ಹೊಸದುರ್ಗ
Sanehalli: ವಿದೇಶಗಳಲ್ಲಿ ಶಿವಸಂಚಾರ ಯಶಸ್ವಿ | ಕಲಾವಿದರನ್ನು ಅಭಿನಂದಿಸಿದ ಸಾಣೇಹಳ್ಳಿ ಶ್ರೀ
CHITRADURGA NEWS | 09 DECEMBER 2024
ಹೊಸದುರ್ಗ: ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆದ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ದೇಶಗಳ ವಚನ ಸಂಸ್ಕೃತಿ ಯಾತ್ರೆ ಕಳೆದ ನವೆಂಬರ್ 17 ರಿಂದ 28ರವರೆಗೆ ಯಶಸ್ವಿಯಾಗಿ ನಡೆಯಿತು.
ಕ್ಲಿಕ್ ಮಾಡಿ ಓದಿ: ಹೊಸದುರ್ಗ – ಹೊಳಲ್ಕೆರೆ ಭಾಗದಲ್ಲಿ ಮಳೆ | ತಡರಾತ್ರಿಯಿಂದ ನಸುಕಿನವರೆಗೆ ಹಸಿ ಮಳೆ
ಇದರ ನಿಮಿತ್ತವಾಗಿ ಸಾಣೇಹಳ್ಳಿ(Sanehalli)ಯ ಎಸ್.ಎಸ್ ರಂಗಮಂದಿರದಲ್ಲಿ ಕೃತಜ್ಞತಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಪ್ರವಾಸ ಬದುಕಿಗೆ ಹೊಸ ಆಯಾಮವನ್ನು ಕೊಡುವಂಥದ್ದು. ನಮ್ಮ ವ್ಯಕ್ತಿತ್ವವನ್ನು ಪ್ರವಾಸದಲ್ಲಿ ಹೇಗೆ ಕಟ್ಟಿಕೊಳ್ಳಬಹುದು, ಹೇಗೆ ಶರಣರ ವಿಚಾರಗಳನ್ನು ವಿಶ್ವವ್ಯಾಪಿ ಮಾಡಬಹುದು ಎನ್ನುವುದಕ್ಕೆ ಈಗ ನಡೆದ ಇಂಡೋನೇಷಿಯಾ, ಮಲೇಷಿಯಾ ಹಾಗೂ ಥೈಲ್ಯಾಂಡ್ ಪ್ರವಾಸವೇ ಸಾಕ್ಷಿ ಎಂದು ಭಾವಿಸುತ್ತೇವೆ.
ಆ ನೆಲೆಯಲ್ಲಿ ಸುರೇಶ್, ರಾಕೇಶ್ ಮತ್ತು ಅವರ ತಂಡದವರು ಈ ಪ್ರವಾಸದ ವ್ಯವಸ್ಥೆಯನ್ನು ಮಾಡಿ ಅಲ್ಲಿ ಚೆನ್ನಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ತೊಗರಿಬೆಳೆ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಇವತ್ತು ಸಾಣೇಹಳ್ಳಿ ಅಂದರೆ ರಂಗಭೂಮಿಯ ನೆಲೆಯಲ್ಲಿ, ಸಾಹಿತ್ಯದ ನೆಲೆಯಲ್ಲಿ, ಧರ್ಮದ ನೆಲೆಯಲ್ಲಿ ಎಲ್ಲರೂ ತಿರುಗಿ ನೋಡುವ ಹಾಗೆ ಆಗಿದೆ. ಒಂದು ಕಾಲದಲ್ಲಿ ಮಠಗಳು, ಮಠಾಧೀಶರು ಅಂದರೆ ಮೂಗು ಮುರಿಯುತ್ತಿದ್ದ ಅನೇಕ ವೈಚಾರಿಕರು, ಬಂಡಾಯದವರು, ದಲಿತ ಪ್ರಜ್ಞೆ ಇರುವಂಥವರು ಈಗ ತುಂಬ ಹತ್ತಿರ ಆಗ್ತಾ ಇದ್ದಾರೆ.
ನಮ್ಮ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ನೋಡಿದವರು, ಅವರ ನಡುವೆ ಒಡನಾಟ ಇಟ್ಟುಕೊಂಡವರು, ಅವರ ಆಶೀರ್ವಾದ ಪಡೆದವರು ಇವತ್ತಿಗೂ ಅವರನ್ನು ಮರೀತಾ ಇಲ್ಲ.
ಅವರು 1992 ರಲ್ಲಿ ದೈಹಿಕವಾಗಿ ಈ ಲೋಕದಿಂದ ದೂರವಾಗಿದ್ದರೂ ಮಾನಸಿಕವಾಗಿ ನಮ್ಮ ಜೊತೆಯೇ ಇದ್ದಾರೆ. ಅಂತಹ ಗುರುಗಳ ಶಕ್ತಿಯನ್ನು ನಮ್ಮ ಶಿಷ್ಯರೂ ಪಡೆದುಕೊಂಡಿದ್ದಾರೆ. ನಾವೂ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇವೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 09 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…
ಬೆಟ್ಟಹಳ್ಳಿ ಪೂಜ್ಯರು ಎರಡು ಸಾರಿ ನಮ್ಮ ಜೊತೆ ವಿದೇಶಕ್ಕೆ ಬಂದಿದ್ದಾರೆ. ಈ ಹಿಂದೆ ಶ್ರೀಲಂಕಾಕ್ಕೆ ಹೋದಾಗ ಬಂದಿದ್ದರು. ಎರಡು ದೇಶಗಳಲ್ಲಿ ನಮ್ಮ ಕಲಾವಿದರು ಎರಡು ನಾಟಕಗಳನ್ನು ಅಭಿನಯಿಸಿದ್ದರು. ಶ್ರೀಲಂಕಾದಲ್ಲಿ ಮರಣವೇ ಮಹಾನವಮಿ ಎನ್ನುವಂಥ ನಾಟಕ. ಹಾಗೆಯೇ ಬಾಲಿಯಲ್ಲಿ ಉರಿಲಿಂಗಪೆದ್ದಿ ನಾಟಕ. ಆಸ್ತ್ಟ್ರೇಲಿಯಾಕ್ಕೂ ಇಂತಹ ಒಂದು ಪ್ರವಾಸವನ್ನು ಸುರೇಶ್ ಏರ್ಪಡಿಸಿದ್ದರು. ಅಲ್ಲಿ ಕೂಡ ನಮ್ಮ ಕಲಾವಿದರು ಶರಣರ ನಾಟಕವನ್ನು ಅಭಿನಯಿಸಿದರು. ಆಗ ತುಂಬಾ ಪರಿಣಾಮಕಾರಿಯಾಗಿತ್ತು ಎಂದರು.
ಶ್ರೀ ಶಿವರುದ್ರ ಸ್ವಾಮಿಜಿ, ಬೆಟ್ಟಹಳ್ಳಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಶರಣ ಚಿಂತಕ ಸಿದ್ಧು ಯಾಪಲಪರವಿ, ಸಾಹಿತಿ ಬಿ.ಆರ್ ಪೋಲಿಸ್ ಪಾಟೀಲ್, ಶರಣ ಸಾಹಿತ್ಯ ಚಿಂತಕ ರಂಜಾನ್ ದರ್ಗಾ ಮಾತನಾಡಿದರು.
ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರುಪಾದೇಶ್ವರ ಪ್ರೌಢಶಾಲಾ ಮಕ್ಕಳು ವಚನ ನೃತ್ಯ ಹಾಗೂ ಜಾನಪದ ನೃತ್ಯ ಪ್ರದರ್ಶಿಸಿದರು. ಇರುವೆ ಪುರಾಣ ನಾಟಕ ಪ್ರದರ್ಶನ ನಡೆಯಿತು.
ಕ್ಲಿಕ್ ಮಾಡಿ ಓದಿ: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಶಾಲೆ ಬಸ್ ಅಪಘಾತ | ಸಣ್ಣ ಪುಟ್ಟ ಗಾಯಗಳಿಂದ ಪಾರಾದ 40 ಮಕ್ಕಳು
ಕೆಲವು ಪ್ರವಾಸಿಗರು ತಮ್ಮ ಪ್ರವಾಸದ ಅನುಭವವನು ಹಂಚಿಕೊಂಡರು. ರವಿಕುಮಾರ ಸ್ವಾಗತಿಸಿದರು, ರಾಜು ನಿರೂಪಿಸಿ, ವಂದಿಸಿದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಪದಾಧಿಕಾರಿಗಳನ್ನು ಶ್ರೀಮಠದಿಂದ ಅಭಿನಂದಿಸಲಾಯಿತು.
ಪ್ರವಾಸಿಗರಿಗೆಲ್ಲ ಪಂಡಿತಾರಾಧ್ಯ ಶ್ರೀಗಳ ವಚನ ಸಂದೇಶ ಭಾಗ – 3 ಕೃತಿಯನ್ನು ನೀಡಿದರು.