ಹೊಳಲ್ಕೆರೆ
ಭಕ್ತ ಸಾಗರದ ನಡುವೆ ಸಾಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ | ಆಗಸದಲ್ಲಿ ಗರುಢ ಪ್ರದಕ್ಷಿಣೆ

CHITRADURGA NEWS | 13 MARCH 2025
ಹೊಳಲ್ಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಹೊರಕೆರೆದೇವರಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಜನಸಾಗರದ ನಡುವೆ ವಿಜೃಂಭಣೆಯಿಂದ ಸಾಗಿತು.
ಮಧ್ಯಾಹ್ನ 3 ರಿಂದ ಪ್ರಾರಂಭವಾದ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ: ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿಯನ್ನು ಆನಗೋಡು ವರೆಗೆ ವಿಸ್ತರಿಸಿ | ನಿತಿನ್ ಗಡ್ಕರಿಗೆ ಮನವಿ
ದೇವಸ್ಥಾನದ ಮುಂಭಾಗದಿಂದ ರಥೋತ್ಸವ ಪ್ರಾರಂಭವಾದ ಕೆಲವೇ ಹೊತ್ತಿನಲ್ಲಿ ಸಂಪ್ರದಾಯದಂತೆ ಗರುಡ ಪ್ರತ್ಯಕ್ಷವಾಯಿತು.
ಆಕಾಶದಲ್ಲೇ ಮೂರು ಸುತ್ತು ಹಾಕಿ ಮತ್ತೆ ಮರೆಯಾದ ಪ್ರಸಂಗವನ್ನು ಭಕ್ತರು ಕಣ್ತುಂಬಿಕೊಂಡು ಗೋವಿಂದ ಗೋವಿಂದ ಎಂದು ಭಕ್ತಿಯಿಂದ ಕೈ ಮುಗಿದರು.
ಭಕ್ತರಿಗಾಗಿ ಭುವಿಗೆ ಬಂದ ಭಗವಂತ:
ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ಸಾಕ್ಷಾತ್ ತಿರುಪತಿ ತಿಮ್ಮಪ್ಪನ ಅವತಾರ ಎಂದು ಆರಾಧಿಸಲಾಗುತ್ತದೆ.
ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ | ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದತಿ ಮುಂದುವರಿಕೆ
ಈ ಭಾಗದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಿರುಪತಿಗೆ ಪಾದಯಾತ್ರೆ ಮೂಲಕ ಸಾಗುತ್ತಿದ್ದ ಭಕ್ತರಿಗಾಗಿಯೇ ಬಯಲು ಸೀಮೆಯ ಹೊರಕೆರೆ ದೇವರಪುರದಲ್ಲಿ ಭಗವಂತ ಬಂದು ನೆಲೆ ನಿಂತಿದ್ದಾನೆ ಎನ್ನುವ ನಂಬಿಕೆ ಮನೆ ಮಾಡಿದೆ.
ವಿಶಿಷ್ಟ ಶೈಲಿಯ ದೇವಸ್ಥಾನ, ವಿಶಾಲ ಪ್ರಾಂಗಣ, ಸಂತೆ ಮೈದಾನದ ಪಕ್ಕದಲ್ಲಿರುವ ಸುಂದರ ಹೊಂಡ ಸೇರಿದಂತೆ ಬಹಳಷ್ಟು ವಿಶೇಷತೆಗಳಿಂದ ಕೂಡಿರುವ ಸುಂದರ ಊರು ಹೊರಕೆರೆದೇವರಪುರವಾಗಿದ್ದು, ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಸಾವಿರಾರು ಭಕ್ತರು ಬಂದು ಭಾಗವಹಿಸುವುದು ವಾಡಿಕೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಇಂದು ಬ್ರಹ್ಮ ರಥೋತ್ಸವ ಸಂಪನ್ನವಾಗಿದ್ದು, ಮಾ.14 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ, ಮಾ.15 ರಂದು ಹೂವಿನ ಪಲ್ಲಕ್ಕಿ ಉತ್ಸವಗಳು ಜರುಗಲಿವೆ.
