ಮುಖ್ಯ ಸುದ್ದಿ
SOLAR; ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ | 3 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ
CHITRADURGA NEWS | 04 AUGUST 2024
ಚಿತ್ರದುರ್ಗ: ರೋಟರಿಕ್ಲಬ್ ಚಿನ್ಮೂಲಾದ್ರಿಯ ವತಿಯಿಂದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಅಡಿಯಲ್ಲಿ ವಿ.ಪಿ ಬಡಾವಣೆಯಲ್ಲಿನ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಜಂಟಿ ಕಾರ್ಯದರ್ಶಿ ಶೈಲಾ ಅರುಣ್ ಅವರ ಮನೆಯಲ್ಲಿ 3 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ಘಟಕ(SOLAR) ವನ್ನು ಅಳವಡಿಸಲಾಯಿತು.
ಕ್ಲಿಕ್ ಮಾಡಿ ಓದಿ: Hindu Mahaganapathi: ಹಿಂದೂ ಮಹಾಗಣಪತಿ ಉತ್ಸವ ಸಮಿತಿಗೆ ಬಿ.ನಯನ್ ಅಧ್ಯಕ್ಷ
ಈ ವೇಳೆ ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷ ಮಂಜುನಾಥ್ ಭಾಗವತ್ ಮಾತನಾಡಿ, ಪ್ರಸುತ್ತಾ ದಿನಮಾನದಲ್ಲಿ ನಮ್ಮಲ್ಲಿರುವ ಇಂಧನಗಳು ಮುಂದಿನ ದಿನದಲ್ಲಿ ಖಾಲಿಯಾಗಬಹುದು ಆದರೆ ಸೂರ್ಯನ ಕಿರಣಗಳು ಎಂದಿಗೂ ಸಹಾ ಖಾಲಿಯಾಗುವುದಿಲ್ಲ, ಇದನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡುವುದರ ಮೂಲಕ ಸಂಪಾದನೆಯನ್ನು ಸಹಾ ಮಾಡಬಹುದಾಗಿದೆ ಎಂದು ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷ ಮಂಜುನಾಥ್ ಭಾಗವತ್ ತಿಳಿಸಿದ್ದಾರೆ.
ನಮ್ಮಲ್ಲಿನ ಇಂಧನಗಳು ಹಲವಾರು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ, ಇವುಗಳು ಮುಂದೆ ಒಂದು ದಿನ ಖಾಲಿಯಾಗಬಹುದು ಆದರೆ ಸೂರ್ಯನ ಕಿರಣಗಳು ನಮ್ಮ ಭೂಮಿ ಇರುವವರೆಗೂ ಸಹಾ ಇರುತ್ತದೆ ಇದನ್ನು ಮನೆ ಅಥವಾ ಕಟ್ಟಡದ ಮೇಲೆ ಆಳವಡಿಕೆಯನ್ನು ಮಾಡುವುದರ ಮೂಲಕ ಸೂರ್ಯನಿಂದ ನೇರವಾಗಿ ವಿದ್ಯುತ್‌ನ್ನು ಬಳಕೆ ಮಾಡಬಹುದಾಗಿದೆ.
ಇದರ ಅಳವಡಿಕೆಯೂ ಸಹಾ ಸುಲಭವಾಗಿದ್ದು ಇದಕ್ಕೆ ಕೇಂದ್ರ ಸರ್ಕಾರ ಸಹಾಯಧನ ನೀಡಲಿದೆ, ಅಲ್ಲದೆ ನಿಮ್ಮಲ್ಲಿ ಉತ್ಪಾದನೆಯಾಗಿ ನೀವು ಬಳಕೆ ಮಾಡಿ ಉಳಿದ ವಿದ್ಯುತ್‌ನ್ನು ವಾಪಾಸ್ಸ್ ಮಾರಾಟ ಮಾಡಬಹುದಾಗಿದೆ, ಇದರಿಂದ ಸಂಪದಾನೆಯೂ ಸಹಾ ಆಗಲಿದೆ ಎಂದರು.
ಮುಂದಿನ 15 ವರ್ಷಗಳ ಕಾಲ ನಿಮ್ಮಲ್ಲಿ ಉತ್ಪಾದನೆಯಾದ ವಿದ್ಯುತ್‌ನ್ನು ಸರ್ಕಾರ ಖರೀದಿ ಮಾಡಲಿದೆ ಎಂದು ಮಂಜುನಾಥ್ ತಿಳಿಸಿದರು.
ಕ್ಲಿಕ್ ಮಾಡಿ ಓದಿ: Muda scam: ಜನ ನಿಮ್ಮನ್ನು ಕ್ಷಮಿಸುವುದಿಲ್ಲ | ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ
ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಸರ್ಕಾರ ಸೂರ್ಯನ ಬೆಳಕಿನಿಂದ ಉತ್ಪಾದನೆಯಾಗುವ ವಿದ್ಯುತ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವುದರ ಮೂಲಕ ಕೇಂದ್ರ ಸರ್ಕಾರ ದೇಶದ ಎಲ್ಲಡೆ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ತಮ್ಮ ಮನೆಗಳ ಮೇಲೆ ಇದನ್ನು ಆಳವಡಿಕೆ ಮಾಡುವುದರ ಮೂಲಕ ಉಚಿತ ವಿದ್ಯುತ್ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರೋಟರಿಕ್ಲಬ್ ಚಿನ್ಮೂಲಾದ್ರಿಯ ಶಂಕರ್ರಪ್ಪ, ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಶೈಲಾ, ನಾಗರತ್ನ, ಸೆಲ್ಕೂದ ವ್ಯವಸ್ಥಾಪಕ ಅಜೇಯ್, ಲಾವಣ್ಯ ಇದ್ದರು.