Connect with us

    ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಸಿದ್ಧತೆ ಗುರುರಾಯರ ಆರಾಧನಾ ಪಂಚರಾತ್ರೋತ್ಸವಕ್ಕೆ ಕ್ಷಣಗಣನೆ

    ಮುಖ್ಯ ಸುದ್ದಿ

    ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಸಿದ್ಧತೆ ಗುರುರಾಯರ ಆರಾಧನಾ ಪಂಚರಾತ್ರೋತ್ಸವಕ್ಕೆ ಕ್ಷಣಗಣನೆ

    ಶ್ರೀ ರಾಘವೇಂದ್ರ ಸ್ವಾಮಿ‌ ಆರಾಧನೆಚಿತ್ರದುರ್ಗ ನ್ಯೂಸ್‌

    ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 352 ನೇ ಆರಾಧನಾ ಪಂಚರಾತ್ರೋತ್ಸವದ ಪೂರ್ವಾರಾಧನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಆ.31ರಿಂದ ಸೆ.3ರವರೆಗೆ ಉತ್ಸವ ನಡೆಯಲಿದೆ.

    ನಗರದ ಆನೆಬಾಗಿಲು ಸಮೀಪದ ಶ್ರೀಮನ್‌ ಮಧ್ವಾಚಾರ್ಯ ಮೂಲ ಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಸಿದ್ಧತೆಗಳು ಭಕ್ತಿ, ಭಾವನಾತ್ಮಕವಾಗಿ ನಡೆಯುತ್ತಿವೆ.

    ಸನ್ನಿಧಾನದಲ್ಲಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||’ ಧ್ಯಾನ ಶ್ಲೋಕ ಭಕ್ತಿಲೋಕವನ್ನೇ ಸೃಷ್ಟಿಸಿದೆ. ಪಂಚರಾತ್ರೋತ್ಸವದ ಹಿನ್ನಲೆಯಲ್ಲಿ ಮಂಗಳವಾರ ಮುಂಜಾನೆ 6.30 ರಿಂದ ಋಗ್ವೇದ ನಿತ್ಯ, ನೂತನ ಉಪಾಕರ್ಮ ಹಾಗೂ ಬುಧವಾರ ಮುಂಜಾನೆ 6.30ರಿಂದ ಯಜುರ್ವೇದ ನಿತ್ಯ, ನೂತನ ಉಪಾಕರ್ಮ ನಡೆದವು.

    ಸಂಜೆ 6.30ಕ್ಕೆ ಧ್ವಜಾರೋಹಣ, ಗೋಪೂಜೆ, ಧನ–ಧಾನ್ಯ ಪೂಜೆ, ಲಕ್ಷ್ಮಿ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ನಡೆಯಲಿವೆ. ಈ ಪೂಜಾಕಾರ್ಯಕ್ಕೆ ಭಕ್ತರ ಜತೆ ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಸ್‌.ಮಂಜುನಾಥ್‌, ಆನಂದರಾಮ ಉಳ್ಳೂರು, ವೇದವ್ಯಾಸಚಾರ್‌ ಸಾಕ್ಷಿಯಾಗಲಿದ್ದಾರೆ.

    ಆ.31ರ ಗುರುವಾರ ಗುರುಸಾರ್ವಭೌಮರ ಪೂರ್ವಾರಾಧನೆ, ಸಂಜೆ 5 ರಿಂದ 6 ರವರೆಗೆ ಪಾಂಡುರಂಗ ಭಜನಾ ಮಂಡಳಿಯಿಂದ ಭಜನೆ, 6.30 ರಿಂದ 7.30 ರವರೆಗೆ ಸಿಂಧೂರ ದರ್ಶನ್‌ ಮತ್ತು ಸೌಂದರ್ಯ, ಸಂಗೀತ ಅವರಿಂದ ಭರತನಾಟ್ಯ.
    ಸೆ.1ರ ಶುಕ್ರವಾರ ಗುರುಸಾರ್ವಭೌಮರ ಮಧ್ಯಾರಾಧನೆ, ಸಂಜೆ 5 ರಿಂದ 6 ರವರೆಗೆ ಬ್ರಹ್ಮಚೈತನ್ಯ ಭಜನಾ ಮಂಡಳಿಯಿಂದ ಭಜನೆ. 6.30 ರಿಂದ 7.30 ರವರೆಗೆ ಅಂಜನಾ ನೃತ್ಯ ಕಲಾ ಕೇಂದ್ರದ ನಂದಿನಿ ಶಿವಪ್ರಕಾಶ್‌ ಅವರಿಂದ ಭರತನಾಟ್ಯ.

    ಸೆ.2 ರ ಶನಿವಾರ ಗುರುಸಾರ್ವಭೌಮರ ಉತ್ತರಾರಾಧನೆ, ಬೆಳಿಗ್ಗೆ 10 ಗಂಟೆಗೆ ನಗರದ ರಾಜಬೀದಿಗಳಲ್ಲಿ ಮಹಾ ರಥೋತ್ಸವ, ಸಂಜೆ 5 ರಿಂದ 6 ರವರೆಗೆ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ. 6.30 ರಿಂದ 7.30 ರವರೆಗೆ ಹರಿಹರದ ಫಲ್ಗುಣಿ ಕಲಾತಂಡದಿಂದ ನೃತ್ಯ, ಸ್ತುತಿ ಆರ್‌.ರಾವ್‌ ಇವರಿಂದ ದಾಸವಾಣಿ.

    ಸೆಪ್ಟೆಂಬರ್.3 ರ ಭಾನುವಾರ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ. ಸಂಜೆ 5 ರಿಂದ 6 ರವರೆಗೆ ಸರಸ್ವತಿ ಭಜನಾ ಮಂಡಳಿಯಿಂದ ಭಜನೆ. 6.30 ರಿಂದ 7.30 ರವರೆಗೆ ಸಂಧ್ಯಾ ಜೈಶಂಕರ್‌ ತಾಳ್ಯ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.

    ಆರಾಧನಾ ಮಹೋತ್ಸವದ ದಿನಗಳಲ್ಲಿ ನಿತ್ಯ ಮುಂಜಾನೆ 5.30ಕ್ಕೆ ನಿರ್ಮಾಲ್ಯ, 7.30ಕ್ಕೆ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ, 9.30ಕ್ಕೆ ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ 12ಕ್ಕೆ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ. ಸಂಜೆ 7.30ರಿಂದ 9.30ರವರೆಗೆ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ವಾವಧಾನ, ಮಹಾಮಂಗಳಾರತಿ ನಡೆಯಲಿವೆ. ಮೂರು ದಿನಗಳ ಕಾಲ ರಾಯರ ಮಹಾಪ್ರಸಾದ ವಿತರಣೆ ನೆರವೇರಿಸಲಾಗುತ್ತದೆ.

    (ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)

    (ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ  https://www.facebook.com/chitradurganews?mibextid=ZbWKwL)

     

    Continue Reading
    You may also like...
    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top