ಮುಖ್ಯ ಸುದ್ದಿ
KSFC ನಿರ್ದೇಶಕರಾಗಿ ರಘು ಆಚಾರ್ ಅವಿರೋಧ ಆಯ್ಕೆ
Published on
CHITRADURGA NEWS | 24 JULY 2024
ಚಿತ್ರದುರ್ಗ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಆಡಳಿತ ನಿರ್ದೇಶಕರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: BESCOM; ವಿದ್ಯುತ್ ಕಂಬ ಹತ್ತಿದ್ದ ಬಾಲಕ ಸಾವು | ಪಾರಿವಾಳ ಕಾಪಾಡಲು ಕಂಬ ಹತ್ತಿದ್ದಾಗ ಘಟನೆ
ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ರಘು ಆಚಾರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇಂದು ನಡೆದ KSFC ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2024 ಜುಲೈ 18 ರಿಂದ 2027 ಜುಲೈ 17 ರವರೆಗಿನ ಮೂರು ವರ್ಷಗಳ ಅವಧಿಗೆ ರಘು ಆಚಾರ್ ನಿರ್ದೇಶಕರಾಗಿರಲಿದ್ದಾರೆ ಎಂದು KSFC ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಟಿ.ರೇಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Continue Reading
Related Topics:Chitradurga, Chitradurga news, choice, Director, Kannada Latest News, KSFC, Raghu Achar, unopposed, ಅವಿರೋಧ, ಆಯ್ಕೆ, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ನಿರ್ದೇಶಕ, ರಘು ಆಚಾರ್
Click to comment