ಮುಖ್ಯ ಸುದ್ದಿ
ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ | MLC ಕೆ.ಎಸ್.ನವೀನ್

CHITRADURGA NEWS | 15 FEBRUARY 2025
ಚಿತ್ರದುರ್ಗ: ಬ್ಯಾಂಕಿಂಗ್ ಸೇರಿದಂತೆ ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.
Also Read: ಚಿತ್ರಹಳ್ಳಿ ಪೊಲೀಸರ ಕಾರ್ಯಾಚರಣೆ | ಐವರ ಬಂಧನ | 5 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ

ದಾವಣಗೆರೆ ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗ, ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹೈದರಾಬಾದ್‌ನ ಭಾರತೀಯ ಸಮಾಜ ವಿಜ್ಞಾನ ಮಂಡಳಿ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಂದಿನ ಪೀಳಿಗೆ ಅಮೃತ ಕಾಲದಲ್ಲಿದೆ. ಆದರೆ, ದೇಶಕ್ಕೆ ಸ್ವಾತಂತ್ರ ಬಂದ ಸಂದರ್ಭದಲಿ ಬಡತನದಲ್ಲಿದ್ದ ಭಾರತ, ಇಂದು ಐದನೇ ಅತೀ ದೊಡ್ಡ ಆರ್ಥಿಕ ರಾಷ್ಟçವಾಗಿ ಹೊರಹೊಮ್ಮಲು ನಮ್ಮ ಹಿರಿಯರು ಕಾರಣ. ನಾವೆಲ್ಲರೂ ಅವರಿಗೆ ಸದಾ ಗೌರವ ಕೊಡಬೇಕು ಎಂದರು.
2014ರಲ್ಲಿ ದೇಶದಲ್ಲಿ 120 ಕೋಟಿ ಜನಸಂಖ್ಯೆ ಇದ್ದರೂ ಬ್ಯಾಂಕ್ ಖಾತೆ ಹೊಂದಿದ್ದವರು ಕೇವಲ 17 ಕೋಟಿ ಜನ ಮಾತ್ರ. ಆದರೆ, ಆನಂತರ ಜನ್‌ಧನ್ ಖಾತೆ ಹಾಗೂ ತಂತ್ರಜ್ಞಾನದ ಪರಿಣಾಮ ಕಳೆದ ಹತ್ತು ವರ್ಷಗಳಲ್ಲಿ 50 ಕೋಟಿ ಖಾತೆಗಳಾಗಿವೆ. 33 ಕೋಟಿ ಜನ ಹೊಸದಾಗಿ ಬ್ಯಾಂಕ್ ಸಂಪರ್ಕಕ್ಕೆ ಬಂದಿದ್ದಾರೆ ಎಂದು ವಿವರಿಸಿದರು.
Also Read: ದಿನ ಭವಿಷ್ಯ | ಫೆಬ್ರವರಿ 15 | ವೃತ್ತಿಪರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ, ಆರೋಗ್ಯದ ಬಗ್ಗೆ ಎಚ್ಚರ
ತಂತ್ರಜ್ಞಾನವನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ಜೋಡಿಸುವ ಫಿನ್‌ಟೆಕ್‌ನಿಂದಾಗಿ ದೇಶದಲ್ಲಿ ಕ್ರಾಂತಿಯಾಗಿದೆ. ಕ್ಷಣ ಮಾತ್ರದಲ್ಲಿ ಎಲ್ಲಿಂದ ಎಲ್ಲಿಗೆ ಎಷ್ಟು ಬೇಕಾದರೂ ಹಣ ಕಳಿಸಲು ಸಾಧ್ಯವಾಗಿದೆ. ಇಂದು ಜೇಬಿನಲ್ಲಿ ಹಣ ಇರಬೇಕಾಗಿಲ್ಲ, ಮೊಬೈಲ್ ಇದ್ದರೆ ಸಾಕು. ಶೇ.70 ರಷ್ಟು ಜನ ಬ್ಯಾಂಕ್ ವ್ಯವಹಾರ ಗೊತ್ತಿಲ್ಲದಿದ್ದರೂ ಇಂದು ಕ್ಯಾಶ್‌ಲೆಸ್ ವಹಿವಾಟಿನಲ್ಲಿ ಭಾರತ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬಳಿ ಎರಡು ಬಸ್ ನಿಲ್ದಾಣ ನಿರ್ಮಾಣ ಮಾಡಲು ಅನುದಾನ ನೀಡುವುದಾಗಿ ಎಂಎಲ್ಸಿ ಕೆ.ಎಸ್.ನವೀನ್ ಭರವಸೆ ನೀಡಿದರು. ಅಗತ್ಯವಿದ್ದರೆ ಸ್ನಾತಕೋತ್ತರ ಕೇಂದ್ರಕ್ಕೆ ಬಸ್ ಖರೀದಿಸಲು ಅನುದಾನ ನೀಡುತ್ತೇನೆ. ಅಥವಾ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬಳಿ ಮಾತನಾಡಿ ಇಲ್ಲಿಗೆ ಬಸ್ ವ್ಯವಸ್ಥೆ ಕಲ್ಪಿಸುತ್ತೇನೆ. | ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯ.
ಇಂದಿನ ಭಾರತಕ್ಕೆ ಫೈನಾನ್ಶಿಯಲ್ ಟೆಕ್ನಾಲಜಿ ಅತ್ಯಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ವಿದ್ಯಾರ್ಥಿಗಳು ಪಠ್ಯದಲ್ಲಿ ಕಲಿಯುವುದಕ್ಕಿಂತ ಬಹಳ ವೇಗದಲ್ಲಿ ಪ್ರಪಂಚ ಸಾಗುತ್ತಿದೆ. ಹಾಗಾಗಿ ಪಠ್ಯಕ್ಕೆ ಸೀಮಿತರಾಗುವುದಕ್ಕಿಂತ ಹೊರಗಿನ ಜ್ಞಾನವನ್ನೂ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಬಿ.ಡಿ.ಕುಂಬಾರ್ ಮಾತನಾಡಿ, ಭಾರತದ ಆರ್ಥಿಕತೆಗೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಪಿ.ವಿ.ನರಸಿಂಹರಾವ್ ಅವರ ಕೊಡುಗೆ ಮಹತ್ತರವಾಗಿದೆ ಎಂದರು.
Also Read: ಡಿವೈಡರ್ ಗೆ ಟೆಂಪೋ ಡಿಕ್ಕಿ | 12 ಕುರಿ ಸಾವು
ಹಣಕಾಸು ನಿರ್ವಹಣೆ ಬಹಳ ಮುಖ್ಯವಾದ ವಿಷಯ. ಈ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ಗ್ರಾಮಗಳಲ್ಲೂ ಅರಿವು ಮೂಡಿಸಬೇಕು. ಹಣಕಾಸು ತಂತ್ರಜ್ಞಾನದ ಬಗ್ಗೆ ಸದಾ ಎಚ್ಚರವಾಗಿದ್ದು, ಹೊಸತನ್ನು ಕಲಿಯಬೇಕು ಎಂದು ಸಲಗೆ ನೀಡಿದರು.
ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶ್‌ಕುಮಾರ್ ಮಾತನಾಡಿ, ಹಣಕಾಸು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ಪಾವತಿ, ಸಾಲ ಹಾಗೂ ಠೇವಣಿಗಳ ವಿಚಾರದಲ್ಲಿ ಅಭಿವೃದ್ಧಿ ಆಗಬೇಕಾಗಿದೆ ಎಂದರು.
ಹಣಕಾಸಿನ ವಿಚಾರದಲ್ಲಿ ಮುಂದುವರೆದ ತಂತ್ರಜ್ಞಾನ ಬದುಕನ್ನು ಎಷ್ಟು ಸರಳವಾಗಿಸಿದೆಯೋ ಅಷ್ಟೇ ಸವಾಲುಗಳನ್ನು ಸೃಷ್ಟಿಸಿದೆ. ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಹೂಡಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನ ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಸತ್ಯನಾರಾಯಣ, ದಾವಣಗೆರೆ ವಿವಿ ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಸುಪ್ರಿಯಾ, ಪ್ರೊ.ಲಕ್ಷ್ಮಣ ಇತರರಿದ್ದರು.
Also Read: ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆ ಹಸ್ತಾಂತರ
ವಿಶ್ವವಿದ್ಯಾನಿಲಯ ನಡೆಸಿದ ಎಂ.ಕಾಂ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಯರಾದ ಆರ್.ಮಧುರಾ, ನಾಗಮಣಿ, ಎಂ.ಪೂಜಾ ಹಾಗೂ ಪಿ.ಅಂಕಿತಾ ಅವರನ್ನು ಅಭಿನಂದಿಸಲಾಯಿತು.
ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ 9 ವಿಶ್ವವಿದ್ಯಾನಿಲಯಗಳಿಗೆ ಅನುದಾನ ಕೊಡದೆ ಮುಚ್ಚುವ ನಿರ್ಧಾರ ಮಾಡಿರುವುದು ಈ ನಾಡಿನ ದುರಂತ. ರಾಜ್ಯದ ಮಕ್ಕಳು ಬುದ್ದಿವಂತರಿದ್ದಾರೆ. ಅವರಿಗೆ ಸರಿಯಾದ ಸೌಲಭ್ಯ ಕಲ್ಪಿಸಿದರೆ ದೊಡ್ಡ ಸಾಧನೆ ಮಾಡುತ್ತಾರೆ. ಆದರೆ, ಶಿಕ್ಷಣ ಕ್ಷೇತ್ರ ಕಡೆಗಣಿಸುವ ನಿರ್ಣಯ ಒಳ್ಳೆಯ ಬೆಳವಣಿಗೆ ಅಲ್ಲ. | ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯ.
