ಹೊಸದುರ್ಗ
Trip: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ | ಹಕ್ಕಿಯಂತೆ ಹಾರಾಡಿದ ಹಳ್ಳಿ ಮಕ್ಕಳು
CHITRADURGA NEWS | 06 DECEMBER 2024
ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿಯ ಮಾರಬಘಟ್ಟ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ 19 ಮಕ್ಕಳು ತಮ್ಮ ಶಿಕ್ಷಕರ ನೆರವು ಹಾಗೂ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಪ್ರವಾಸ(Trip)ಕ್ಕಾಗಿ ಗುರುವಾರ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಶಾಲೆಯ ಮುಖ್ಯಶಿಕ್ಷಕ ಕೆ.ರಾಮಪ್ಪ, ಸಹಶಿಕ್ಷಕರಾದ ಎಚ್.ಸಿ.ಯೋಗರಾಜ್, ಎಸ್.ಜಿ.ಶೀಲಾ ಹಾಗೂ ಶಿಕ್ಷಣ ಸಂಯೋಜಕ ಶಶಿಧರ್ ಅವರು ವಿಮಾನದಲ್ಲಿ ಮಕ್ಕಳ ಜೊತೆಗೆ ಪ್ರಯಾಣಿಸಿದರು.
ಹಿರಿಯ ವಿದ್ಯಾರ್ಥಿಗಳಾದ ಪ್ರಭಾಕರ್, ಚನ್ನಪ್ಪ, ಸದ್ಗರು ಪ್ರದೀಪ್,ಬಸವರಾಜ್ ಮಹಾಲಿಂಗಪ್ಪ, ಘನಮೂರ್ತಿ, ಪಿಡಿಓ ಶಾಂತಕುಮಾರ್ ಅರುಣ್ ಗೋವಿಂದಪ್ಪ ಸೇರಿದಂತೆ ಶಿಕ್ಷಕರು ಸಹ ಸಹಕಾರ ಮಾಡಿದ್ದಾರೆ.
ಗುರುವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ತೆರಳಿ ನಂತರ, ಖಾಸಗಿ ವಾಹನದಲ್ಲಿ ಬೆಂಗಳೂರು ಈಶ ಪೌಂಡೇಶನ್, ಮೆಟ್ರೋ, ವಿಧಾನ ಸೌಧ, ಬನ್ನೇರುಘಟ್ಟ ಮೊದಲಾದ ಪ್ರವಾಸಿ ಕೇಂದ್ರಗಳಿಗೆ ತೆರಳಿದ್ದಾರೆ.
ಕ್ಲಿಕ್ ಮಾಡಿ ಓದಿ: ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲ | ವೈದ್ಯರಿಗೆ ದಂಡ ಹಾಕಿದ ಗ್ರಾಹಕರ ನ್ಯಾಯಾಲಯ
ನಾನು ಚಿಕ್ಕಂದಿನಿಂದಲೇ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹೋಗಬೇಕೆಂಬ ಆಸೆ ಇರುತ್ತದೆ ಹಾಗಾಗಿ ಈ ಪ್ರವಾಸ ಬಹಳ ವಿದ್ಯಾರ್ಥಿಗಳಿಗೆ ಸ್ಮರಣೀಯ ಎಂದು ಪ್ರವಾಸ ತಂಡದಲ್ಲಿರುವ ಶಿಕ್ಷಣ ಸಂಯೋಜಕ ಶಶಿಧರ್ ಹರ್ಷ ವ್ಯಕ್ತಪಡಿಸಿದರು.
ಬರುವಾಗ ರೈಲಿನಲ್ಲಿ ಲ್ಲಿ ಪ್ರಯಾಣ ಬೆಳೆಸಲಿದ್ದು ಒಟ್ಟಾರೆ ಪ್ರತಿ ವಿದ್ಯಾರ್ಥಿಗೆ ಸುಮಾರು 4 ಸಾವಿರ ಖರ್ಚು ಆಗಲಿದ್ದು, ಹಣವನ್ನು ದಾನಿಗಳು ನೀಡಿದ್ದು ಎಲ್ಲ ವಿದ್ಯಾರ್ಥಿಗಳ ಪ್ರವಾಸ ವೇಳೆ ಊಟ, ವಸತಿ, ಓಡಾಟಕ್ಕಾಗಿ ವ್ಯಯಿಸಲಿದ್ದಾರೆ.
ಹಳ್ಳಿಗಾಡಿನ ಮಕ್ಕಳನ್ನು ವಿಮಾನದಲ್ಲಿನ ಪ್ರಯಾಣದ ಅನುಭವ ಒದಗಿಸಿರುವುದು ಹಾಗೂ ಮಕ್ಕಳ ಕಲಿಕೆಗೆ ಚೈತನ್ಯ ತುಂಬಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 06 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…
ಸರ್ಕಾರಿ ಶಾಲಾ ಮಕ್ಕಳ ವಿಮಾನ ಪ್ರಯಾಣ ಮಕ್ಕಳ ಕಲಿಕೆಗೆ ಅವಕಾಶ ಮಾಡಿದೆ.
ಸೖಯದ್ ಮೋಸೀನ್, ಬಿಇಓ
ಹಳ್ಳಿಗಾಡಿನ ಮಕ್ಕಳನ್ನು ಗ್ರಾಮಸ್ಥರ, ದಾನಿಗಳ, ಸಹಕಾರ ದಲ್ಲಿ ಪ್ರವಾಸಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮಕ್ಕಳಿಗೆ ಅವರು ಪೋಷಕರು ಕಲಿಕೆಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ರಾಮಪ್ಪ , ಮುಖ್ಯ ಶಿಕ್ಷಕ
ಶಾಲೆಯ ಮಕ್ಕಳು ಸ್ಕೌಟ್ ನಲ್ಲಿ ಸೇವಾ ಮನೋಭಾವನೆ ಹೊಂದಿದ್ದು, ಗ್ರಾಮದ ಪ್ರೋತ್ಸಾಹದಿಂದ ವಿಮಾನ, ರೈಲ್ವೇ ಮೂಲಕ ಪ್ರಯಾಣ ಮಾಡಿ ಬೆಂಗಳೂರು ಪಟ್ಟಣ ತೋರಿಸಲಾಗುವುದು.
ಯೋಗಾನಂದ, ಶಿಕ್ಷಕ ಸ. ಹಿ. ಪ್ರಾ ಶಾಲೆ, ಮಾರಬಘಟ್ಟ