Connect with us

    ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ, ಗೋವಿಂದ ಕಾರಜೋಳ ಏನು ಹೇಳಿದ್ದಾರೆ ನೋಡಿ..

    Amith sha - Govind karajola

    ಮುಖ್ಯ ಸುದ್ದಿ

    ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ, ಗೋವಿಂದ ಕಾರಜೋಳ ಏನು ಹೇಳಿದ್ದಾರೆ ನೋಡಿ..

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 19 DECEMBER 2024

    ಚಿತ್ರದುರ್ಗ: ರಾಜ್ಯಸಭೆಯಲ್ಲಿ ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ (Amith sha) ನೀಡಿದ್ದ ಹೇಳಿಕೆ ಈಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

    ಈ ನಿಟ್ಟಿನಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ(Govinda karajola) ಕೂಡಾ ಅಮಿತ್ ಶಾ ಅವರ ಹೇಳಿಕೆ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: 129 ಅಡಿ ದಾಟಿದ ವಿವಿ ಸಾಗರ ಜಲಾಶಯ ಮಟ್ಟ

    ಗೃಹ ಸಚಿವರಾದ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ಸಿಗರು ಕೇವಲ ಅಂಬೇಡ್ಕರ್ ಹೆಸರನ್ನು ಜಪ ಮಾಡುತ್ತಿದ್ದಾರೆಯೇ ವಿನಾಃ ಅಂಬೇಡ್ಕರರನ್ನು ಗೌರವಿಸುವ ಕೆಲಸವನ್ನು ಮಾಡಲಿಲ್ಲ. ಜೀವಿತಾವಧಿಯಲ್ಲಿ ಅವರನ್ನು ಅವಮಾನಿಸಿ ಈಗ ಅವರ ಹೆಸರನ್ನು ಜಪ ಮಾಡುತ್ತಿದ್ದೀರಿ ಎಂದು ಜರಿದಿದ್ದಾರೆ.

    ಆದರೆ, ಕಾಂಗ್ರೆಸ್ಸಿಗರು ಈ ಹೇಳಿಕೆಯನ್ನು ತಿರುಚಿ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

    ಇದನ್ನೂ ಓದಿ: ಕೋಟೆನಾಡಿಗೆ ಕಿಚ್ಚ ಸುದೀಪ್ | ಡಿ.22 ರಂದು ಮ್ಯಾಕ್ಸ್ ಫ್ರೀ ರಿಲೀಸ್ ಇವೆಂಟ್

    ಬಿಜೆಪಿಯವರು ಬಾಬಾ ಸಾಹೆಬ್ ಅಂಬೇಡ್ಕ್‍ರರನ್ನು ದೇವರ ಸ್ಥಾನದಲ್ಲಿ ನೋಡುತ್ತಿದ್ದೇವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದನ್ನು ಕಾಂಗ್ರೆಸ್ಸಿಗರು ತಿರುಚಿ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

    ಪಂಡಿತ್ ಜವಾಹರ್ ಲಾಲ್ ನೆಹರು ಅವರ ನೃತೃತ್ವದ ಕಾಂಗ್ರೆಸ್ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರರನ್ನು ಯಾವ ರೀತಿ ನಡೆಸಿಕೊಂಡಿತ್ತು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲು ಜಾಗ ನೀಡದ ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ ಎಂದು ಕುಟುಕಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಗುರುವಾರದ ಹತ್ತಿ ರೇಟ್ ಇಲ್ಲಿದೆ…

    ಅಂಬೇಡ್ಕರ್ ಅರ್ಥಶಾಸ್ತ್ರಜ್ಞರಾಗಿದ್ದರೂ ಕೂಡ ಅವರಿಗೆ ಆರ್ಥಿಕ ಇಲಾಖೆ ನೀಡದೇ ಕೇವಲ ಕಾನೂನು ಇಲಾಖೆಯನ್ನು ನೀಡಿ ಅವಮಾನ ಮಾಡಿದ್ದು ಕಾಂಗ್ರೆಸ್.

    ಅಂಬೇಡ್ಕರ್ ಅವರು ನೆಹರು ಮಂತ್ರಿ ಮಂಡಲದಲ್ಲಿ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಗೆ ಬಂದ ನಂತರ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಸೋಲಿಸಿ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ.

    ಇದನ್ನೂ ಓದಿ: ಆದ್ಯತೆ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತ ಪೂರ್ಣ | ಸಚಿವ ಕೃಷ್ಣ ಬೈರೇಗೌಡ

    ಇಷ್ಟೇ ಅಲ್ಲ ಅಂಬೇಡ್ಕರ್ ಜೀವಿತಾವಧಿಯಲ್ಲಿ ಅವರಿಗೆ ಭಾರತ ರತ್ನ ನೀಡಿ ಪುರಸ್ಕರಿಸದೇ ಕೇವಲ ಗಾಂಧಿ ಕುಟುಂಬಕ್ಕೆ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಳ್ಳುಲಾಯಿತು.

    ಇಷ್ಟಕ್ಕೂ ಅಂಬೇಡ್ಕರ್‍ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಟೀಕಿಸಿದ್ದಾರೆ.

    ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯ | ಪ್ರಾಣಿ ದತ್ತು ಪಡೆಯಲು ಸುವರ್ಣಾವಕಾಶ | ಯಾವ ಪ್ರಾಣಿಗೆ ಎಷ್ಟು ರೇಟ್ ?

    ನರೇಂದ್ರ ಮೋದಿಜಿ ನೇತೃತ್ವದ ಎನ್.ಡಿ.ಎ. ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಂಬೇಡ್ಕರ್‍ರರಿಗೆ ಸಂಬಂಧಿಸಿ ಐದು ಸ್ಥಳಗಳನ್ನು ಪಂಚತೀರ್ಥಗಳೆಂದು ಘೋಷಿಸಿ ಸಮಗ್ರವಾಗಿ ಅಭಿವೃದ್ದಿಪಡಿಸುವ ಮೂಲಕ ಪ್ರವಾಸಿ ತಾಣಗಳನ್ನಾಗಿ ಮಾಡಲಾಗಿದೆ.

    ಅಂಬೇಡ್ಕರ್‍ರರ 125ನೇ ಜನ್ಮದಿನಾಚರಣೆ ಸ್ಮರಣೆಗಾಗಿ ಡಿಜಿಟಲ್ ಭಿಮ್ ಆಪ್ ಅನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top