Connect with us

    ‘ಶಿವಶರಣರ ವಚನ ಸಂಪುಟ’ಕ್ಕೆ ನವ್ಯ ಸ್ಪರ್ಶ; ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಮುಖ್ಯ ಸುದ್ದಿ

    ‘ಶಿವಶರಣರ ವಚನ ಸಂಪುಟ’ಕ್ಕೆ ನವ್ಯ ಸ್ಪರ್ಶ; ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಚಿತ್ರದುರ್ಗ ನ್ಯೂಸ್‌.ಕಾಂ

    ತರಳಬಾಳು ಬೃಹನ್ಮಠದಿಂದ ಸಿದ್ಧಪಡಿಸಿದ್ದ ‘ಶಿವಶರಣರ ವಚನ ಸಂಪುಟ’ದ ಮೊಬೈಲ್‌ ಆ್ಯಪ್ ಶೀಘ್ರದಲ್ಲೇ ಹೊಸ ವಿನ್ಯಾಸ, ಆಕರ್ಷಕ ಹಾಗೂ ಬಳಕೆದಾರ ಸ್ನೇಹಿಯಾಗಲಿದೆ. ಈ ವಿಚಾರವನ್ನು ಖುದ್ದು ರಿಗೆರೆಯ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಕ್ತರಿಗೆ ಹಂಚಿಕೊಂಡಿದ್ದಾರೆ.

    2022 ಮೇ 3 ರಂದು ಬೆಂಗಳೂರಿನ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಸಿರಿಗೆರೆಯ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆ್ಯಪ್‌ ಬಿಡುಗಡೆ ಮಾಡಿದ್ದರು.

    ಆ್ಯಪ್‌ನಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಜೇಡರ ದಾಸಿಮಯ್ಯ ಸೇರಿ 255 ಕ್ಕೂ ವಚನಕಾರರ 21 ಸಾವಿರ ವಚನಗಳು ಈ ಆ್ಯಪ್‌ ಮೂಲಕ ವಚನಾಸಕ್ತರ ಬೆರಳ ತುದಿಗೆ ಸೇರಿದ್ದವು. ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಜಿ.ಮಧು ಈ ಆ್ಯಪ್ ಸಿದ್ಧಪಡಿಸಿದ್ದರು. ಇದೀಗ ಈ ಆ್ಯಪ್‌ಗೆ ಹೊಸ ಸ್ಪರ್ಶ ನೀಡಲಾಗುತ್ತಿದೆ.

    ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಸರಳ ಆಚರಣೆ; ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

    ಸಿರಿಗೆರೆಯಲ್ಲಿ ತರಳಬಾಳು ಕ್ರೀಡಾ ಮೇಳದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ ಹೊಸ ವರ್ಷಕ್ಕೆ ಹೊಸ ಸಂಗತಿಯನ್ನು ತಿಳಿಸುತ್ತಾ, ‘ಶಿವಶರಣರ ವಚನ ಸಂಪುಟ’ದ ಮೊಬೈಲ್‌ ಆ್ಯಪ್ ಅನ್ನು ಇನ್ನಷ್ಟು ಆಕರ್ಷಕ ಹಾಗೂ ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗುತ್ತಿದೆ’ ಎಂದರು.

    ‘ವಚನ ಸಂಪುಟವನ್ನು ಇನ್ನಷ್ಟು ಸರಳಗೊಳಿಸಬೇಕಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ತಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆ್ಯಪ್‌ನಲ್ಲಿರುವ ವಚನಗಳಿಗೆ ವಿಡಿಯೊ, ಅನಿಮೇಷನ್‌, ಸಂಗೀತ ಅಳವಡಿಸುವ ಪ್ರಕ್ರಿಯೆಯನ್ನು ತಂತ್ರಜ್ಞರು ಸರಳಗೊಳಿಸಲಿದ್ದಾರೆ’ ಎಂದು ತಿಳಿಸಿದರು.

    ‘ತರಳಬಾಳು ಟೆಕ್‌’ ಎಂಬ ತಂಡವೊಂದನ್ನು ರೂಪಿಸಿಕೊಂಡು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಈ ತಂಡದಲ್ಲಿ ದಾವಣಗೆರೆಯ ಅನುಭವ ಮಂಟಪ ಶಾಲೆಯಲ್ಲಿ ಓದಿದ ನಮ್ಮ ಯುವಕರೇ ಇರುವುದು ನಮಗೆ ಸಂತಸ ತಂದಿದೆ’ ಎಂದರು.

    ಹುಬ್ಬಳ್ಳಿಯ ಆರೂಢಜ್ಯೋತಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ನ್ಯಾಯಾಧೀಶೆ ಬಿ.ಎಸ್.ವಿನುತಾ, ಪತ್ರಕರ್ತ ಶಶಿಕಾಂತ ಯಡಹಳ್ಳಿ, ದಾವಣಗೆರೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಜಿ.ಕರಿಸಿದ್ದಪ್ಪ, ತಿಪ್ಪೇಸ್ವಾಮಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ.ಎಸ್.ಜತ್ತಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top