Connect with us

    ವಿದ್ಯಾವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ | 210 ವಿದ್ಯಾರ್ಥಿಗಳಿಂದ 103 ವಿಜ್ಞಾನ ಮಾದರಿ

    ಮುಖ್ಯ ಸುದ್ದಿ

    ವಿದ್ಯಾವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ | 210 ವಿದ್ಯಾರ್ಥಿಗಳಿಂದ 103 ವಿಜ್ಞಾನ ಮಾದರಿ

    ಚಿತ್ರದುರ್ಗ ನ್ಯೂಸ್.ಕಾಂ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 2023-24ನೇ ಸಾಲಿನ ‘ವಿಜ್ಞಾನ ವಸ್ತು ಪ್ರದರ್ಶನ’ ನಡೆಯಿತು.
    6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸಾರಿಗೆ ಮತ್ತು ಸಂವಹನ, ತ್ಯಾಜ್ಯ ವಸ್ತುಗಳ ಸದ್ಭಳಕೆ, ಮಳೆ ಕೊಯ್ಲು, ಆಹಾರ ಸಂರಕ್ಷಣೆ ಮತ್ತು ಭದ್ರತೆ, ಗಣಿತದ ಮಾದರಿ ರಚನೆ, ಪರ್ಯಾಯ ಸಂಪನ್ಮೂಲಗಳ ನಿರ್ವಹಣೆ, ನೀರಿನ ಸರಿಯಾದ ನಿರ್ವಹಣೆ ಮತ್ತು ಆರೋಗ್ಯ ಮತ್ತು ಸಧೃಡತೆ, ರೋಬೋಟಿಕ್ಸ್ ತಂತ್ರಜ್ಞಾನ ಸೇರಿದಂತೆ ಸುಮಾರು 210 ವಿದ್ಯಾರ್ಥಿಗಳು 103 ಮಾದರಿಗಳನ್ನು ತಯಾರಿಸಿ ವಿವರಿಸಿದರು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತರ್ಜಲ ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಅಭಿರುಚಿ ಮತ್ತು ಮನೋವೃತ್ತಿಗಳನ್ನು ಶ್ಲಾಘಿಸಿದರು.
    ವಿದ್ಯಾ ವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

    ವಿದ್ಯಾ ವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

    ಅತ್ಯಾಧುನಿಕ ತಂತ್ರಜ್ಞಾನ ಯುಗದ ಈ ದಿನಗಳನ್ನು ಅವಶ್ಯಕವಾದ ಹಾಗೂ ಸಾಮಾಜಿಕ ಕಳಕಳಿಯುಳ್ಳ ಮಾದರಿಗಳನ್ನು ತಯಾರಿಸಿ, ಪ್ರದರ್ಶಿಸಿದ ವಿದ್ಯಾರ್ಥಿಗಳ ಪ್ರತಿಭೆ ಗಮನಾರ್ಹ ಎಂದರು.
    ಇದೇ ವೇಳೆ ಅಂತರ್ಜಲ ಶೋಧನೆ ಮತ್ತು ಬಳಕೆ ಹಾಗೂ ಮಳೆ ನೀರು ಕೊಯ್ಲಿನ ಅಗತ್ಯತೆಯ ಮಹತ್ವವನ್ನು ಪಿಪಿಟಿ ಮೂಲಕ  ಪ್ರದರ್ಶಿಸಿದರು.
    ಸಂಸ್ಥೆಯ ನಿರ್ದೇಶಕ ಎಸ್.ಎಂ.ಪೃಥ್ವೀಶ್ ಮಾತನಾಡಿ, ದೈನಂದಿನ ತರಗತಿಗಳಲ್ಲಿ ಕಲಿಯುವ ಅಂಶಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಾದರಿಗಳನ್ನು ತಯಾರಿಸಿ ಅವುಗಳನ್ನು ಮೂರ್ತ ರೂಪಕ್ಕೆ ತಂದಿದ್ದಾರೆ ಎಂದರು.
    ಸಮಾಜಕ್ಕೆ ಅನುಕೂಲಕವಾಗುವಂತಹ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ವಸ್ತುಪ್ರದರ್ಶಗಳು ಸಹಕಾರಿಯಾಗುತ್ತವೆ ಎಂಬುದನ್ನು ಮನವರಿಕೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ದೈನಂದಿನ ತರಗತಿಗಳ ಪ್ರಾಯೋಗಿಕ ಅನ್ವಯಗಳ ತಿಳುವಳಿಕೆ ಮೂಡಿಸಿದರು.
    ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್ ಕುಮಾರ್ ಮಾತನಾಡಿ, ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ವೈಜ್ಞಾನಿಕ ಮನೋಭಾವನೆ, ತಾರ್ಕಿಕ ಚಿಂತನೆ ಬೆಳೆಯುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
    ವಿದ್ಯಾ ವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

    ವಿದ್ಯಾ ವಿಕಾಸ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

    ತೀರ್ಪುಗಾರರಾಗಿ ಶಿಕ್ಷಕರಾದ ಕೆ.ಓ.ನಾಗೇಶ್, ವಿ.ಎನ್.ಗೌರೀಶ್, ಮೃತ್ಯುಂಜಯ ಭಾಗವಹಿಸಿದ್ದರು.
    ಶಾಲೆಯ ಆಡಳಿತಾಧಿಕಾರಿ ಡಾ| ಕೆ.ಎನ್.ಸ್ವಾಮಿ, ಮುಖ್ಯ ಶಿಕ್ಷಕ ಸಿ.ಡಿ.ಸಂಪತ್ ಕುಮಾರ್, ಐ.ಸಿ.ಎಸ್.ಸಿ. ವಿಭಾಗದ ಪ್ರಾಂಶುಪಾಲರಾದ ಪಿ.ಬಸವರಾಜಯ್ಯ ಮತ್ತಿತರರು ಭಾಗವಹಿಸಿದ್ದರು.
    ವಿದ್ಯಾರ್ಥಿನಿಯರಾದ ತೃಷಾ ಪ್ರಾರ್ಥಿಸಿದರು. ಎನ್.ಜಿ.ತಿಪ್ಪೇಸ್ವಾಮಿ ನಿರೂಪಿಸಿದರು. ಮೇಘನಾ ಸ್ವಾಗತಿಸಿದರು, ಪಿ.ವಿ.ರೇಖಾ ವಂದಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top