Connect with us

    ಫೆ.22 ಮತ್ತು 23 ರಂದು ಸರಿಗಮ ಸಂಗೀತ ನಾಟಕೋತ್ಸವ

    ಮುಖ್ಯ ಸುದ್ದಿ

    ಫೆ.22 ಮತ್ತು 23 ರಂದು ಸರಿಗಮ ಸಂಗೀತ ನಾಟಕೋತ್ಸವ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 FEBRUARY 2025

    ಚಿತ್ರದುರ್ಗ: ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಜಯಂತ್ಯುತ್ಸವದ ಅಂಗವಾಗಿ ನಗರದ ತರಾಸು ರಂಗಮಂದಿರದಲ್ಲಿ ಫೆ.22 ಮತ್ತು 23 ರಂದು ಸಂಜೆ 4.30ಕ್ಕೆ ಸರಿಗಮ ಸಂಗೀತ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ನಾಟಕೋತ್ಸವ ಸಮಿತಿ ಕಾರ್ಯದರ್ಶಿ ಸುಜೀತ ಕುಲಕರ್ಣಿ ತಿಳಿಸಿದರು.

    Also Read: ಮಾ.1 ರಿಂದ 20 ರವರೆಗೆ PUC ಎಕ್ಸಾಮ್ | ಜಿಲ್ಲೆಯಲ್ಲಿ 26 ಪರೀಕ್ಷಾ ಕೇಂದ್ರಗಳು | 15991 ವಿದ್ಯಾರ್ಥಿಗಳು 

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರಿಗಮ ಸಂಗೀತ ಪಾಠಶಾಲೆ ಹಾಗೂ ಪರಮರತ್ನ ಸಂಗೀತ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

    ಫೆ.22 ರಂದು ಉದ್ಘಾಟನಾ ಸಮಾರಂಭದಲ್ಲಿ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ), ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕಾರ್ಮಿ ಚಳ್ಳಕೆರೆಯ ಕೆ.ಪಿ.ಭೂತಯ್ಯ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಉದ್ಯಮಿ ಸುರೇಶ್ ಬಾಬು ಭಾಗವಹಿಸುವರು. ಸರಿಗಮ ಸಂಗೀತ ನಾಟಕೋತ್ಸವದ ಅಧ್ಯಕ್ಷ ಸತ್ಯನಾರಾಯಣ ರೆಡ್ಡಿ ಅಧ್ಯಕ್ಷತೆ ವಹಿಸುವರು.

    ಶ್ರೀಕಂಠಶಾಸ್ತ್ರಿ ಅಮರಾರ್ಯ ಹಿರೇಮಠ ವಿರಚಿತ ಪೌರಾಣಿಕ ನಾಟಕ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ಪ್ರದರ್ಶನವಾಗಲಿದೆ.

    Also Read: ಜಿಲ್ಲೆಯ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ | ಜೆ.ವೈಶಾಲಿ

    ಫೆ.23 ರಂದು ಸಮಾರೋಪ ಸಮಾರಂಭದಲ್ಲಿ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕಾರ್ಮಿ ಬಿ.ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಾಘವೇಂದ್ರ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಮೈಸೂರಿನ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರೊ.ಟಿ.ಜಯರಾಮ್ ಭಾಗವಹಿಸುವರು.

    ಹೂವಿನ ಹಡಗಲಿ ನಿವೃತ್ತ ಪೋಲೀಸ್ ಅಧಿಕಾರಿ ಟಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸುವರು.

    ಮಹಾದೇವ ಹೊಸೂರು ವಿರಚಿತ ಸಾಮಾಜಿಕ ನಾಟಕ ಅಕ್ಕ ಅಂಗಾರ, ತಂಗಿ ಬಂಗಾರ ನಾಟಕ ಪ್ರದರ್ಶನವಾಗಲಿದೆ ಎಂದು ವಿವರಿಸಿದರು.

    Also Read: ಫೆ.26 ರಂದು ಶ್ರೀಕತ್ತಿಕಲ್ಲಾಂಭ ದೇವಿಯ ನೂತನ ರಥ ಲೋಕರ್ಪಾಣೆ

    ಸುದ್ದಿಗೋಷ್ಠಿಯಲ್ಲಿ ಸರಿಗಮ ಸಂಗೀತ ನಾಟಕೋತ್ಸವ ಸಮಿತಿ ಅಧ್ಯಕ್ಷ ಸತ್ಯನಾರಾಯಣ ರೆಡ್ಡಿ, ಉಪಾಧ್ಯಕ್ಷರು ಡಾ.ಟಿ.ಭವ್ಯರಾಣಿ, ಸದಸ್ಯ ಸಿ.ಮಂಜುನಾಥ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top