Connect with us

    ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪ ಆಯ್ಕೆ

    ಮುಖ್ಯ ಸುದ್ದಿ

    ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪ ಆಯ್ಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 27 FEBRUARY 2025

    ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ, ಸಾಹಿತಿ ಪ್ರೊ.ಜಿ.ಪರಮೇಶ್ವರಪ್ಪ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ.

    Also Read: ಮಾರುಕಟ್ಟೆ ಧಾರಣೆ | 5 ಸಾವಿರಕ್ಕೆ ಕುಸಿದ ಹತ್ತಿ ಬೆಲೆ | ಇಂದಿನ ರೇಟ್ ಎಷ್ಟಿದೆ?

    ಜಿಲ್ಲೆಯಲ್ಲಿ ಹಳೆಗನ್ನಡ ಸಾಹಿತಿಯಾಗಿರುವ ಪ್ರೊ.ಪರಮೇಶ್ವರಪ್ಪ ಹಲವು ಕೃತಿಗಳನ್ನು ರಚಿಸಿದ್ದು, ಬುಡಕಟ್ಟು ಸಮುದಾಯಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಮಾ. 9,10 ರಂದು ಹೊಳಲ್ಕೆರೆಯಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.

    ಈಗಾಗಲೇ ಸಮ್ಮೇಳನದ ಲಾಂಛನವನ್ನು ಉಸ್ತುವಾರಿ ಸಚಿವ ಡಿ.ಸುಧಾಕರ್, ಪ್ರಚಾರ ಪೋಸ್ಟರ್‌ಗಳನ್ನು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕರ ಎಂ.ಚಂದ್ರಪ್ಪ ಬಿಡುಗಡೆಗೊಳಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎ..ಶಿವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಪ್ರೊ.ಪರಮೇಶ್ವರಪ್ಪ ಪರಿಚಯ: 

    ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆ ಹಟ್ಟಿಯಲ್ಲಿ 1950 ಅಕ್ಟೋಬರ್ 15 ರಂದ ಜನಿಸಿದರು. ಮೈಸೂರು ವಿವಿಯಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಬೀದರ್, ಮಾಯಕೊಂಡ, ಬೆಳಗಾವಿ ಜಿಲ್ಲೆಯ ಅಥಣಿ, ಚಳ್ಳಕೆರೆ ಮತ್ತು ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. 980 ರಿಂದ 30 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2010 ರಲ್ಲಿ ನಿವೃತ್ತರಾಗಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಕ್ರಿಯಾಶೀಲರಾಗಿ ಸಲ್ಲಿಸಿದ್ದಾರೆ.

    Also Read: ಬಸವೇಶ್ವರ ಮೆಡಿಕಲ್ ಕಾಲೇಜಿಗೆ 7 ರ್ಯಾಂಕ್

    ಕಲಾಸಿರಿ, ಸಾಹಿತ್ಯ ಸಂಶೋಧನೆ, ಮನಸ್ವಿ, ಬುಡಕಟ್ಟು ಕಥನಗಳು, ವದ್ದೀಕೆರೆ ಸಿದ್ದೇಶ್ವರ ಚರಿತೆ, ವೀರಕರಿಯಣ್ಣ ಪ್ರಮುಖ ಕೃತಿಗಳಾಗಿವೆ. ಚದುರಿದ ಚಿಂತನೆಗಳು ಮತ್ತು ವರ್ತಮಾನದ ಜನರ ಆಲೋಚನೆಗಳ ಎಂಬ ಎರಡು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಬುಡಕಟ್ಟುಗಳ ಕಥೆಗಳನ್ನು ಭಾಮಿನಿ ಷಟ್ಪದಿಯಲ್ಲಿ ಕವನ ರೂಪದಲ್ಲಿ ರಚಿಸಿರುವುದು ಇವರ ವಿಶೇಷವಾಗಿದೆ. ನಾನಾ ಕನ್ನಡ ಸಂಘಟನೆಗಳು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ಗೌರವಿಸಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top