ಹೊಳಲ್ಕೆರೆ
ರಾಮಗಿರಿ ಕರಿಸಿದ್ದೇಶ್ವರ ಸ್ವಾಮಿ ಕಾರ್ತಿಕ, ಲಕ್ಷ ದೀಪೋತ್ಸವ | ಶಾಂತಿಸಭೆ
CHITRADURGA NEWS | 12 DECEMBER 2024
ಹೊಳಲ್ಕೆರೆ: ಡಿ.16 ಮತ್ರು 17 ರಂದು ನಡೆಯಲಿರುವ ರಾಮಗಿರಿ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಡೆ ಕಾರ್ತಿಕ, ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ರಾಮಗಿರಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ | ಸರ್ಕಾರದ ನಡೆಗೆ ರೇಣುಕಾಚಾರ್ಯ ಗರಂ
ಸಭೆಯಲ್ಲಿ ಸಿಪಿಐ ಎಂ.ಬಿ.ಚಿಕ್ಕಣ್ಣನವರ್ ಮಾತನಾಡಿ, ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕಡೆ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ತಿಕೋತ್ಸವ ರಾತ್ರಿ ವೇಳೆ ನಡೆಯುವ ಕಾರಣ ಸರ ಗಳ್ಳತನ, ಮೊಬೈಲ್, ಬ್ಯಾಗ್, ಪರ್ಸ್ ಕಳ್ಳತನಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಅಪರಿಚಿತ ವ್ಯಕ್ತಿಗಳು ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು.
ಸ್ವಾಮೀಯ ಲಕ್ಷ ದೀಪೋತ್ಸವ ಯಶಸ್ವಿಯಾಗಬೇಕಾದರೆ ಗ್ರಾಮಸ್ಥರು, ಯುವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಮ್ಮ ಸಿಬ್ಬಂದಿಗೆ ಅಗತ್ಯ ನೆರವು ನೀಡಬೇಕು. ವಿದ್ಯುತ್ ದೀಪಾಲಂಕಾರವನ್ನು ತುಂಬಾ ಎಚ್ಚರಿಕೆಯಿಂದ ಅಳವಡಿಸಬೇಕು.
ಕ್ಲಿಕ್ ಮಾಡಿ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಕಂಪ್ಯೂಟರ್ ರಿಪೇರಿ, ಕುರಿ ಸಾಕಾಣಿಕೆ, ಮಶ್ರೂಮ್ ಕೃಷಿ, ಇನ್ನಿತರೆ ತರಬೇತಿಗೆ ಅರ್ಜಿ ಆಹ್ವಾನ
ಯಾವುದೇ ಅವಘಡಗಳಿಗೆ ಆಸ್ಪದ ನೀಡಬಾರದು, ಹಾಗೆಯೇ ಜಾತ್ರೆಯ ಪರಿಸ್ಥಿತಿಗೆ ಅನುಗುಣವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಸದಸ್ಯ ಹೊದಿಗೆರೆ ರಾಜಪ್ಪ ಮಾತನಾಡಿ, ಕಾರ್ತಿಕೋತ್ಸವದ ನಿಮಿತ್ತ ಸೋಮವಾರ ರಾತ್ರಿ ಯಾವುದೇ ಗಲಾಟೆ, ಗದ್ದಲ, ಅಹಿತಕರ ಘಟನೆಗಳು, ಕಳ್ಳತನಗಳಿಗೆ ಆಸ್ಪದವಾಗದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿಯ ಎರಡು ಮದ್ಯದಂಗಡಿ ( ಬಾರ್ ) ಗಳನ್ನು ಕಡ್ಡಾಯವಾಗಿ ರಾತ್ರಿ 9 ಗಂಟೆಗೆ ಮುಚ್ಚಿಸಬೇಕು. ಇಲ್ಲವಾದಲ್ಲಿ ಮದ್ಯಪಾನ ಮಾಡಿ ಗಲಾಟೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇನ್ನೂ ಸೋಮವಾರ ಬೆಳಗ್ಗೆಯಿಂದಲೇ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಪೊಲೀಸರನ್ನು ಬೆಳಗ್ಗೆಯಿಂದಲೇ ಕರ್ತವ್ಯಕ್ಕೆ ನಿಯೋಜಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಬ್ಯಾರಿಕೆಡ್ ಹಾಕಬೇಕು. ಮಂಗಳವಾರ ಬೆಳಗಿನ ಜಾವ ನಡೆಯುವ ಬಾಳೆಹಣ್ಣು ರಾಶಿ ಪೂಜೆ ವೇಳೆ ನೂಕು ನುಗ್ಗಲು ಸಂಭವಿಸುವುದರಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಅಗತ್ಯವಿದೆ.
ಕ್ಲಿಕ್ ಮಾಡಿ ಓದಿ: ಡಿ.25ಕ್ಕೆ ಹೊಳಲ್ಕೆರೆಗೆ ವೀರೇಂದ್ರ ಹೆಗ್ಗಡೆ ಭೇಟಿ | ನೂತನ ಕಟ್ಟಡ ವಿಕಾಸ ಸೌಧ ಉದ್ಘಾಟನೆ
ಹಾಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುವ ಕಾರಣ ಪಾರ್ಕಿಂಗ್ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಮಾಡಬೇಕಿದೆ ಹಾಗಾಗಿ ಅಜ್ಜಂಪುರ ಕಡೆಯಿಂದ ಬರುವ ವಾಹನಗಳು ಶ್ರೀಕರಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ, ಚೆನ್ನಗಿರಿ ಕಡೆಯಿಂದ ಬರುವ ವಾಹನಗಳು ಎಸ್ ಜೆ ಎಂ ಶಾಲೆ ಅಥವಾ ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ, ಹೊಳಲ್ಕೆರೆ ಕಡೆಯಿಂದ ಬರುವ ವಾಹನಗಳು ಸಂತೆ ಮೈದಾನದಲ್ಲಿ,, ಹೊಸದುರ್ಗ ಕಡೆಯಿಂದ ಬರುವ ವಾಹನಗಳು ಕೆನರಾ ಬ್ಯಾಂಕ್ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮೇಲಗಿರಿ ಷಣ್ಮುಖಪ್ಪ, ಸದಸ್ಯರಾದ ಸಿದ್ದೇಶ್ ಯಾದವ್, ಶಿವಶಂಕರ ನಾಯಕ, ರವಿ, ಮಾಜಿ ಅಧ್ಯಕ್ಷ ಹೇಮಂತ್, ದೇವಾಲಯ ಸಮಿತಿ ಅಧ್ಯಕ್ಷ ಪೋಸ್ಟ್ , ಓಂಕಾರಪ್ಪ, ಸದಸ್ಯರಾದ ಕಾಟಪ್ಪ, ಜಾನಜ್ಜರ ರವಿ, ಪಿಎಸ್ ಐ ಸಚೀನ್ , ಪೇದೆಗಳಾದ ಹೇಮಂತ್, ವಸಂತ್ ಮುಖಂಡರಾದ ಮೇಲಗಿರಿ ಮೋಹನ್, ಜಿ.ಆರ್.ಮನಮೋಹನ್, ಕುಮಾರಣ್ಣ, ಚಂದ್ರು ಯಾದವ್, ಆರ್.ಗಂಗಾಧರಪ್ಪ, ಕುಮಾರ್ ಪಾಳೇಗಾರ್, ಮೇಲಗಿರಿ ಕೀರ್ತಿ ಮತ್ತಿತರರಿದ್ದರು.