ಮುಖ್ಯ ಸುದ್ದಿ
ಕವಾಡಿಗರಹಟ್ಟಿ ಹಾಗೂ ಯೂನಿಯನ್ ಪಾರ್ಕ್ ಕಾರ್ನರ್ ನಲ್ಲಿರುವ ರಾಜಕಾಲುವೆ ಒತ್ತುವರಿ ತೆರವು
CHITRADURGA NEWS | 31 MAY 2024
ಚಿತ್ರದುರ್ಗ: ನಗರದ ಕವಾಡಿಗರಹಟ್ಟಿಯಲ್ಲಿ ಹಾಗೂ ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕ್ ಕಾರ್ನರ್‍ನಲ್ಲಿರುವ ರಾಜಕಾಲುವೆಯನ್ನು ಒತ್ತುವರಿ ತೆರವುಯನ್ನು ಮಾಡಲಾಯಿತು.
ಇದನ್ನೂ ಓದಿ: ಮದ್ಯಪ್ರಿಯರೇ ಗಮನಿಸಿ…ನಾಳೆಯಿಂದ ಮದ್ಯ ಮಾರಾಟ ಬಂದ್
ರಾಜಕಾಲುವೆಯಲ್ಲಿ ತುಂಬಿದ್ದ ಹೂಳು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.
ಈ ವೇಳೆ ನಗರಸಭೆ ಪೌರಾಯುಕ್ತೆ ರೇಣುಕಾ ಮಾತನಾಡಿ, ಮಳೆಗಾಲದಲ್ಲಿ ರಾಜಕಾಲುವೆ ತುಂಬಿ ಮನೆಗಳಿಗೆಲ್ಲಾ ನೀರು ನುಗ್ಗಿ ಅಪಾಯ ಸಂಭವಿಸಬಾರದೆಂದು ಹೂಳು ತೆಗೆಸಲಾಗುತ್ತಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಮತ್ತು ಕಸವನ್ನು ಚರಂಡಿ, ರಾಜಕಾಲುವೆಗಳಲ್ಲಿ ಎಸೆಯುವ ಬದಲು ದಿನ ಬೆಳಿಗ್ಗೆ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಹಾಕುವ ಮೂಲಕ ಸ್ವಚ್ಚತೆಗೆ ನಗರಸಭೆಯೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಭೇಟಿ | ಸ್ವಚ್ಛತೆ ಕಾಪಾಡಲು ಸೂಚನೆ
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಯಪ್ಪ, ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ನಾಗರಾಜ್ ಇದ್ದರು.