Connect with us

    Hostel; ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ | ಚಿತ್ರದುರ್ಗದಲ್ಲಿ ಜಯದೇವ ಹಾಸ್ಟೆಲ್ ಪುನರಾರಂಭ 

    ಶ್ರೀ ಮುರುಘಾರಾಜೇಂದ್ರ ಜಯದೇವ ವಿದ್ಯಾರ್ಥಿ ನಿಲಯವನ್ನು ಮರು ಪ್ರಾರಂಭಗೊಳಿಸಲಾಯಿತು

    ಮುಖ್ಯ ಸುದ್ದಿ

    Hostel; ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ | ಚಿತ್ರದುರ್ಗದಲ್ಲಿ ಜಯದೇವ ಹಾಸ್ಟೆಲ್ ಪುನರಾರಂಭ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS |15 AUGUST 2024

    ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಶ್ರೀ ಮುರುಘಾರಾಜೇಂದ್ರ ಜಯದೇವ ವಿದ್ಯಾರ್ಥಿ ನಿಲಯ(Hostel)ವನ್ನು ಮರು ಪ್ರಾರಂಭಗೊಳಿಸಲಾಯಿತು.

    ಮುರುಘಾಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರು ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಮಾತನಾಡಿ, ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳು ಕೈಕೊಂಡ ಅನೇಕ ಜನಹಿತ ಕಾರ್ಯಗಳಲ್ಲಿ ವಿದ್ಯಾಪ್ರಸಾರಕ್ಕೆ ಮಾಡಿದ ಸಹಾಯ ಅತ್ಯಮೋಘವಾದದ್ದು.

    ಕ್ಲಿಕ್ ಮಾಡಿ ಓದಿ: Accident; ರಸ್ತೆ ಅಪಘಾತದಲ್ಲಿ ಯುವಕ ಸಾವು | ಅಂಗಾಂಗ ದಾನ ಮಾಡಿದ ಕುಟುಂಬಸ್ಥರು 

    ಸ್ವಾತಂತ್ರ ಪೂರ್ವದಲ್ಲಿಯೇ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ವಿದ್ಯಾರ್ಥಿನಿ ಲಯಗಳನ್ನು ತೆರೆದು ಸಾವಿರಾರು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುವ ಸದಾವಕಾಶವನ್ನು ಕಲ್ಪಿಸಿಕೊಟ್ಟಿದ್ದವರು ಎಂದರು.

    ಸಂಕಲ್ಪ ಶಕ್ತಿ ಮತ್ತು ದೂರದರ್ಶಿತ್ವದ ಸಂಕೇತವಾಗಿ ಚಿತ್ರದುರ್ಗ, ಬೆಂಗಳೂರು, ತಿಪಟೂರು, ದಾವಣಗೆರೆ, ಧಾರವಾಡ, ಕೊಲ್ಲಾಪುರ, ಹಾವೇರಿ (ಹೊಂಡದ ಮಠ), ಅಥಣಿ, ಅರಸೀಕೆರೆ, ನಿಪ್ಪಾಣಿ, ಜಯದೇವ ವಾಡಿ (ಕಾಶಿ) ಹೀಗೆ ಪ್ರಮುಖ ಪಟ್ಟಣಗಳಲ್ಲಿ ಪ್ರಸಾದ ನಿಲಯಗಳನ್ನು ಸಂಸ್ಥಾಪಿಸಿರುವುದು ಅಸಂಖ್ಯಾ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ.

    ವೀರಶೈವ ಲಿಂಗಾಯತ ಬಡಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶ್ರೀ ಜಯದೇವ ಜಗದ್ಗುರುಗಳ ಆಶಯವನ್ನು ಮುಂದುವರೆಸುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಯದೇವ ವಿದ್ಯಾರ್ಥಿ ನಿಲಯದ ಈ ಹಳೆಯ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಗಿದೆ ಎಂದರು.

    ಕ್ಲಿಕ್ ಮಾಡಿ ಓದಿ: Chitradurga No.1: ಕರ್ನಾಟಕಕ್ಕೆ ಚಿತ್ರದುರ್ಗವೇ ನಂ.1 | ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌

    ಜಯದೇವ ಜಗದ್ಗುರುಗಳ ಹುಟ್ಟೂರಾದ ಬಿನ್ನಾಳದಲ್ಲಿರುವ ಹುಟ್ಟಿದ ಮನೆಯ ಜೀರ್ಣೋದ್ಧಾರ ಕಾರ್ಯ ಅರ್ಧ ಮುಗಿದಿದ್ದು, ಉಳಿದರ್ಧ ಕಾರ್ಯವನ್ನು ಸೆಪ್ಟೆಂಬರ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ಭಕ್ತರು ಒತ್ತಾಯವಿದ್ದು, ಈ ವರ್ಷ ಶ್ರೀಗಳ 150ನೇ ಜಯಂತ್ಯುತ್ಸವ ಇರುವುದರಿಂದ 2 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ವೀರಶೈವ ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ವೀಣಾ ಸುರೇಶ್, ಸುರೇಶ್‌ಬಾಬು, ಕೆ.ಎಂ.ವೀರೇಶ್, ವೀರಶೈವ ಸಮಾಜದ ಕಾರ್ಯದರ್ಶಿ ಪಿ. ವೀರೇಂದ್ರಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top