ಮುಖ್ಯ ಸುದ್ದಿ
ಹಸುವಿನ ಕೆಚ್ಚಲು ಕತ್ತರಿಸಿದವರ ವಿರುದ್ಧ ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ

Published on
CHITRADURGA NEWS | 19 JANUARY 2025
ಚಿತ್ರದುರ್ಗ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕತ್ತರಿಸಿ ವಿಕೃತಿ ಮೆರೆದ ದುಷ್ಟರ ಅಮಾನವೀಯ ಕೃತ್ಯವನ್ನು ಖಂಡಿಸಿ ಗೋ ಸಂರಕ್ಷಣ ಸಂವರ್ಧನ ಸಮಿತಿ – ಚಿತ್ರದುರ್ಗ ವತಿಯಿಂದ ಜನವರಿ 20(ನಾಳೆ) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
Also Read: 13ನೇ ಶರಣ ಸಾಹಿತ್ಯ ಸಮ್ಮೇಳನ | ಕೋಟೆ ನಾಡಲ್ಲಿ ವಿದ್ಯುಕ್ತ ಚಾಲನೆ | ಯಾರು ಏನು ಹೇಳಿದ್ರು ?

ಹಸುವಿನ ಕೆಚ್ಚಲು ಕತ್ತರಿಸಿದ ರಾಕ್ಷಸರಿಗೆ ಉಗ್ರ ಶಿಕ್ಷೆಯನ್ನು ನೀಡಿ ಗೋಸಂಕುಲವನ್ನು ಸಂರಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ಆಗ್ರಹಿಸಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಆನೆ ಬಾಗಿಲಿನಿಂದ ಒನಕೆ ಓಬವ್ವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಗೋ ಪೂಜೆ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು, ಗೋ ಪ್ರೇಮಿಗಳು ಭಾಗವಹಿಸಲು ಗೋ ಸಂವರ್ಧನಾ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.
Also Read: ಮೋಟಾರ್ ಪಂಪ್, ಕೇಬಲ್ ಕಳ್ಳನ ಬಂಧನ
Continue Reading
Related Topics:Act, Chamarajpet, Chitradurga, Chitradurga news, Chitradurga Updates, cow, Cow Conservation and Promotion Committee, Kannada Latest News, Kannada News, protest, udder, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಕೃತ್ಯ, ಕೆಚ್ಚಲು, ಗೋ ಸಂರಕ್ಷಣ ಸಂವರ್ಧನ ಸಮಿತಿ, ಚಾಮರಾಜಪೇಟೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಪ್ರತಿಭಟನೆ, ಹಸು

Click to comment