ಮುಖ್ಯ ಸುದ್ದಿ
ಬ್ಯಾಂಕ್‍ಗಳು ಬಡವರ ಹೆಬ್ಬಾಗಿಲಾದಾಗ ಮಾತ್ರ ದೇಶದಲ್ಲಿ ಪರಿವರ್ತನೆಯಾಗಲು ಸಾಧ್ಯ| ಎ.ನಾರಾಯಣಸ್ವಾಮಿ
CHITRADURGA NEWS | 14 MARCH 2024
ಚಿತ್ರದುರ್ಗ: ಬಡವರು, ಶೋಷಿತ ವರ್ಗಗಳ ಆರ್ಥಿಕಾಭಿವೃದ್ಧಿ ಚಟುವಟಿಕೆಗಳಿಗಾಗಿ ಸಾಲ-ಸೌಲಭ್ಯ ನೀಡುವ ನಿಟ್ಟಿನಲ್ಲಿ ಬ್ಯಾಂಕ್‍ಗಳು ಬಡವರ ಹೆಬ್ಬಾಗಿಲಾಗಬೇಕು. ಬ್ಯಾಂಕ್‍ಗಳು ಬಡವರ ಹೆಬ್ಬಾಗಿಲಾದಾಗ ಮಾತ್ರ ದೇಶದಲ್ಲಿ ಪರಿವರ್ತನೆಯಾಗಲು ಸಾಧ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಹಾಗೂ ಸಂಸದರಾದ ಎ.ನಾರಾಯಣಸ್ವಾಮಿ ಅವರು ಹೇಳಿದರು.
ಇದನ್ನೂ ಓದಿ : 49 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ
ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಎಂ-ಸೂರಜ್ ನ್ಯಾಷನಲ್ ಪೋರ್ಟಲ್‍ನ ಉದ್ಘಾಟನೆ ಹಾಗೂ ಗ್ರಾಹಕ ಸಂಪರ್ಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕ ಸಂಪರ್ಕ ಮೇಳದಂತಹ ಕಾರ್ಯಕ್ರಮಗಳು ನಿಂತ ನೀರಾಗಬಾರದು. ತೆರಿಗೆ ಹಣವನ್ನು ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುವ ಸಂಕಲ್ಪ ಎಲ್ಲ ಸರ್ಕಾರಗಳು, ಜನಪ್ರತಿನಿಧಿಗಳು ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಬಣ್ಣ ಹಾಕಿದ ಗೋಬಿ ಮಂಚೂರಿಗೆ ನಿಷೇಧ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳು, ಸಫಾಯಿ ಕರ್ಮಚಾರಿಗಳು ಸೇರಿದಂತೆ ಎಲ್ಲ ವರ್ಗಗಳ ಸಮುದಾಯಕ್ಕೆ ಅವರ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಆರ್ಥಿಕ ಸಹಾಯವನ್ನು ವಿವಿಧ ರಾಜ್ಯಗಳ ಆಯಾ ಬ್ಯಾಂಕ್‍ಗಳ ಮೂಲಕ ಸಾಲ ವಿತರಣೆ ಮಾಡುವ ಪಿಎಂ-ಸೂರಜ್ ಪೋರ್ಟಲ್‍ನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿ ರಾಷ್ಟ್ರದ ಜನತೆಗೆ ಕೇಂದ್ರ ಸರ್ಕಾರದಿಂದ ಶೋಷಿತ ವರ್ಗಕ್ಕೆ ಹಾಗೂ ದಲಿತರಿಗೆ ಇಂದು ರೂ.660 ಕೋಟಿ ಅನುದಾನವನ್ನು ದೇಶದ ಒಟ್ಟು 01 ಲಕ್ಷ ಮಂದಿಗೆ ಆರ್ಥಿಕ ಸಹಾಯದ ಸಾಲಸೌಲಭ್ಯ ವಿತರಣೆ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್
ಬಡವರಿಗಾಗಿ ಕೆಲಸ ಮಾಡುವುದು, ಬಡವರ ಜತೆ ಇರುವುದು ನನಗೆ ಸ್ವರ್ಗ ಇದ್ದಂತೆ ಎಂದು ಹೇಳಿದ ಸಚಿವರು, ಅಧಿಕಾರಿಗಳು ಬಡವರಿಗಾಗಿ ಕೊಡುವ ಯೋಜನೆಗಳನ್ನು ಆದ್ಯತೆ ಮೇರೆಗೆ ತಲುಪಿಸುವ ಕಾರ್ಯ ಮಾಡಬೇಕು. ಬಡವರ ದರ್ಶನ ಅಧಿಕಾರಿಗಳಿಗೆ ಪ್ರಥಮಾಧ್ಯತೆಯಾಗಬೇಕು. ಆಗ ಮಾತ್ರ ದೇಶದಲ್ಲಿ ಪರಿವರ್ತನೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ ಫಲಾನುಭವಿಗಳಿಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ಸಾಲ-ಸೌಲಭ್ಯದ ಮಂಜೂರಾತಿ ಆದೇಶ ಪ್ರತಿ ಸಾಂಕೇತಿಕವಾಗಿ ವಿತರಣೆ ಮಾಡಿದರು.
ಇದನ್ನೂ ಓದಿ : ಚುನಾವಣೆ ಹೊಸ್ತಿಲಲ್ಲಿ ಸರ್ಕಾರಿ ನೌಕರರಿಗೆ ಬಂಪರ್
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಕೇಂದ್ರ ಕಚೇರಿ ಜನರಲ್ ಮ್ಯಾನೇಜನರ್ ಭಾಗ್ಯರೇಖಾ, ಎನ್‍ಎಸ್‍ಸಿಎಫ್‍ಡಿಸಿ ಸಿಜಿಎಂ ರಮೇಶ್‍ರಾವ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಎನ್‍ಐಸಿ ಅಧಿಕಾರಿ ಕೆಆರ್‍ಕೆ ಶಾಸ್ತ್ರಿ, ದಾವಣಗೆರೆಯ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಕೆ.ಶ್ರೀನಿವಾಸ್, ಗಣ್ಯರಾದ ಮುರುಳಿ, ಮೀಸೆ ಮಹಲಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.