Connect with us

    BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ

    ಮುಖ್ಯ ಸುದ್ದಿ

    BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ

    CHITRADURGA NEWS |16 MAY 2024

    ಚಿತ್ರದುರ್ಗ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗ ನಗರದ ಜೈಲು ರಸ್ತೆಯ ಮನೆಯಲ್ಲಿ ಐದು ಜನರ ಅಸ್ತಿಪಂಜರ ಪತ್ತೆ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ.

    ಜೈಲು ರಸ್ತೆಯಲ್ಲಿದ್ದ ನಿವೃತ್ತ ಇಂಜಿನಿಯರ್ ದೊಡ್ಡಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿತ್ತು. ಮೃತಪಟ್ಟು 5 ವರ್ಷಗಳ ನಂತರ ಅಸ್ತಿಪಂಜರದ ಮಾದರಿಯಲ್ಲಿ ಮೃತರ ದೇಹಗಳು ಸಿಕ್ಕಿದ್ದವು.

    ಇದನ್ನೂ ಓದಿ: BEAKING NEWS ಪಾಳುಬಿದ್ದ ಮನೆಯಲ್ಲಿ ಅಸ್ತಿಪಂಜರ ಮಾದರಿಯಲ್ಲಿ ಶವ ಪತ್ತೆ | ಬೆಚ್ಚಿ ಬಿದ್ದ ಸಾರ್ವಜನಿಕರು

    ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ ಅವರ ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿತ್ತು.

    ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ

    ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಲೀಲಾ

    ಈ ಸಂಬಂಧ ಪೋಸ್ಟ್ ಮಾರ್ಟಮ್ ಹಾಗೂ ಎಫ್‍ಎಸ್‍ಎಲ್ ವರದಿ ಬರೋಬ್ಬರಿ 5 ತಿಂಗಳ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭ್ಯವಾಗಿದೆ.

    ಇದನ್ನೂ ಓದಿ: ಐದು ಜನರ ಅಸ್ಥಿಪಂಜರ ಪ್ರಕರಣ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದೇನು

    ಪೋಸ್ಟ್ ಮಾರ್ಟಮ್ ವರದಿಯಲ್ಲಿ ಐದು ಜನರ ದೇಹದ ಮೂಳೆಗಳಲ್ಲಿ ಯಾವುದೇ ಹೊಡೆತ ಬಿದ್ದ ಅಥವಾ ಮುರಿತ ಕಂಡು ಬಂದಿಲ್ಲ ಎನ್ನುವ ವರದಿ ಬಂದಿತ್ತು.

    ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ

    ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ

    ಈಗ ಎಫ್‍ಎಸ್‍ಎಲ್ ವರಿದಿ ಕೂಡಾ ಬಂದಿದ್ದು, ವರದಿಯಲ್ಲಿ ನಿದ್ರೆ ಮಾತ್ರೆ ಸೇವಿಸಿರುವ ಬಗ್ಗೆ ಉಲೇಖವಾಗಿದೆ. ಅಸ್ತಿಪಂಜರಗಳ ಕೆಲ ಮಾದರಿ ಹಾಗೂ ಕೆಲವರ ಚರ್ಮದ ಮಾದರಿ ಸಂಗ್ರಹಿಸಿದ್ದ ತಜ್ಞರು ಪತ್ತೆ ಮಾಡಿರುವ ಅಂಶಗಳಲ್ಲಿ ನಿದ್ರೆ ಮಾತ್ರೆ ಸೇವಿಸಿರುವುದು ಈಗ ಸಿಕ್ಕಿರುವ ವರದಿಯಲ್ಲಿ ದೃಢಪಟ್ಟಿದೆ.

    ಇದನ್ನೂ ಓದಿ: ಜೈಲು ರಸ್ತೆ ಬಳಿ ಮನೆಯಲ್ಲಿ ಐದು ಜನರ ನಿಗೂಢ ಸಾವಿನ ಕುರಿತು ದೂರು ದಾಖಲು

    ಇನ್ನೂ ಪ್ರಕರಣದ ಸಮಗ್ರ ತನಿಖೆಗಾಗಿ ಮನೆಯ ವಿವಿಧ ವಸ್ತುಗಳನ್ನು ಜಾಲಾಡಿದ್ದ ತಜ್ಞರ ತಂಡಕ್ಕೆ ಮನೆಯ ಎರಡು ಪಾತ್ರೆಗಳಲ್ಲಿ ಸೈನೆಡ್ ಐರನ್ ಅಂಶ ಇರುವುದು ಖಚಿತವಾಗಿದೆ.

    ಪುತ್ರಿ ತ್ರಿವೇಣಿ

    ಪುತ್ರಿ ತ್ರಿವೇಣಿ

    ಆದರೆ, ಈ ಐದು ಜನ ಸೈನೆಡ್ ಸೇವಿಸಿದ್ದರೆ ಎನ್ನುವುದಕ್ಕೆ ಸೂಕ್ತ ದಾಖಲೆ ಅಥವಾ ಪರೀಕ್ಷೆ ವೇಳೆ ರಾಸಾಯನಿಕಗಳು ಪತ್ತೆಯಾಗಿಲ್ಲ.

    ಇದನ್ನೂ ಓದಿ: ಡೆತ್‍ನೋಟ್ ರಹಸ್ಯ | ಐವರ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

    ಐದು ಜನರು 2019 ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಅದರಂತೆ ಎಫ್‍ಎಸ್‍ಎಲ್ ವರದಿಯಲ್ಲೂ ಸಿಕ್ಕಿರುವ ಅಸ್ತಿಪಂಜರಗಳ ಆಧಾರದಲ್ಲಿ ಐದು ಜನ ಮೃತಪಟ್ಟು ನಾಲ್ಕೂವರೆಯಿಂದ ಐದು ವರ್ಷಗಳ ಹಿಂದೆ ಮೃತಪಟ್ಟಿರಬಹುದು ಎಂದು ದಾಖಲಿಸಲಾಗಿದೆ.

    ಇದನ್ನೂ ಓದಿ: ತನಿಖಾ ತಂಡದ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ | ರೋಚಕ ತಿರುವು ಪಡೆಯುತ್ತಿದೆ ಅಸ್ಥಿಪಂಜರ ಪತ್ತೆ ಪ್ರಕರಣ | ಎಫ್‌ಎಸ್‌ಎಲ್‌ ವರದಿಯತ್ತ ಎಲ್ಲರ ಚಿತ್ತ ‌

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top