ಮುಖ್ಯ ಸುದ್ದಿ
ಅಯೋಧ್ಯೆ ಶ್ರೀ ರಾಮನಿಗೆ ಪಗಡಬಂಡಿ ಗದ್ದಿಗೆ ಕಂಬಳಿ | ಕೈಯಿಂದಲೇ ನೇಯ್ದು ಸಮರ್ಪಣೆ

CHITRADURGA NEWS | 18 JANUARY 2024
ಚಿತ್ರದುರ್ಗ (CHITRADURGA): ಶ್ರೀರಾಮನಿಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧ. ಇದನ್ನು ಪುರಾಣ ಇತಿಹಾಸ ಈಗಾಗಲೇ ಸಾಕ್ಷೀಕರಿಸಿವೆ. ಇದೀಗ ಅಯೋಧ್ಯೆ ಶ್ರೀರಾಮನಿಗೆ ಪಗಡಬಂಡಿ ಗದ್ದಿಗೆ ಕಂಬಳಿ ಅರ್ಪಿತವಾಗಿರುವುದು ಮತ್ತೊಂದು ವಿಶೇಷ.
ಇದನ್ನೂ ಓದಿ: ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಆಯ್ಕೆ
ಚಳ್ಳಕೆರೆ ತಾಲ್ಲೂಕಿನ ಪಗಡಬಂಡಿ ಗ್ರಾಮಸ್ಥರು ಅಯೋಧ್ಯೆಯ ಶ್ರೀ ರಾಮನಿಗೆ ಅರ್ಪಿಸಲು ಗದ್ದಿಗೆ ಕಂಬಳಿ ನೇಯ್ದಿದ್ದಾರೆ. ಅಯೋಧ್ಯೆಯಲ್ಲಿ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಲ್ಲಿ ಗ್ರಾಮದ 40 ಮನೆಗಳಿಂದ ಪವಿತ್ರ ಉಣ್ಣೆ ಸಂಗ್ರಹಿಸಿ ಅದನ್ನು ಕೈಯಿಂದಲೇ ನೇಯ್ದು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.
ಇದನ್ನೂ ಓದಿ: ಹರಿವಾಯುಸ್ತುತಿ ಪಾರಾಯಣದ ಹರಿದಾಸ ಹಬ್ಬಕ್ಕೆ 23ನೇ ಸಂಭ್ರಮ | ಅಯೋಧ್ಯಾರಾಮನ ಭವ್ಯ ಶೋಭಾಯಾತ್ರೆ
ಈ ಗದ್ದಿಗೆ ಕಂಬಳಿಯನ್ನು ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಗ್ರಾಮಸ್ಥರು ಹಸ್ತಾಂತರಿಸಿದ್ದಾರೆ. ಗದ್ದಿಗೆ ಕಂಬಳಿ ಪಡೆದ ಈಶ್ವರಪ್ಪ, ಅದನ್ನು ಅಂಚೆ ಮೂಲಕ ಆಯೋಧ್ಯೆಗೆ ಕಳುಹಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ | ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ
2015ರಲ್ಲಿ ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಅವರಿಗೂ ಇದೇ ರೀತಿಯ ಕಂಬಳಿ ನೀಡಿದ್ದೆವು. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಆದರೆ, ಈ ಪವಿತ್ರ ಕಂಬಳಿಯಿಂದ ದೇಶಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಮ್ಮ ಸಮಾಜದ ಎಲ್ಲರ ಅಪೇಕ್ಷೆಯಂತೆ ಈ ಕಂಬಳಿಯನ್ನು ನೀಡುತ್ತಿದ್ದೇವೆ ಎನ್ನುತ್ತಾರೆ ಪಗಡಬಂಡಿ ಗ್ರಾಮದ ಹಾಲುಮತ ಸಮಾಜದ ಮುಖಂಡ ಎಂ.ವಿ.ಶಾಂತಕುಮಾರ್.
