ಮುಖ್ಯ ಸುದ್ದಿ
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ನೀವು ನಾಮನಿರ್ದೇಶನ ಮಾಡಬಹುದು | ಹೇಗೆ ಅಂತಿರಾ, ಈ ಸುದ್ದಿ ಓದಿ..
ಚಿತ್ರದುರ್ಗ ನ್ಯೂಸ್.ಕಾಂ: ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನವೆಂಬರ್ 1 ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ಪ್ರತಿಷ್ಠಿತ ಹಾಗೂ ರಾಜ್ಯದ ಘನತೆ ಎತ್ತಿ ಹಿಡಿಯುವ ರಾಜ್ಯೋತ್ಸವ ಪ್ರಶಸ್ತಿಗೆ ಸೂಕ್ತ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಆಹ್ವಾನ ಮಾಡಿದ್ದು, ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ನಾಮನಿರ್ದೇಶನ ಮಾಡಬಹುದಾಗಿದೆ.
ಇದನ್ನೂ ಓದಿ: ಪ್ರಪ್ರಥಮ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಶ್ರೀಗಳ ಆಯ್ಕೆ
ನಾಮನಿರ್ದೇಶನ ಮಾಡಲು (ಇಂದಿನಿಂದ)ಅಕ್ಟೋಬರ್ 1 ರಿಂದ ಪೋರ್ಟಲ್‍ನಲ್ಲಿ ಅವಕಾಶ ಕಲ್ಪಿಸಿದ್ದು, ಮುಂದಿನ 15 ದಿನಗಳವರೆಗೆ ಆನ್‍ಲೈನ್ ಮೂಲಕ ಹೆಸರು ನೊಂದಾಯಿಸಬಹುದು. ಅ.15 ನಾಮನಿರ್ದೇಶನಕ್ಕೆ ಕಡೆಯ ದಿನವಾಗಿದೆ.
ನಾಮನಿರ್ದೇಶನ ಮಾಡಲು https://Sevasindhu.karnataka.gov.in ಸೇವಾಸಿಂಧು ಪೋರ್ಟಲ್‍ನ ವೆಬ್‍ಸೈಟ್ ಸಂಪರ್ಕಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.