Connect with us

    ಸುರಕ್ಷತಾ ನಿಯಮ ಪಾಲಿಸಿ ಗೃಹ ಬಳಕೆ ವಿದ್ಯುತ್‌ ಅವಘಡ ತಪ್ಪಿಸಿ

    POWER

    ಮುಖ್ಯ ಸುದ್ದಿ

    ಸುರಕ್ಷತಾ ನಿಯಮ ಪಾಲಿಸಿ ಗೃಹ ಬಳಕೆ ವಿದ್ಯುತ್‌ ಅವಘಡ ತಪ್ಪಿಸಿ

    CHITRADURGA NEWS | 27 JUNE 2024
    ಚಿತ್ರದುರ್ಗ: ಮಳೆಗಾಲ ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಂತ ಈಗಾಗಲೇ ಒಂದು ಸುತ್ತು ಉತ್ತಮ ಮಳೆಯಾಗಿದೆ. ಮಳಯ ಸಂಭ್ರಮದಲ್ಲೇ ವಿದ್ಯುತ್‌ ಅವಘಡಗಳು ಜಿಲ್ಲೆಯಲ್ಲಿ ಸಂಭವಿಸುತ್ತಿವೆ. ಇಂಧನ ಇಲಾಖೆ ನೀಡಿರುವ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಮೂಲಕ ಗೃಹ ಬಳಕೆ ವಿದ್ಯುತ್‌ ಅವಘಡಗಳನ್ನು ತಪ್ಪಿಸಬಹುದಾಗಿದೆ.

    ಎಲ್ಲ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ, ಪರಿಣಿತ ವ್ಯಕ್ತಿಗಳಿಂದಲೇ ನಿರ್ವಹಿಸಬೇಕು. ಭಾರತೀಯ ಗುಣಮಟ್ಟ ಸಂಸ್ಥೆಯ (ISI) ಪ್ರಮಾಣೀಕೃತ ವಿದ್ಯುತ್‌ ಉಪಕರಣ, ಕೇಬಲ್‌, ವೈರ್ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಬೇಕು.

    ಕ್ಲಿಕ್‌ ಮಾಡಿ ಓದಿ: ಲಾರ್ವಾ ಸಮೀಕ್ಷೆಗೆ ಸ್ವಯಂಸೇವಕರ ಆಯ್ಕೆಗೆ ಅರ್ಜಿ ಆಹ್ವಾನ

    ವಿದ್ಯುತ್‌ ಸ್ಥಾವರದಲ್ಲಿ ಪರಿಣಾಮಕಾರಿ ಭೂಸಂಪರ್ಕ ವ್ಯವಸ್ಥೆಯನ್ನು (ಅರ್ಥಿಂಗ್‌) ಕಲ್ಪಿಸಿ, ನಿರ್ವಹಿಸಬೇಕಾಗಿರುತ್ತದೆ.
    ಜೀವ ರಕ್ಷಕ ಆರ್‌ಸಿಡಿಗಳನ್ನು ಬಳಸಿ ವಿದ್ಯುತ್ ಸೋರಿಕೆಯಿಂದ ಉಂಟಾಗುವ ಅಪಾಯವನ್ನು ತಪ್ಪಿಸುವುದು.

    POWER 1

    ಗೃಹ ಬಳಕೆ ವಿದ್ಯುತ್‌ ಅವಘಡ

    ಭಾರಿ ವಿದ್ಯುತ್‌ ಪರಿಕರಗಳಾದ ರೆಫ್ರಿಜರೇಟರ್‌, ಮಿಕ್ಸರ್‌, ಘೀಸರ್‌, ವಾಷಿಂಗ್ ಮಷಿನ್ ಮುಂತಾದವುಗಳಿಗೆ ಮೂರು ಪೀನ್‌ ಪ್ಲಗ್‌ ಸಾಕೆಟ್ಸ್‌ಗಳಿರುವ ಪ್ರತ್ಯೇಕ ಸ್ವಿಚ್‌ ನಿಯಂತ್ರಣದಿಂದಲೇ ವಿದ್ಯುತ್‌ ಸರಬರಾಜು ಕಲ್ಪಿಸಿ, ಮೂರನೇ ಪಿನ್‌ಗೆ ಭೂಸಂಪರ್ಕ ಕಲ್ಪಿಸಬೇಕಾಗಿರುತ್ತದೆ.

    ವಿದ್ಯುತ್‌ ಸ್ವಿಚ್ ಹಾಗೂ ಸಾಕೆಟ್‌ಗಳನ್ನು ಕೈಗೆ ಎಟುಕುವ ಎತ್ತರದಲ್ಲಿ ಮಕ್ಕಳಿಗೆ ಸಿಗದ ಹಾಗೆ ಅಳವಡಿಸಬೇಕು.
    ಒದ್ದೆಯಾದ ಕೈಗಳಿಂದ ವಿದ್ಯುತ್‌ ಸ್ವಿಚ್‌ಗಳನ್ನು ಮುಟ್ಟಬಾರದು. ವಿದ್ಯುತ್ ಪ್ಲಗ್‌ ಅನ್ನು ಸಾಕೆಟ್‌ನಲ್ಲಿ ಅಳವಡಿಸುವ ಅಥವಾ ಅದರಿಂದ ತೆಗೆಯುವ ಮುಂಚಿತವಾಗಿ ಸ್ವಿಚ್‌ ಅನ್ನು ಆಫ್‌ ಮಾಡಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬೇಕು. ಬಳಸದೇ ಇರುವ ಸಾಕೆಟ್‌ ಗಳಿಗೆ ಡಮ್ಮಿ ಸುರಕ್ಷಾ ಮುಚ್ಚಳವನ್ನು ಅಳವಡಿಸಬೇಕು.

    ಒಡೆದುಹೋಗಿರುವ ಅಥವಾ ಕೃಷವಾಗಿರುವ ವಿದ್ಯುತ್‌ ಸ್ವಿಚ್ ಹಾಗೂ ಸಾಕೆಟ್‌ಗಳು ಕಂಡಬಂದ ಸಂದರ್ಭದಲ್ಲಿಯೇ ಹೊಸದರೊಂದಿಗೆ ಬದಲಾಯಿಸುವುದು. ನಿಯತಕಾಲಿಕವಾಗಿ ವಿದ್ಯುತ್‌ ಸ್ಥಾವರವನ್ನು ಪರಿಶೀಲಿನೆಗೆ ಒಳಪಡಿಸಿ ಸುಸ್ಥಿತಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ.
    ಅತಿಯಾದ ವಿಶ್ವಾಸದಿಂದ ವಿದ್ಯುತ್‌ ಕಾಮಗಾರಿಗಳನ್ನು ಸ್ವತಃ ನಿರ್ವಹಿಸಬಾರದು. ನಿಯಂತ್ರಣ ಸ್ವಿಚ್‌ ಅನ್ನು ಆಫ್ ಮಾಡದೇ ಬಲ್ಬ್‌ ಅನ್ನು ಬದಲಾಯಿಸಬಾರದು. ಎಕ್ಸ್‌ಟೆನ್ನನ್‌ ಕಾರ್ಡ್‌ಗಳನ್ನು ಬಳಸಿ ವಿದ್ಯುತ್ ಮಂಡಲದ ಮೇಲೆ ಹೆಚ್ಚು ಭಾರವನ್ನು ಹಾಕಬಾರದು.

    ಕ್ಲಿಕ್‌ ಮಾಡಿ ಓದಿ: ಈ ವರ್ಷವೂ ಚಿತ್ರದುರ್ಗಕ್ಕೆ ಭದ್ರೆ ಹರಿಯುವುದು ಅನುಮಾನ

    ಮನೆಯ ಛಾವಣೆಯ ಮೇಲೆ ಬಟ್ಟೆಯನ್ನು ಒಣಗಿಸಲು, ಆಂಟೆನಾಗಳನ್ನು ಅಳವಡಿಸಲು ಬಳಸಲಾಗುವ ಕಂಬಗಳಿಗೆ ಸ್ಟೇ ತಂತಿಗಳನ್ನು ಸರ್ವಿಸ್‌ ಪೋಲ್ ಅಥವಾ ವಿದ್ಯುತ್‌ ದೀಪದ ಫಿಟ್ಟಿಂಗ್‌ ಇರುವ ಪೋಲ್‌ಗಳಿಗೆ ಬಿಗಿಯಬಾರದು. ವಿದ್ಯುತ್‌ ಕಂಬಗಳನ್ನು ಆಧಾರವಾಗಿ ಬಳಸಿ ಬಟ್ಟೆ ಒಣಗಿಸಲು ಸ್ಟೇ ತಂತಿಯನ್ನು ಬಿಗಿಯಬಾರದು.

    ತುಂಡಾಗಿ ನೆಲದಲ್ಲಿ ಬಿದ್ದಿರುವ, ತುಂಡಾಗಿ ಮರದ ಮೇಲೆ ಬಿದ್ದಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್‌ ತಂತಿಗಳು ಕಂಡುಬಂದಲ್ಲಿ, ಅದನ್ನು ಸ್ಥಳಾಂತರಿಸುವ ಪ್ರಯತ್ನ ಮಾಡಬಾರದು. ತಂತಿಯಿಂದ ಕನಿಷ್ಟ 10 ಮೀಟರ್ ಅಂತರದಲ್ಲಿರಬೇಕು. ಕೂಡಲೇ ಸ್ಥಳೀಯ ವಿದ್ಯುತ್ ಸರಬರಾಜುದಾರರ ಕಚೇರಿಗೆ ವಿಷಯ ತಿಳಿಸಬೇಕು.

    ವಿದ್ಯುತ್‌ ಮಾರ್ಗವನ್ನು ಹೊತ್ತ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು. ಈ ಕ್ರಮಗಳನ್ನು ಅನುಸರಿಸುವ ಮೂಲಕ ವಿದ್ಯುತ್‌ ಅವಘಡಗಳನ್ನು ತಪ್ಪಿಸಬಹುದಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top