ಮುಖ್ಯ ಸುದ್ದಿ
Sirigere Swamiji: ಸಿರಿಗೆರೆ ಶ್ರೀಗಳ ನಿರ್ಧಾರಕ್ಕೆ ನಮ್ಮ ಬೆಂಬಲ | ಸಮಸ್ಯೆಗಳಿದ್ದರೆ ಮಠಕ್ಕೆ ಬನ್ನಿ
CHITRADURGA NEWS | 15 AUGUST 2024
ಚಿತ್ರದುರ್ಗ: ತರಳಬಾಳು ಮಠದ ವಿಚಾರವಾಗಿ ಕೆಲವರು ಟಿವಿ ಮತ್ತು ಪತ್ರಿಕೆಗಳಲ್ಲಿ ತಪ್ಪು ಮಾಹಿತಿಗಳನ್ನು ಪ್ರಚುರಪಡಿಸುತ್ತಿದ್ದಾರೆ. ಇದು ಮಠಕ್ಕೆ ಶೋಭೆ ತರುವಂತದ್ದಲ್ಲ ಎಂದು ಸಿರಿಗೆರೆ ಸಮೀಪದ ದೊಡ್ಡಾಲಗಟ್ಟ ಗ್ರಾಮಸ್ಥರು ತಿಳಿಸಿದ್ದಾರೆ.
ಸಿರಿಗೆರೆ ಸಮೀಪದ ದೊಡ್ಡಾಲಗಟ್ಟ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಗೋವಿಂದರಾಜನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.
ಕ್ಲಿಕ್ ಮಾಡಿ ಓದಿ: ವಿಧಾನಸೌಧದ ಮುಂದೆ ಚಳ್ಳಕೆರೆ ಯುವಕನ ಆಟಾಟೋಪ | ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್
ಈ ವೇಳೆ ಮಾತನಾಡಿದ ಭಕ್ತರು, ಸಮಸ್ಯೆಗಳಿದ್ದರೆ ಮಠಕ್ಕೆ ಬಂಧು ಶ್ರೀಗಳ ಬಳಿ ಮಾತನಾಡಬಹುದು. ಹೀಗೆ ಹಾದಿಬೀದಿಯಲ್ಲಿ ಮಾತಾಡಿ ಮಠದ ಘನತೆಗೆ ಧಕ್ಕೆ ತರಬಾರದು. ಶ್ರೀಗಳು ಮತ್ತು ಮಠದ ಬಗ್ಗೆ ಗ್ರಾಮಸ್ಥರಿಗೆ ಅಪಾರ ಶ್ರದ್ಧೆ ಇದೆ. ಶ್ರೀಗಳು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಭರಮಸಾಗರ ಏತ ನೀರಾವರಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಹರಿಸುವ ಕೆಲಸ ಆಗುತ್ತಿದೆ ಎಂದರು.
ಭರಮಸಾಗರ ಏತ ನೀರಾವರಿ ಯೋಜನೆಗೆ ಭರಮಣ್ಣ ನಾಯಕನ ಕೆರೆಯು ಡ್ಯಾಂ ಇದ್ದಂತೆ. ಅದು ತುಂಬಿದರೆ ಸುತ್ತಲಿನ 42 ಕೆರೆಗಳ ವ್ಯಾಪ್ತಿಗೆ ಸೇರುವ ರೈತ ಸಮುದಾಯ ನಿಶ್ಚಿಂತರಾಗಿ ಇರಬಹುದು. ಏತ ನೀರಾವರಿ ಕಾಮಗಾರಿಯಲ್ಲಿ ಕೆಲವು ತಾಂತ್ರಿಕ ಲೋಪಗಳು ಕಂಡುಬಂದಿರುವುದರಿಂದ ಕೆಲವು ಕೆರೆಗಳಿಗೆ ನೀರು ಬರುತ್ತಿಲ್ಲ ಎನ್ನುವ ದೂರುಗಳು ಇವೆ. ಅವುಗಳನ್ನು ಸರಿಪಡಿಸಿ ದೊಡ್ಡಾಲಗಟ್ಟ ವ್ಯಾಪ್ತಿಯ ಕೆರೆಗಳನ್ನು ಸಹ ತುಂಬಿಸಲಾಗುವುದು ಎಂದರು.
ಕ್ಲಿಕ್ ಮಾಡಿ ಓದಿ: ಡಿಎಆರ್ ಡಿವೈಎಸ್‌ಪಿ ಎಸ್.ಎಸ್.ಗಣೇಶ್‌ಗೆ ಮುಖ್ಯಮಂತ್ರಿ ಪದಕ
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ ನಾಗರಾಜಪ್ಪ, ಮುಖಂಡರಾದ ಬಿ.ಜೆ.ಗಿರಿಯಪ್ಪ, ಕೆ.ಓಂಕಾರಪ್ಪ, ಜಿ.ಬಿ.ರಂಗಪ್ಪ, ಉಮಾಪತಿ, ಓಬವ್ವನಾಗತಿಹಳ್ಳಿ ಮಂಜಣ್ಣ, ವಿಜಯ್ ಕುಮಾರ್, ಬಿ.ಟಿ.ನಾಗರಾಜ್, ಎಸ್.ರವಿ, ಎಸ್.ಬಿ.ಸ್ವಾಮಿ, ಸುಧಾಕರ್ ಇದ್ದರು.