Connect with us

    Rain Damage: ಮಳೆಯಿಂದ ಮನೆ ಗೋಡೆ ಕುಸಿತ | ಮನೆಯಲ್ಲಿದ್ದ ವೃದ್ಧೆ ಸಾವು

    wall collaps

    ಕ್ರೈಂ ಸುದ್ದಿ

    Rain Damage: ಮಳೆಯಿಂದ ಮನೆ ಗೋಡೆ ಕುಸಿತ | ಮನೆಯಲ್ಲಿದ್ದ ವೃದ್ಧೆ ಸಾವು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 17 OCTOBER 2024

    ಚಿತ್ರದುರ್ಗ: ಸತತ ಮಳೆಯಿಂದ ನೆಂದು ಹೋಗಿದ್ದ ಮನೆಯ ಗೋಡೆ ಕುಸಿದು ಬಿದ್ದು (Rain Damage) ವೃದ್ದೆ ಮೃತಪಟ್ಟಿರುವ ಘಟನೆ ನಡೆದಿದೆ.

    ಚಿತ್ರದುರ್ಗ ತಾಲೂಕಿನ ಈಚಲನಾಗೇನಹಳ್ಳಿ ಗ್ರಾಮದ 63 ವರ್ಷದ ವೃದ್ಧೆ ರಂಗಮ್ಮನ ಮೇಲೆ ಒದ್ದೆಯಾಗಿದ್ದ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆ

    ಘಟನಾ ಸ್ಥಳಕ್ಕೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಸರ್ಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ತಹಶೀಲ್ದಾರ್‍ಗೆ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: 123 ಅಡಿ ದಾಟಿದ ವಿವಿ ಸಾಗರ ಜಲಾಶಯ | ಭರ್ತಿಯಾಗಲು 7 ಅಡಿ ಬಾಕಿ

    ತಹಶೀಲ್ದಾರ್ ಡಾ.ನಾಗವೇಣಿ, ಗ್ರಾಮಾಂಗತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಪಂ ಅಧ್ಯಕ್ಷೆ ನಿರ್ಮಲಾ ಬಸವರಾಜ್, ಸದಸ್ಯ ಸುರೇಶ್, ಮಾಜಿ ಸದಸ್ಯ ಸಿದ್ದಣ್ಣ ಮತ್ತಿತರರಿದ್ದರು.

    ಕಳೆದ ಒಂದು ವಾರದಿಂದ ಬಿಟ್ಟು ಬಿಡುದಂತೆ ಸುರಿಯುತ್ತಿರುವ ಮಳೆಯಿಂದಾಗಿ ರಂಗಮ್ಮ ವಾಸಿಸುತ್ತಿದ್ದ ಮನೆಯ ಗೋಡೆ ಒದ್ದೆಯಾಗಿ ಕುಸಿದು ಬಿದ್ದಿದೆ.

    ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಪಡೆ ರಚಿಸಿ | ಡಿಸಿ ವೆಂಕಟೇಶ್ ಸಲಹೆ

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top