ಮುಖ್ಯ ಸುದ್ದಿ
ನಾಳೆಯಿಂದ ಒಂದು ವಾರ ವಿದ್ಯುತ್ ವ್ಯತ್ಯಯ

CHITRADURGA NEWS | 08 MARCH 2025
ಚಿತ್ರದುರ್ಗ: ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಸಿರಿಗೆರೆ ಶಾಖಾ ವ್ಯಾಪ್ತಿಗೆ ಒಳಪಡುವ Improvements to Sirigere to Bommenahalli via Kadleguddu 15Km in Chitradurga Taluk of Chitradurga Distrcit-CC Road (proposed Ch 0.00 to 13.50 Km) (Working chainage 2.42 to 11.42 Km) (W.I.31)ಕಾಮಗಾರಿಯು ಚಿಕ್ಕೇನಹಳ್ಳಿಯಿಂದ ಕೋಣನೂರು ಗ್ರಾಮದವರೆಗೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾ.09 ರಿಂದ 16 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸಿರಿಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎನ್.ಜೆ.ವೈ ಮತ್ತು ಐ.ಪಿ. ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: 200 ಖಾಲಿ ಹುದ್ದೆಗಳಿಗೆ ಮಾ.13ರಂದು ನೇರ ನೇಮಕಾತಿ ಸಂದರ್ಶನ
ಸಿರಿಗೆರೆ, ಕೋಣನೂರು, ಚಿಕ್ಕೇನಹಳ್ಳಿ, ಆಲಗಟ್ಟ, ಬೊಮ್ಮವ್ವನಾಗತಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಐ.ಪಿ. ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
