Connect with us

    stroke: ಸೋಮಾರಿ‌ ಜೀವನ ಶೈಲಿ ಬದಲಾದರೆ ಸ್ಟ್ರೋಕ್ ಅಪಾಯ ಕಡಿಮೆ

    ಅರೋಗ್ಯ ಇಲಾಖೆಯಿಂದ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಉದ್ಘಾಟನೆ

    ಮುಖ್ಯ ಸುದ್ದಿ

    stroke: ಸೋಮಾರಿ‌ ಜೀವನ ಶೈಲಿ ಬದಲಾದರೆ ಸ್ಟ್ರೋಕ್ ಅಪಾಯ ಕಡಿಮೆ

    stroke: ಸೋಮಾರಿ‌ ಜೀವನ ಶೈಲಿ ಬದಲಾದರೆ ಸ್ಟ್ರೋಕ್ ಅಪಾಯ ಕಡಿಮೆ

    CHITRADURGA NEWS | 29 OCTOBER 2024

    ಚಿತ್ರದುರ್ಗ: ಸೋಮಾರಿ ಜೀವನಶೈಲಿ ಬಿಟ್ಟು, ಪಾಶ್ರ್ವವಾಯುವಿನಿಂದ ರಕ್ಷಣೆ ಪಡೆಯಿರಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎ.ರವೀಂದ್ರ ಹೇಳಿದರು.

    ಕ್ಲಿಕ್ ಮಾಡಿ ಓದಿ: Attempted suicide: ಅಂಬೇಡ್ಕರ್ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ | ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು 

    ನಗರದ ಕೋಟೆ ಮುಂಭಾಗದ ಮದರ್ ತೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಹಯೋಗದೊಂದಿಗೆ ವಿಶ್ವ ಸ್ಟ್ರೋಕ್(stroke) ದಿನ-2024 ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪಾಶ್ರ್ವವಾಯುಗೆ ಅನಾರೋಗ್ಯಕರ ಆಹಾರ ಪದ್ಧತಿ, ಮದ್ಯಪಾನ, ಧೂಮಪಾನ, ಬೊಜ್ಜು ಮುಖ್ಯ ಕಾರಣಗಳಾಗಿವೆ. ಸಾರ್ವಜನಿಕರು, ಆರೋಗ್ಯ ಕಾರ್ಯಕರ್ತರು, ನರ್ಸಿಂಗ್ ವಿದ್ಯಾರ್ಥಿಗಳು ಪ್ರಾರಂಭಿಕ ಲಕ್ಷಣಗಳನ್ನು ಗುರುತಿಸಿ, ನಾಲ್ಕರಿಂದ ಐದು ಗಂಟೆಯ ಒಳಗೆ ಜಿಲ್ಲಾ ಆಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗಕ್ಕೆ ಕರೆತಂದರೆ ಚಿಕಿತ್ಸೆ ಆರೈಕೆ ನೀಡಲಾಗುತ್ತದೆ.

    ಈ ಸಮಯವನ್ನ ಗೋಲ್ಡನ್ ಅವರ್ ಎಂದು ಕರೆಯುತ್ತೇವೆ ಎಂದು ತಿಳಿಸಿದ ಅವರು, ಇದರಿಂದ ಸಂಪೂರ್ಣ ಗುಣಮುಖರಾಗಬಹುದು ಎಂದರು.

    ಕ್ಲಿಕ್ ಮಾಡಿ ಓದಿ: APMC: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಅಕ್ಟೋಬರ್ 29 | ಇಂದಿನ ಹತ್ತಿ ರೇಟ್ 

    ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ನರರೋಗ ತಜ್ಞ ಕಿರಣ್ ಗೌಡ ಮಾತನಾಡಿ, ಪಾಶ್ರ್ವವಾಯು ಅಥವಾ ಮೆದುಳಿನ ಆಘಾತ ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಪೂರೈಕೆಯಿಂದಾಗಿ ಉಂಟಾಗುವ ಸ್ಥಿತಿ ಸಮತೋಲನ ಅಥವಾ ಸಮನ್ವಯದ ನಷ್ಟ ಒಂದು ಅಥವಾ ಎರಡು ಕಣ್ಣುಗಳ ದೃಷ್ಟಿ ನಷ್ಟ ಮುಖದ ಒಂದು ಬದಿಯಲ್ಲಿ ದೌರ್ಬಲ್ಯ ಕೈ ಅಥವಾ ಕಾಲಿನ ದೌರ್ಬಲ್ಯ ಅಥವಾ ಮರಗಟ್ಟುವಿಕೆಯ ಸ್ಪಷ್ಟಮಾತು ಅಥವಾ ಮಾತನಾಡಲು ತೊಂದರೆ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ರೋಗಿಯನ್ನ ನಾಲ್ಕರಿಂದ ಐದು ಗಂಟೆಯ ಒಳಗೆ ಆಸ್ಪತ್ರೆಗೆ ಕರೆತನ್ನಿ. ಚಿಕಿತ್ಸೆ ನೀಡಿ ಮುಂದೆ ಉಂಟಾಗುವಂತಹ ಅನಾಹುತ ತಪ್ಪಿಸಬಹುದು ಎಂದರು.

    ಜಿಲ್ಲಾ ಮಾನಸಿಕ ರೋಗಗಳ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಕ್ಲಿಕ್ ಮಾಡಿ ಓದಿ: Murder case: ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!

    ಕಾರ್ಯಕ್ರಮದಲ್ಲಿ ಮದರ್ ತೆರೆಸಾ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಮಂಜುಳಾ, ಪಿಡಿಒ ಸುಷ್ಮರಾಣಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ ಜಾನಕಿ ಸೇರಿದಂತೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಮತ್ತಿತರರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top