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.

    2024ರ ಡಿ.23ರಂದು ಶ್ರೀ ಸಿದ್ದರೂಢ ಜನ್ಮ ಸ್ಥಳವಾದ ಸುಕ್ಷೇತ್ರ ಚಳಖಾಪುರದಿಂದ ಪ್ರಾರಂಭವಾದ ಜ್ಯೋತಿ ಯಾತ್ರೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಸಂಚಾರ ಮಾಡಿ 2025 ಫೆ, 18 ರಂದು ಉಣಕಲ್ ಶ್ರೀ ಸಿದ್ದಪ್ಪಜ್ಜನ ದೇವಸ್ಥಾನದಿಂದ ಶ್ರೀ ಮಠ ತಲುಪಲಿದೆ.

    Also Read: ST ಪಟ್ಟಿಗೆ ಕಾಡುಗೊಲ್ಲ ಸಮುದಾಯ | ಅನುಸರಣ ವರದಿ ಶೀಘ್ರ ಕೇಂದ್ರಕ್ಕೆ | CM ಭರವಸೆ 

    ನಗರದ ಮದಕರಿ ವೃತ್ತದಿಂದ ಪ್ರಾರಂಭವಾದ ಜ್ಯೋತಿ ಯಾತ್ರೆಯೂ ಜೋಗಿಮಟ್ಟಿ ರಸ್ತೆಯ ಮೂಲಕ ತಾರಾ ವಾಣಿಜ್ಯ ಸಂಸ್ಥೆಯ ಪಕ್ಕದ ರಸ್ತೆಯಿಂದ ಕರುವಿನಕಟ್ಟೆ ವೃತ್ತವನ್ನು ಹಾದು ಕಬೀರಾನಂದಾಶ್ರಮವನ್ನು ತಲುಪಿತು.

    ದಾರಿಯುದ್ದಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಸಿದ್ದರೂಢರವರ ನಾಮಸ್ಮರಣೆಯನ್ನು ಮಾಡಿಕೊಂಡು ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.

    ಫೆ.19 ರಂದು ಹುಬ್ಬಳ್ಳಿಯ ಶ್ರೀ ಜಡಿಸಿದ್ದಾಶ್ರಮದಿಂದ ಶ್ರೀ ಸಿದ್ಧಾರೂಢರ ಹಾಗೂ ಶ್ರೀ ಗುರುನಾಥಾರೂಢರ ಮೂರ್ತಿಗಳ ಮೆರವಣಿಗೆಯ ಮೂಲಕ ಸದ್ಬಕ್ತರು ಶ್ರೀ ಸಿದ್ದಾರೂಢರ ಕಥಾಮೃತವನ್ನು ಮಸ್ತಕದ ಮೇಲೆ ಇರಿಸಿಕೊಂಡು ಮೆರವಣಿಗೆಯ ಮೂಲಕ ಶ್ರೀ ಮಠವನ್ನು ತಲುಪಲಿದೆ.

    ಫೆ.20 ರಿಂದ 26ರವರೆಗೆ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್ ನಡೆಯಲಿದ್ದು, ಇದರಲ್ಲಿ ನಾಡಿನ ವಿವಿಧ ಮಠಾಧೀಶರು ಜಗದ್ಗುರು, ಮಹಾಮಂಡಲೇಶ್ವರರು, ಸಾಧುಸಂತರು ಆಗಮಿಸಲಿದ್ದಾರೆ.

    Also Read: ಪೊಲೀಸ್ ಕ್ರಿಕೆಟ್ ಕಪ್ | ಸಚಿವ ಡಿ.ಸುಧಾಕರ್ ಚಾಲನೆ

    ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು, ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಜ್ಯೋತಿ ಯಾತ್ರೆಯ ಸದಸ್ಯ ಶಂಕರಗೌಡ ಎಚ್.ಸಂಗೊಂದಿ, ಈರಣ್ಣ ಎಸ್.ಪಾಳೇದ, ಶಿವಮೂರ್ತಿ ಶಿವಸಿಂಪಿ, ನಿತ್ಯಾನಂದ ಶ್ರೀಗಳು, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ಈರಣ್ಣ, ವಿ.ಎಲ್.ಪ್ರವೀಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top